ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ವಿಶ್ವದ ಅತ್ಯಂತ ಧಡೂತಿ ಖೈದಿಯ ಒಂದು ದಿನದ ವೆಚ್ಚವೆಷ್ಟು ಗೊತ್ತಾ? ಕೇಳಿದ್ರೆ ತಲೆತಿರುಗುತ್ತೆ!

Austria’s Heaviest Prisoner: 29 ವರ್ಷದ ಆಸ್ಟ್ರೀಯಾದ ವ್ಯಕ್ತಿಯೊಬ್ಬ ವಿಶ್ವದ ಅತ್ಯಂತ ಧಡೂತಿ ಖೈದಿ ಎಂಬ ಹೆಸರು ಪಡೆದಿದ್ದಾನೆ. 300 ಕೆಜಿ ತೂಕ ಹೊಂದಿರುವ ಈತನ ಒಂದು ದಿನದ ಆರೈಕೆಗೆ 1 ಲಕ್ಷ ರೂ.ಗೂ ಹೆಚ್ಚು ವೆಚ್ಚವಾಗುತ್ತಿದೆ. ಇದನ್ನು ಸರ್ಕಾರವೇ ಭರಿಸುತ್ತಿದೆ. ಇದು ಸಾರ್ವಜನಿಕ ವಲಯದಲ್ಲಿ ಭಾರಿ ಟೀಕೆಗೆ ಗುರಿಯಾಗಿದೆ. ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಯೆನ್ನಾ: ಆಸ್ಟ್ರಿಯಾ (Austria) ದೇಶವು ವಿಚಿತ್ರ ಪ್ರಕರಣವೊಂದರಿಂದ ಭಾರಿ ಸುದ್ದಿಯಲ್ಲಿದೆ. ಅದೇನೆಂದರೆ ಈ ದೇಶದ ಖೈದಿಯೊಬ್ಬ ಅತ್ಯಂತ ಧಡೂತಿ (Heaviest Prisoner) ದೇಹವನ್ನು ಹೊಂದಿದ್ದಾನಂತೆ. 300 ಕೆಜಿ ತೂಕ ಹೊಂದಿರುವ ಈತನ ಒಂದು ದಿನದ ಆರೈಕೆಗೆ 1 ಲಕ್ಷ ರೂ.ಗೂ ಹೆಚ್ಚು ವೆಚ್ಚವಾಗುತ್ತಿದೆ. ಇದನ್ನು ಸರ್ಕಾರವೇ ಭರಿಸುತ್ತಿದ್ದು, ದುಬಾರಿ ಖೈದಿಯಾಗಿದ್ದಾನೆ.

ಹೌದು, 29 ವರ್ಷದ ಈ ವ್ಯಕ್ತಿ ವಿಶ್ವದ ಅತ್ಯಂತ ಧಡೂತಿ ಖೈದಿ ಎಂಬ ಹೆಸರು ಪಡೆದಿದ್ದಾನೆ. ಸರಾಸರಿ ಖೈದಿಯ ನಿರ್ವಹಣೆಗಿಂತ 10 ಪಟ್ಟು ಹೆಚ್ಚು ವೆಚ್ಚವನ್ನು ಈತನೊಬ್ಬನಿಗೆ ಭರಿಸಲಾಗುತ್ತಿದೆ. ಈ ಪ್ರಕರಣವು ನಾಗರಿಕರಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಮಾದಕವಸ್ತು ಕಳ್ಳಸಾಗಣೆಯಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಯ ಮೇಲೆ ತೆರಿಗೆದಾರರ ಹಣವನ್ನು ಏಕೆ ಇಷ್ಟೊಂದು ಖರ್ಚು ಮಾಡಲಾಗುತ್ತಿದೆ ಎಂದು ಜನರು ಪ್ರಶ್ನಿಸಿದ್ದಾರೆ.

