ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ನಡುರಸ್ತೆಯಲ್ಲಿ ವೃದ್ಧನ ಮೇಲೆ ಹಸುವಿನ ಡೆಡ್ಲಿ ಅಟ್ಯಾಕ್‌! ಈ ಶಾಕಿಂಗ್‌ ವಿಡಿಯೊ ನೋಡಿ

Elderly Man Seriously Injured: ವೃದ್ಧ ವ್ಯಕ್ತಿಯೊಬ್ಬರ ಮೇಲೆ ಹಸು ದಾಳಿ ಮಾಡಿದ ಪರಿಣಾಮ ಅವರು ಗಂಭೀರ ಗಾಯಗೊಂಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಕಲ್ಯಾಣಪುರದಲ್ಲಿ ನಡೆದಿದೆ. ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಲಖನೌ: ವೃದ್ಧರೊಬ್ಬರ ಮೇಲೆ ಹಸುವೊಂದು ದಾಳಿ ಮಾಡಿದ ಪರಿಣಾಮ ಆ ವ್ಯಕ್ತಿ ಗಂಭೀರ ಗಾಯಗೊಂಡ ಆಘಾತಕಾರಿ ಘಟನೆ ಉತ್ತರ ಪ್ರದೇಶದ (Uttar Pradesh) ಕಲ್ಯಾಣಪುರದಲ್ಲಿ ನಡೆದಿದೆ. ರಸ್ತೆಯ ಮಧ್ಯದಲ್ಲೇ ಹಸು ದಾಳಿ ಮಾಡಿರುವ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಈ ಮನಕಲಕುವ ದೃಶ್ಯದಲ್ಲಿ ಹಸುವು ಆ ವ್ಯಕ್ತಿಯನ್ನು ಬೆನ್ನಟ್ಟಿ ಪದೇ ಪದೇ ಕೆಡವಿ, ಆತನನ್ನು ತೀವ್ರವಾಗಿ ಗಾಯಗೊಳಿಸುವುದನ್ನು ಸೆರೆಹಿಡಿಯಲಾಗಿದೆ.

ಸ್ಥಳೀಯ ವರದಿಗಳ ಪ್ರಕಾರ, ವೃದ್ಧ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಹಸು ದಾಳಿಯ ಈ ಘಟನೆಯು ದಾರಿಹೋಕರಲ್ಲಿ ಭೀತಿಯನ್ನುಂಟುಮಾಡಿದೆ. ವೃದ್ಧನ ಮೇಲೆ ಹಸು ಆಕ್ರಮಣ ತೋರುತ್ತಿರುವಾಗ ಕೆಲವು ದಾರಿಹೋಕರು ಮಧ್ಯಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಆದರೆ ಹಸುವಿನ ಆಕ್ರಮಣದಿಂದಾಗಿ ಹಿಂದೆ ಸರಿಯಬೇಕಾಯಿತು.

ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ, ಭಾರಿ ಆಕ್ರೋಶಕ್ಕೆ ಕಾರಣವಾಯ್ತು. ಭವಿಷ್ಯದಲ್ಲಿ ಇಂತಹ ದಾಳಿಗಳನ್ನು ತಡೆಗಟ್ಟಲು ಉತ್ತಮ ಪ್ರಾಣಿ ನಿಯಂತ್ರಣ ಕ್ರಮಗಳು ಮತ್ತು ತ್ವರಿತ ಕ್ರಮ ಕೈಗೊಳ್ಳಬೇಕೆಂದು ಅನೇಕರು ಕರೆ ನೀಡಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದ್ದು, ಅನೇಕ ಬಳಕೆದಾರರು ದಾಳಿಯ ತೀವ್ರತೆಯ ಬಗ್ಗೆ ಅಪನಂಬಿಕೆ ಮತ್ತು ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ವಿಡಿಯೊ ವೀಕ್ಷಿಸಿ:



ಹಸು ಏನು ಸೇಡು ತೀರಿಸಿಕೊಳ್ಳುತ್ತಿದೆ? ಎಂದು ಬಳಕೆದಾರರಲ್ಲಿ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಸುಗಳು ಸಾಮಾನ್ಯವಾಗಿ ಸೌಮ್ಯ ಪ್ರಾಣಿಗಳು. ವೃದ್ಧ ವ್ಯಕ್ತಿ ಅದಕ್ಕೆ ಉದ್ದೇಶಪೂರ್ವಕವಾಗಿ ಪ್ರಚೋದಿಸಿರಬಹುದು ಎಂದು ಎಂದು ಮತ್ತೊಬ್ಬ ಬಳಕೆದಾರರು ಊಹಿಸಿದರು. ಈ ಬಗ್ಗೆ ತನಿಖೆಯನ್ನು ವಿಶ್ವಾಸಾರ್ಹ ತನಿಖಾ ಸಂಸ್ಥೆಯಿಂದ ಮಾಡಿಸಬೇಕು. ವೃದ್ಧನ ಮೇಲೆ ಏಕೆ ದಾಳಿ ಮಾಡಲಾಯಿತು? ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಬೈಕ್‍ನಿಂದ ವೃದ್ಧ ವ್ಯಕ್ತಿಯೊಬ್ಬರು ಇಳಿಯುತ್ತಿದ್ದಂತೆ ಏಕಾಏಕಿ ಹಸು ದಾಳಿ ಮಾಡಿತ್ತು. ಅವರನ್ನು ತನ್ನ ಕೊಂಬಿನಿಂದ ಕೊಡವಿ ನೆಲಕ್ಕೆ ಎತ್ತಿ ಹಾಕಿತ್ತು. ಜನನಿಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಸ್ಥಳದಲ್ಲಿದ್ದವರು ಮಧ್ಯಪ್ರವೇಶಿಸಿದರೂ ಹಸು ಆ ವ್ಯಕ್ತಿಯ ಮೇಲೆ ದಾಳಿ ಮಾಡುವುದನ್ನು ಬಿಟ್ಟಿರಲಿಲ್ಲ. ಕೊನೆಗೂ ಹರಸಾಹಸಪಟ್ಟು ಹಸುವನ್ನು ದೂರ ತಳ್ಳಲಾಯಿತು. ಅಷ್ಟೊತ್ತಿಗಾಗಲೇ ವೃದ್ಧ ವ್ಯಕ್ತಿ ಗಂಭೀರ ಗಾಯಗೊಂಡು, ರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಇದು ಸಾರ್ವಜನಿಕರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: Viral Video: ನಾಲ್ಕನೇ ಮಹಡಿಗೆ ಹತ್ತಿದ ಹಸು, ಜನರಿಗೆ ಫುಲ್‌ ಶಾಕ್‌! ವಿಡಿಯೊ ಇಲ್ಲಿದೆ