Viral Video: ಮಹಿಳೆ ಮೈಮೇಲೆ ಸಿಡಿದ ಪೆಟ್ರೋಲ್; ಅಷ್ಟಕ್ಕೂ ಆಗಿದ್ದೇನು?
ಟೆಕ್ಸಾಸ್ ಮೂಲದ ಪಾಕಿಸ್ತಾನಿ ಮಹಿಳೆ ರೂಹಿ ಅನ್ವರ್ ಪೆಟ್ರೋಲ್ ಬಂಕ್‍ನಲ್ಲಿ ತನ್ನ ಕಾರಿಗೆ ಪೆಟ್ರೋಲ್ ತುಂಬುವಾಗ ಅನಿರೀಕ್ಷಿತವಾಗಿ ಪೆಟ್ರೋಲ್ ಆಕೆಯ ದೇಹದ ಮೇಲೆ ಬಿದ್ದಿದೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಸಾಂದರ್ಭಿಕ ಚಿತ್ರ.

ಆಸ್ಟಿನ್: ಅಮೆರಿಕದ ಟೆಕ್ಸಾಸ್‌ನಲ್ಲಿ ಪಾಕಿಸ್ತಾನಿ ಮಹಿಳೆಯೊಬ್ಬಳ ಮೈಮೇಲೆ ಪೆಟ್ರೋಲ್ ಚೆಲ್ಲಿರುವ ವಿಡಿಯೊ ವೂರಲ್ ಆಗಿದೆ. ಇತ್ತೀಚೆಗೆ ಪೆಟ್ರೋಲ್ ಬಂಕ್‌ನಲ್ಲಿ ಕಾರಿಗೆ ಪೆಟ್ರೋಲ್ ತುಂಬಿಸುವಾಗ ಇದ್ದಕ್ಕಿದ್ದಂತೆ ಅದು ಆಕೆಯ ಮೈ ಮೇಲೆ ಬಿದ್ದಿದೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಆಕೆ ತನ್ನ ದಿನನಿತ್ಯದ ಕೆಲಸದಲ್ಲಿ ಎದುರಾದ ಈ ಕೆಟ್ಟ ಘಟನೆಯ ಬಗ್ಗೆ ತನ್ನ ಅನುಭವವನ್ನು ಹಂಚಿಕೊಂಡಿದ್ದಾಳೆ.
ಈಕೆ ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಪೆಟ್ರೋಲ್ ತುಂಬುವ ಸ್ಥಳದಲ್ಲಿ ಸೆರೆಹಿಡಿಯಲಾದ ಈ ದೃಶ್ಯಗಳಲ್ಲಿ ಅನಿರೀಕ್ಷಿತ ಅಪಘಾತವೊಂದರಲ್ಲಿ ಆಕೆ ಕಾರಿಗೆ ಪೆಟ್ರೋಲ್ ತುಂಬಿಸಿಕೊಳ್ಳುತ್ತಿರುವಾಗ ಆಕೆಯ ಮುಖ ಮತ್ತು ದೇಹದಾದ್ಯಂತ ಪೆಟ್ರೋಲ್ ಚಿಮ್ಮುವುದನ್ನು ಸೆರೆಹಿಡಿಯಲಾಗಿದೆ. ಅದೃಷ್ಟವಶಾತ್, ಕಾರಿನಲ್ಲಿ ನೀರಿನ ಬಾಟಲಿ ಇದ್ದಿದ್ದರಿಂದ ಸಂಭವಿಸಬಹುದಾದ ದೊಡ್ಡ ಅಪಾಯವೊಂದು ತಪ್ಪಿದೆ. ಪೆಟ್ರೋಲ್ ಸಿಡಿದ ತಕ್ಷಣ ಅವರು ನೀರಿನಿಂದ ತೊಳೆದಿದ್ದರಿಂದ ಸಂಭವಿಸಬಹುದಾದ ದೊಡ್ಡ ದುರಂತ ತಪ್ಪಿದೆ ಎಂದು ಊಲಗಳು ತಿಳಿಸಿವೆ.
ವಿಡಿಯೊ ಇಲ್ಲಿದೆ ನೋಡಿ...
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೊ ಮೂಲಕ ತನ್ನ ಅನುಭವವನ್ನು ರೂಹಿ ಅನ್ವರ್ ಹಂಚಿಕೊಂಡಿದ್ದಾರೆ. ಮುಂದೆ ಯಾರಿಗಾದರೂ ಸಂಭವಿಸಬಹುದಾದ ಈ ರೀತಿಯ ಅಪಘಾತಗಳು ತಡೆಯಲು ಈ ವಿಡಿಯೊವನ್ನು ಹಂಚಿಕೊಂಡಿರುವುದಾಗಿ ತಿಳಿಸಿದ್ದಾಳೆ. ದಿನನಿತ್ಯದ ಕೆಲಸಗಳ ಸಮಯದಲ್ಲಿ ದಯವಿಟ್ಟು ಜಾಗರೂಕರಾಗಿರಿ. ಅದರಲ್ಲಿಯೂ ಪೆಟ್ರೋಲ್ ಬಂಕ್‌ನಲ್ಲಿ ಎಚ್ಚರವಾಗಿರಿ ಎಂದು ಹೇಳಿದ್ದಾಳೆ.
ಈ ಸುದ್ದಿಯನ್ನೂ ಓದಿ:Viral Video: ಈಕೆಯ ಧೈರ್ಯಕ್ಕೊಂದು ಸಲಾಂ! ಬುಸುಗುಡುತ್ತಿದ್ದ ಕಾಳಿಂಗ ಸರ್ಪವನ್ನು ಒಂದೇ ಏಟಿಗೆ ಹಿಡಿದ ಮಹಿಳಾ ಅಧಿಕಾರಿ-ವಿಡಿಯೊ ವೈರಲ್
ಈ ವಿಡಿಯೊಗೆ ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ. ಒಬ್ಬರು, "ನೀವು ಸುರಕ್ಷಿತವಾಗಿರುವುದಕ್ಕೆ ಸಂತೋಷವಾಗಿದೆ" ಎಂದು ಬರೆದಿದ್ದಾರೆ. ಮತ್ತೊಬ್ಬರು, "ಓ ದೇವರೇ... ಇದು ತುಂಬಾ ಭಯಾನಕವಾಗಿದೆʼʼ ಹೇಳಿದ್ದಾರೆ. ಇನ್ನೊಬ್ಬರು "ನೀವು ಆ ಸಮಯದಲ್ಲಿ ರೆಕಾರ್ಡ್ ಮಾಡುತ್ತಿದ್ದೀರಾ? ಎಂದರೆ ನೀವು ಅದನ್ನು ಉದ್ದೇಶಪೂರ್ವಕವಾಗಿ ಮಾಡಿದ್ದೀರಿ" ಎಂದಿದ್ದಾರೆ.