ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಮದುವೆ ಮನೆಯಲ್ಲಿ ವೇಟರ್‌ಗಳಿಗೆ ಊಟ ಬಡಿಸಿದ ವಧು-ವರ: ಮಾನವೀಯತೆ ಗೆದ್ದಿತು ಎಂದ ನೆಟ್ಟಿಗರು

ಬಹುತೇಕ ಪ್ರತಿ ಮದುವೆ ಮನೆಯಲ್ಲಿ ಬಂದ ಅತಿಥಿಗಳ ಉಪಚಾರ ಮಾಡಿದ್ರೆ, ಇಲ್ಲೊಂದೆಡೆ ವಧು ಹಾಗೂ ವರನು ತಮಗೆ ಸೇವೆ ಸಲ್ಲಿಸುವ ವೇಟರ್‌ಗಳನ್ನು ಉಪಚರಿಸಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿ ವೇಟರ್‌ಗಳು ಊಟ ಮಾಡುವಂತೆ ವಧು-ವರ ನೋಡಿಕೊಂಡಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮನಗೆದ್ದಿದೆ.

ಮದುವೆಯಲ್ಲಿ ವೇಟರ್‌ಗಳಿಗೆ ಊಟ ಬಡಿಸಿದ ವಧು-ವರ

Priyanka P Priyanka P Aug 13, 2025 11:08 PM

ದೆಹಲಿ: ಮದುವೆಗಳ ಅನೇಕ ವಿಡಿಯೊಗಳು ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುತ್ತವೆ. ವಧು-ವರರ ನೃತ್ಯ, ಸಂಬಂಧಿಕರ ಡ್ಯಾನ್ಸ್‌ ಸೇರಿದಂತೆ ಇತರ ವಿಡಿಯೊಗಳು ಹರಿದಾಡುತ್ತವೆ (Viral Video). ಇದೀಗ ಈ ವಿವಾಹ ಕಾರ್ಯಕ್ರಮವೊಂದರ ಹೃದಯಸ್ಪರ್ಶಿ ವಿಡಿಯೊ ವೈರಲ್ ಆಗಿದೆ. ಬಹುತೇಕ ಪ್ರತಿ ಮದುವೆ ಮನೆಯಲ್ಲಿ ಬಂದ ಅತಿಥಿಗಳ ಉಪಚಾರ ಮಾಡಿದ್ರೆ, ಇಲ್ಲೊಂದೆಡೆ ವಧು ಹಾಗೂ ವರನು ತಮಗೆ ಸೇವೆ ಸಲ್ಲಿಸುವ ವೇಟರ್‌ಗಳನ್ನು ಉಪಚರಿಸಿದ್ದಾರೆ.

ಹೌದು, ಮದುವೆ ಕಾರ್ಯಕ್ರಮದಲ್ಲಿ ವೇಟರ್‌ಗಳು ಊಟ ಮಾಡುವಂತೆ ವಧು-ವರ ನೋಡಿಕೊಂಡಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮನಗೆದ್ದಿದೆ. ತಮ್ಮ ವಿಶೇಷ ದಿನದಂದು ಮಾನವೀಯತೆ ಮೆರೆದಿದ್ದಕ್ಕಾಗಿ ಎಲ್ಲರೂ ವಧು-ವರನನ್ನು ಹೊಗಳಿದ್ದಾರೆ. ಮೊದಲಿಗೆ ಅವರು ಹಿಂಜರಿದರೂ, ವರನು ಅವರನ್ನು ಅತಿಥಿಗಳಿಗಾಗಿ ಇಟ್ಟಿದ್ದ ಮೇಜಿನ ಬಳಿ ಕೂರಿಸಿದನು. ನಂತರ, ಅವನು ತನ್ನ ವಧುವಿನೊಂದಿಗೆ ಅವರಿಗೆ ಆಹಾರವನ್ನು ಬಡಿಸಿದ್ದಾನೆ. ಇತರರಿಗೆ ಆಹಾರ ಒದಗಿಸುವವರು ತಮ್ಮ ಸ್ವಂತ ಅಗತ್ಯಗಳನ್ನು ಕಡೆಗಣಿಸುತ್ತಾರೆ ಎಂಬುದನ್ನು ಈ ವಿಡಿಯೊ ನೆನಪಿಸುತ್ತದೆ.

ವಿಡಿಯೊ ವೀಕ್ಷಿಸಿ:

ವಧು-ವರರ ಈ ನಡೆ ಸಾಮಾಜಿಕ ಮಾಧ್ಯಮದಲ್ಲಿ ಹಲವರ ಹೃದಯ ಗೆದ್ದಿದೆ. ಮಾನವೀಯತೆ ಗೆದ್ದಿತು ಎಂದು ಒಬ್ಬ ಬಳಕೆದಾರ ಹೇಳಿದರೆ, ಮತ್ತೊಬ್ಬ ಬಳಕೆದಾರರು ಬಹಳ ಅದ್ಭುತವಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ನಾನು ವೇಟರ್ ಆಗಿ ಕೆಲಸ ಮಾಡುತ್ತಿದ್ದ ನನ್ನ ದಿನಗಳು ನನಗೆ ನೆನಪಿದೆ. ಯಾರೂ ಸರಿಯಾಗಿ ಮಾತನಾಡುತ್ತಿರಲಿಲ್ಲ. ಬರುವ ಸ್ವಲ್ಪ ಹಣಕ್ಕಾಗಿ ಇತರರ ಕಟು ಮಾತುಗಳನ್ನು ಸಹ ಕೇಳಿಕೊಳ್ಳಬೇಕಾಗುತ್ತಿತ್ತು. ವರ ಈ ರೀತಿ ನಡೆಸಿಕೊಂಡಿದ್ದು, ನಿಜಕ್ಕೂ ಶ್ಲಾಘನೀಯ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಕಾರ್ಯಕ್ರಮಗಳಲ್ಲಿ ಹಲವು ಮಂದಿ ಸಾಮಾನ್ಯವಾಗಿ ವೇಟರ್‌ಗಳ ಜತೆ ತಾರತಮ್ಯ ಮಾಡುತ್ತಾರೆ. ಸರಿಯಾಗಿ ವರ್ತಿಸುವುದಿಲ್ಲ. ಆದರೆ ಈ ದಂಪತಿಯ ದಯೆ ಶ್ಲಾಘನೀಯ ಎಂದು ಮತ್ತೊಬ್ಬ ಬಳಕೆದಾರ ಪ್ರತಿಕ್ರಿಯಿಸಿದ್ದಾರೆ.