ಸಾಕುಪ್ರಾಣಿಗಳ ವಿಡಿಯೊಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ.ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ವಿಡಿಯೊದಲ್ಲಿ, ಮುದ್ದಾದ ಬೆಕ್ಕೊಂದು ತನ್ನದೇ ಆದ ಶೈಲಿಯಲ್ಲಿ ದೇವಾಲಯದಲ್ಲಿ ಭಕ್ತರನ್ನು ಸ್ವಾಗತಿಸುವುದು ಸೆರೆಯಾಗಿದೆ. "ಮಿಯಾಂವ್" ಎಂದು ಕೂಗುವ ಮೂಲಕ ಬೆಕ್ಕು ಜನರೊಂದಿಗೆ ಹೈ-ಫೈವ್ ಮಾಡಿದೆ. ಇದನ್ನು ಕಂಡು ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ.ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video)ಆಗಿದೆ. ಚೀನಾದ ಕ್ಸಿಯುವಾನ್ ದೇವಾಲಯದಲ್ಲಿರುವ ಈ ಬೆಕ್ಕು, ದೇವಾಲಯಕ್ಕೆ ಬಂದ ಭಕ್ತರ ಜೊತೆ ತನ್ನದೇ ರೀತಿಯಲ್ಲಿ ಮಾತನಾಡುವ ಮುದ್ದಾದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದೆ. ಜನರು ತನ್ನ ಕಡೆಗೆ ಬರುವುದನ್ನು ನೋಡುತ್ತದ್ದಂತೆ, ಬೆಕ್ಕು ಹೈ-ಫೈವ್ ಮಾಡುವ ಮೂಲಕ ಅವರನ್ನು ದಂಗಾಗಿಸಿದೆ.
ವೈರಲ್ ಆದ ವಿಡಿಯೊದಲ್ಲಿ, ಬೆಕ್ಕು ಭಕ್ತರನ್ನು ಒಬ್ಬೊಬ್ಬರಾಗಿ ಸ್ವಾಗತಿಸುವುದು ಸೆರೆಯಾಗಿದೆ. ಭಕ್ತರು ಬೆಕ್ಕಿನ ಬಳಿಗೆ ಸಮೀಪಿಸುತ್ತಿದ್ದಂತೆ ಅದು ತನ್ನ ಕಾಲುಗಳನ್ನು ಎತ್ತಿ ಹೈಪೈ ಮಾಡಿದೆ. ಭಕ್ತರಿಗೆ ಆಶೀರ್ವಾದ ಮಾಡಿದೆ ಮತ್ತು ಪೋಟೊಗಳಿಗೆ ಪೋಸ್ ನೀಡಿದೆ. ಚೀನಾ ಮೂಲದ ಇನ್‌ಸ್ಟಾಗ್ರಾಂ ಪೇಜ್ ಈ ವಿಡಿಯೊವನ್ನು ಪೋಸ್ಟ್ ಮಾಡಿದೆ. ಇದು ನೆಟ್ಟಿಗರ ಹೃದಯವನ್ನು ಗೆದ್ದು ಈಗಾಗಲೇ 20,000 ಕ್ಕೂ ಹೆಚ್ಚು ಲೈಕ್‍ಗಳನ್ನು ಪಡೆದಿದೆ.
ಸಾಕು ಪ್ರಾಣಿಗಳು ತಮ್ಮ ವಿಭಿನ್ನ ವರ್ತನೆಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೆಷನ್ ಆಗಿದ್ದು ಇದೇ ಮೊದಲಲ್ಲ. ಈ ಹಿಂದೆ ಅಮೆರಿಕದ ಮೈನೆಯಲ್ಲಿ 2018 ರಲ್ಲಿ ಹಸ್ಕಿ ಎಂಬ ನಾಯಿ ಕಟ್ಟಡದ ಮುಖಮಂಟಪದ ಛಾವಣಿಯಲ್ಲಿ ಸಿಲುಕಿದ್ದಾಗ ಅಲ್ಲಿಗೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಅದನ್ನು ರಕ್ಷಿಸಿದ್ದಾರೆ. ನಾಯಿ ತನ್ನನ್ನು ರಕ್ಷಿಸಿದ ಸಿಬ್ಬಂದಿಯ ಕೆನ್ನೆಗಳ ಮೇಲೆ ಚುಂಬಿಸಿ ಆ ವ್ಯಕ್ತಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿತು. ಈ ಹಳೆಯ ವಿಡಿಯೊ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಕಾಣಿಸಿಕೊಂಡು ವೈರಲ್ ಆಗಿದೆ.
ಈ ಸುದ್ದಿಯನ್ನೂ ಓದಿ:Self Harming: ಮುದ್ದಿನ ಬೆಕ್ಕು ಸತ್ತಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ
ಇತ್ತೀಚೆಗೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ 35 ವರ್ಷದ ಮಹಿಳೆಯೊಬ್ಬಳು ತಾನು ಸಾಕಿದ ಪ್ರೀತಿಯ ಬೆಕ್ಕಿನ ಸಾವನ್ನು ಸಹಿಸಿಕೊಳ್ಳಲಾಗದೆ ಅದು ಸತ್ತ ಮೂರನೇ ದಿನಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಕ್ಕು ಸತ್ತ ಮೂರು ದಿನಗಳವರೆಗೂ ಆಕೆ ಅದನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದಳು. ಕೊನೆಗೆ ಆಕೆಯೂ ಸಾವಿಗೆ ಶರಣಾಗಿದ್ದಾಳೆ. ಬೆಕ್ಕು ಇಲ್ಲದ ತನ್ನ ಜೀವನವನ್ನು ಊಹಿಸಲು ಸಾಧ್ಯವಾಗದೇ ಪೂಜಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಆತ್ಮಹತ್ಯೆಯ ಬಗ್ಗೆ ಮಾಹಿತಿ ಪಡೆದ ಪೊಲೀಸ್ ಅಧಿಕಾರಿಗಳು ಮೃತ ದೇಹವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ಶುರುಮಾಡಿದ್ದಾರೆ.