ಸ್ಥಳೀಯ ಮಾಧ್ಯಮಗಳ ಪ್ರಕಾರ, ಪೊಲೀಸರು ಆತನ ಮನೆಯಿಂದ 45 ಕೆಜಿ ಗಾಂಜಾ, 2 ಕೆಜಿ ಕೊಕೇನ್, ಸುಮಾರು 2 ಕೆಜಿ ಆಂಫೆಟಮೈನ್ ಮತ್ತು 2,000 ಕ್ಕೂ ಹೆಚ್ಚು ಎಕ್ಸ್ಟಸಿ ಮಾತ್ರೆಗಳನ್ನು ವಶಪಡಿಸಿಕೊಂಡ ನಂತರ ಆತನನ್ನು ಬಂಧಿಸಲಾಯಿತು. ಆರಂಭದಲ್ಲಿ ಈತನನ್ನು ವಿಯೆನ್ನಾದ ಜೋಸೆಫ್‌ಸ್ಟಾಡ್ ಜೈಲಿನಲ್ಲಿ ಇರಿಸಲಾಗಿತ್ತು. ಆದರೆ, ಅವನ ಹಾಸಿಗೆ ಆತನ ಅಧಿಕ ತೂಕದ ಕಾರಣದಿಂದ ಕೆಳಗ್ಗೆ ಬಾಗಿದ ನಂತರ ಅವನನ್ನು ಬೇರೆಡೆಗೆ ಸ್ಥಳಾಂತರಿಸಬೇಕಾಯಿತು. ನಂತರ ಅವನನ್ನು ರಾಜಧಾನಿಯಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಕಾರ್ನ್ಯೂಬರ್ಗ್ ಜೈಲಿಗೆ ವರ್ಗಾಯಿಸಲಾಯಿತು.

ಈ ಧಡೂತಿ ದೇಹ ಹೊಂದಿರುವ ಖೈದಿಗೆ ಕಸ್ಟಮ್-ವೆಲ್ಡ್ ಕೋಟ್ ಮತ್ತು ದಾದಿಯರಿಂದ 24/7 ದಿನದ ಆರೈಕೆ ಸೇರಿದಂತೆ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಸಾಮಾನ್ಯ ಖೈದಿಗೆ €180 (ರೂ. 6,000) ಹೋಲಿಸಿದರೆ, ಅವರ ಆರೈಕೆಗೆ ದಿನಕ್ಕೆ ಸುಮಾರು ಯುರೋ 1,800 (ಭಾರತೀಯ ರೂ. ಗಳಲ್ಲಿ ಸುಮಾರು 1.6 ಲಕ್ಷ ರೂ.) ವೆಚ್ಚವಾಗುತ್ತದೆ ಎಂದು ಹೇಳಲಾಗಿದೆ.

ಖೈದಿಯ ಮೇಲೆ ಮಾಡುತ್ತಿರುವ ಈ ಖರ್ಚು ಸಾರ್ವಜನಿಕರ ಕೋಪಕ್ಕೆ ಕಾರಣವಾಗಿದೆ. ಸಾಮಾನ್ಯ ನಾಗರಿಕರು ವೈದ್ಯರ ಅಪಾಯಿಂಟ್‍ಮೆಂಟ್‌ಗಾಗಿ ತಿಂಗಳುಗಟ್ಟಲೆ ಕಾಯಬೇಕಾದಾಗ, ಅಪರಾಧಿಗಳಿಗೆ ಇಷ್ಟೊಂದು ದೊಡ್ಡ ಮೊತ್ತವನ್ನು ಖರ್ಚು ಮಾಡುವುದು ಅಸಮಾಧಾನವನ್ನು ಹೆಚ್ಚಿಸಿದೆ ಎಂದು ಪತ್ರಿಕಾ ವರದಿಯೊಂದು ತಿಳಿಸಿದೆ. ಖೈದಿಗಾಗಿ ಇಷ್ಟೊಂದು ದುಬಾರಿ ಮೊತ್ತವನ್ನು ವ್ಯಯಿಸುತ್ತಿರುವುದು ಭಾರಿ ಟೀಕೆಗೆ ಗುರಿಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಈ ಸುದ್ದಿಯನ್ನೂ ಓದಿ: Viral News: ಫೇಸ್‌ಬುಕ್‌ನಲ್ಲಿ ಫ್ರೆಂಡ್‌ಶಿಪ್‌- ಬಾಲಕಿಯ ಭೇಟಿಗೆ 100 ಕಿ.ಮೀ ಪ್ರಯಾಣಿಸಿದ- ಆಮೇಲೆ ನಡೆದಿದ್ದೇ ಬೇರೆ!