ಗುರುಗ್ರಾಮ: ಎಡೆಬಿಡದೆ ಭಾರಿ ಮಳೆಯಾಗುತ್ತಿರುವ (Heavy Rain) ಪರಿಣಾಮ ಹರಿಯಾಣದ ಗುರುಗ್ರಾಮ ನಗರ ಜಲಾವೃತವಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ, ನರಸಿಂಗ್‌ಪುರ ಬಳಿಯ ದೆಹಲಿ-ಜೈಪುರ (Delhi-Jaipur) ಎಕ್ಸ್‌ಪ್ರೆಸ್‌ವೇ (ಎನ್‌ಎಚ್ -48) ನಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಮಳೆ ನೀರು ನಿಂತು (Waterlogging) ಸ್ವಿಮ್ಮಿಂಗ್ ಪೂಲ್‍ನಂತಾಗಿರುವ ರಸ್ತೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ದ್ವಾರಕಾ ಎಕ್ಸ್‌ಪ್ರೆಸ್‌ವೇಯ ಸರ್ವೀಸ್ ರಸ್ತೆಯೂ ನೀರಿನಿಂದ ತುಂಬಿದೆ. ಇನ್ನೂ ಅರ್ಧದಷ್ಟು ಉದ್ಘಾಟನೆಯಾಗದ ಈ ಎಕ್ಸ್‌ಪ್ರೆಸ್‌ವೇಯನ್ನು 9 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಪ್ರತಿ ಕಿಲೋಮೀಟರ್‌ಗೆ 250 ಕೋಟಿ ರೂ. ವೆಚ್ಚವಾಗುತ್ತದೆ. ಮಾಹಿತಿಯ ಪ್ರಕಾರ, ನರಸಿಂಗ್‌ಪುರ, ಮಾತಾ ರಸ್ತೆ, ಸೆಕ್ಟರ್ 14, 17, 22, 23, 4, 7, 9, 10 ಮತ್ತು ಬಸ್ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ನಿಂತಿರುವುದರಿಂದ ಜನರು ಭಾರಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನೀರಿನಿಂದ ತುಂಬಿದ ರಸ್ತೆಗಳು ಈಜುಕೊಳದಂತೆ ಕಾಣುತ್ತಿದ್ದು, ಇದರ ವಿಡಿಯೊಗಳನ್ನು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಆಡಳಿತವನ್ನು ಪ್ರಶ್ನಿಸಿದ್ದಾರೆ.
ಎಕ್ಸ್‌ನಲ್ಲಿ ವಿಡಿಯೊ ಹಂಚಿಕೊಂಡ ಬಳಕೆದಾರರೊಬ್ಬರು, “ಮಳೆಯ ನಂತರ ನಗರದ ಬೀದಿಗಳು ಸಂಪೂರ್ಣವಾಗಿ ನೀರಿನಿಂದ ಮುಚ್ಚಿಹೋಗುತ್ತಿವೆ. ಇದು ಒಂದು ಬಾರಿಯ ಸಮಸ್ಯೆಯಲ್ಲ. ಇದಕ್ಕೆ ಕೇವಲ ತಾತ್ಕಾಲಿಕ ಪರಿಹಾರಗಳನ್ನು ಮಾತ್ರ ಮಾಡಲಾಗುತ್ತದೆ, ಆದರೆ ಇದುವರೆಗೂ ಶಾಶ್ವತ ಪರಿಹಾರವನ್ನು ಮಾಡಲಾಗಿಲ್ಲ. ದಯವಿಟ್ಟು ಈ ಸಮಸ್ಯೆಯನ್ನು ಶಾಶ್ವತವಾಗಿ ಸರಿಪಡಿಸಲು ತುರ್ತು ಕ್ರಮ ಕೈಗೊಳ್ಳಿ” ಎಂದು ಅಧಿಕಾರಿಗಳಿಗೆ ವಿನಂತಿಸಿದ್ದಾರೆ.
ವಿಡಿಯೊ ವೀಕ್ಷಿಸಿ:
@DC_Gurugram After even a short rain, the streets get completely blocked with waterlogging in Surat Nagar. This isn’t a one-time issue — only temporary fixes are done, no permanent solutions! Please take urgent action to fix this problem for good. #GurgaonFloods #Waterlogging pic.twitter.com/IZIi3cAIRk
— Citizen VoiceIN (@RootTech2) August 12, 2025
ಪಕ್ಕದ ಭೂಮಿಯಲ್ಲಿ ನೀರನ್ನು ಬಿಡುವ ಬದಲು ನೀರನ್ನು ಹಿಡಿದಿಟ್ಟುಕೊಳ್ಳಬಹುದಾದ ಮಳೆನೀರು ಕೊಯ್ಲು ಮೂಲಸೌಕರ್ಯವನ್ನು ರಚಿಸುವುದು ಉತ್ತಮ ಪರಿಹಾರ. ನಾವು ಶಾಶ್ವತ ಪರಿಹಾರಗಳತ್ತ ಏಕೆ ಗಮನಹರಿಸಬಾರದು? ಎಂದು ಮತ್ತೊಬ್ಬ ಬಳಕೆದಾರರು ಪ್ರಶ್ನಿಸಿದ್ದಾರೆ.
ಗುರುಗ್ರಾಮದ ಹೆಚ್ಚಿನ ಭಾಗವು ನೀರಿನಲ್ಲಿ ಮುಳುಗಿದೆ. ಸಾಕಷ್ಟು ಮಳೆಯಾಗಿದ್ದರೂ ಕುಡಿಯುವ ನೀರಿನ ಕೊರತೆಯಿದೆ. ಭೂಮಿ ಒಣಗಿದೆ. ಜಲಮೂಲಗಳನ್ನು ಪುನಃಸ್ಥಾಪಿಸಿ ಮತ್ತು ಪ್ರತಿ ಹನಿಯನ್ನೂ ಕೊಯ್ಲು ಮಾಡಿ ಎಂದು ಮಗದೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ದೆಹಲಿ-ನೋಯ್ಡಾದಲ್ಲಿ ಭಾರಿ ಮಳೆಯಾಗುತ್ತಿದ್ದು, ಗುರುಗ್ರಾಮದ ರಸ್ತೆಗಳು ನದಿಗಳಾಗಿ ಮಾರ್ಪಟ್ಟಿವೆ. ಹವಾಮಾನ ಇಲಾಖೆಯಿಂದ ಈಗ ಈ ಎಚ್ಚರಿಕೆ ನೀಡಲಾಗಿದೆ ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Viral News: ಮದುವೆ ಮನೆಯಲ್ಲಿ ವೇಟರ್‌ಗಳಿಗೆ ಊಟ ಬಡಿಸಿದ ವಧು-ವರ: ಮಾನವೀಯತೆ ಗೆದ್ದಿತು ಎಂದ ನೆಟ್ಟಿಗರು