ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ದೈತ್ಯ ಹೆಬ್ಬಾವನ್ನು ಬರಿಗೈಯಲ್ಲಿ ಹೊತ್ತೊಯ್ದ ಮಕ್ಕಳು! ಬೆಚ್ಚಿಬೀಳಿಸುವ ವಿಡಿಯೊ ವೈರಲ್

ಉತ್ತರಪ್ರದೇಶದ ಬುಲಂದ್‌ಶಹರ್‌ನ ಜಹಾಂಗೀರಾಬಾದ್ ಪ್ರದೇಶದಲ್ಲಿ ಗ್ರಾಮಕ್ಕೆ ನುಗ್ಗಿದ 15 ಅಡಿ ಉದ್ದದ ದೈತ್ಯ ಹೆಬ್ಬಾವನ್ನು ಗ್ರಾಮದ ಮಕ್ಕಳು ಬರಿಗೈಯಲ್ಲಿ ಸುಮಾರು 3 ಕಿ.ಮೀ ದೂರ ಎತ್ತಿಕೊಂಡು ಹೋಗಿ ಕಾಡಿಗೆ ಬಿಟ್ಟಿದ್ದಾರೆ. ಈ ಸಾಹಸಮಯ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದೆ.

ಲಖನೌ: ಉತ್ತರಪ್ರದೇಶದ ಬುಲಂದ್‌ಶಹರ್‌ನ ಜಹಾಂಗೀರಾಬಾದ್ ಪ್ರದೇಶದಲ್ಲಿ ಗ್ರಾಮಸ್ಥರು ಮತ್ತು ಮಕ್ಕಳು 15 ಅಡಿ ಉದ್ದದ ದೈತ್ಯ ಹೆಬ್ಬಾವನ್ನು ತಮ್ಮ ಬರಿ ಕೈಗಳಿಂದ ಹೊತ್ತೊಯ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಬುಲಂದ್‌ಶಹರ್-ಅನುಪ್‌ಶಹರ್ ರಸ್ತೆಯಲ್ಲಿ ಸುಮಾರು 3 ಕಿ.ಮೀ ದೂರ ಮಕ್ಕಳು ಹೆಬ್ಬಾವನ್ನು(Python)ಕೈಯಲ್ಲಿ ಹಿಡಿದುಕೊಂಡು ಹೋದ ಸಾಹಸಮಯ ದೃಶ್ಯವನ್ನು ವಿಡಿಯೊದಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ಈಗ ವೈರಲ್(Viral Video) ಆಗಿದ್ದು, ಮಕ್ಕಳ ಸಾಹಸವನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ಆದರೆ ಅರಣ್ಯ ಇಲಾಖೆ ಅಥವಾ ಯಾವುದೇ ಅಧಿಕಾರಿಗಳಿಗೆ ಈ ಬಗ್ಗೆ ವರದಿ ಮಾಡಲಾಗಿಲ್ಲ ನಂತರ, ಹೆಬ್ಬಾವನ್ನು ಕಾಡಿನಲ್ಲಿ ಬಿಡಲಾಯಿತು ಎಂಬುದಾಗಿ ತಿಳಿದುಬಂದಿದೆ.

ಜಹಾಂಗೀರಾಬಾದ್ ಕೊಟ್ವಾಲಿ ಪ್ರದೇಶದ ಡುಂಗ್ರಾ ಜಾಟ್ ಗ್ರಾಮದ ಬಳಿ ಹೆಬ್ಬಾವೊಂದು ಇದ್ದಕ್ಕಿದ್ದಂತೆ ಕಾಣಿಸಿಕೊಂಡಾಗ ಗ್ರಾಮಸ್ಥರು ಭಯಭೀತರಾಗಿದ್ದರು.ನಂತರ ಮಕ್ಕಳ ಗುಂಪೊಂದು ಹೆಬ್ಬಾವನ್ನು ಬರಿ ಕೈಯಲ್ಲಿ ಹಿಡಿದುಕೊಂಡು ಕಾಡಿಗೆ ಬಿಟ್ಟು ಬಂದಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...



ಮಕ್ಕಳು ಹೆಬ್ಬಾವನ್ನು ಕಾಡಿಗೆ ಬಿಡಲು ಹೋಗುವಾಗ, ಅವರು ಹೆಬ್ಬಾವಿನ ಸುತ್ತಲೂ ಪೋಸ್ ನೀಡುತ್ತಾ ಫೋಟೊಗಳನ್ನು ಕ್ಲಿಕ್ ಮಾಡಿಕೊಂಡಿದ್ದಾರೆ. ಮಕ್ಕಳು ಸ್ವತಃ ಹೆಬ್ಬಾವನ್ನು 3 ಕಿ.ಮೀ. ದೂರ ಹೊತ್ತುಕೊಂಡು ಹೋಗಿ ಕಾಡಿಗೆ ಬಿಟ್ಟಿದ್ದಾರೆ.

ಆಶ್ಚರ್ಯಕರ ಸಂಗತಿಯೆಂದರೆ ಗ್ರಾಮದ ಯಾರೊಬ್ಬರು ಅರಣ್ಯ ಇಲಾಖೆಗೆ ಅಥವಾ ಬುಲಂದ್‌ಶಹರ್ ಪೊಲೀಸ್ ಠಾಣೆಯ ಯಾವುದೇ ಅಧಿಕಾರಿಗಳಿಗೆ ಮಾಹಿತಿ ನೀಡಿಲ್ಲ. ವರದಿಗಳ ಪ್ರಕಾರ, ಎಸ್‌ಡಿಎಂ ಅನುಪ್‌ಶಹರ್ ಪ್ರಿಯಾಂಕಾ ಗೋಯಲ್ ಅವರು ಈ ವಿಷಯ ಇನ್ನೂ ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಮಹಿಳೆ ಮೈಮೇಲೆ ಸಿಡಿದ ಪೆಟ್ರೋಲ್‍; ಅಷ್ಟಕ್ಕೂ ಆಗಿದ್ದೇನು?

ಕಾಣೆಯಾದವನು ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆ!

ಇಂಡೋನೇಷ್ಯಾದ ಆಗ್ನೇಯ ಸುಲಾವೆಸಿಯ ಬಟೌಗಾದ ಮಜಾಪಹಿತ್ ಗ್ರಾಮದ 63 ವರ್ಷದ ರೈತ ಲಾ ನೋಟಿ ಅವನ ಮೃತದೇಹ ಎಂಟು ಮೀಟರ್ ಉದ್ದದ ಹೆಬ್ಬಾವಿನ ಹೊಟ್ಟೆಯೊಳಗೆ ಪತ್ತೆಯಾಗಿದೆ. ಆತ ಬೆಳಿಗ್ಗೆಯಿಂದ ತನ್ನ ಜಮೀನಿನಿಂದ ಮನೆಗೆ ಮರಳದಿದ್ದಾಗ ಆತ ಕಾಣೆಯಾಗಿದ್ದಾನೆ ಎಂದು ಅವನ ಕುಟುಂಬದವರಿಗೆ ತಿಳಿಯಿತು. ಪ್ಲಾಟೇಶನ್ ಪ್ರದೇಶದಲ್ಲಿ ಹುಡುಕಿದಾಗ, ನಿವಾಸಿಗಳು ಹೆಬ್ಬಾವೊಂದರ ಹೊಟ್ಟೆಯಲ್ಲಿ ಮನುಷ್ಯನಿರುವುದನ್ನು ಕಂಡುಕೊಂಡಿದ್ದರು. ನಂತರ ಅದರ ಹೊಟ್ಟೆಯನ್ನು ಕತ್ತರಿಸಿ ನೋಡಿದಾಗ, ರೈತನ ಶವ ಒಳಗೆ ಇರುವುದನ್ನು ನೋಡಿ ಅವರು ಆಘಾತಕ್ಕೊಳಗಾದರು. ನಂತರ ಅಧಿಕಾರಿಗಳು, ಸ್ಥಳೀಯರೊಂದಿಗೆ ಸೇರಿ, ಎಲ್‌ಎನ್‌ನ ಶವವನ್ನು ಅವನ ಮನೆಗೆ ಸಾಗಿಸಿದ್ದಾರೆ. ವರದಿ ಪ್ರಕಾರ, ಈ ಪ್ರದೇಶದಲ್ಲಿ ವಿಶೇಷವಾಗಿ ಮಳೆಗಾಲದಲ್ಲಿ, ಜಾನುವಾರುಗಳ ಮೇಲೆ ದಾಳಿ ಮಾಡುವ ಹೆಬ್ಬಾವುಗಳು ಆಗಾಗ್ಗೆ ಕಂಡುಬರುತ್ತಿದ್ದವು. ಆದರೆ ನಿವಾಸಿಯೊಬ್ಬರನ್ನು ಹೆಬ್ಬಾವು ನುಂಗಿದ ಘಟನೆ ಇದೇ ಮೊದಲ ಬಾರಿಗೆ ನಡೆದಿದ್ದು ಎನ್ನಲಾಗಿದೆ.