ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ನಾಲ್ಕನೇ ಮಹಡಿಗೆ ಹತ್ತಿದ ಹಸು, ಜನರಿಗೆ ಫುಲ್‌ ಶಾಕ್‌! ವಿಡಿಯೊ ಇಲ್ಲಿದೆ

Cow Climbs: ಹಸುವೊಂದು ಕಟ್ಟಡದ ನಾಲ್ಕನೇ ಮಹಡಿಗೆ ಹತ್ತಿ, ಸ್ಥಳೀಯರಲ್ಲಿ ಭೀತಿ ಮೂಡಿಸಿರುವ ಘಟನೆ ಉತ್ತರ ಪ್ರದೇಶದ ಲಖನೌದಲ್ಲಿ ಸೋಮವಾರ ನಡೆದಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಾಲ್ಕನೇ ಮಹಡಿಯಲ್ಲಿ ಹಸುವನ್ನು ನೋಡಿದ ನಂತರ, ನಿವಾಸಿಗಳು ಹಸು ತಮ್ಮ ಮೇಲೆ ಬೀಳಬಹುದೆಂದು ಭಯಪಟ್ಟರು.

ನಾಲ್ಕನೇ ಮಹಡಿಗೆ ಹತ್ತಿದ ಹಸು, ಜನರಿಗೆ ಫುಲ್‌ ಶಾಕ್‌! ವಿಡಿಯೊ ಇಲ್ಲಿದೆ

Priyanka P Priyanka P Aug 5, 2025 4:12 PM

ಲಖನೌ: ಹಸುವೊಂದು ಕಟ್ಟಡದ ನಾಲ್ಕನೇ ಮಹಡಿಗೆ ಹತ್ತಿ, ಸ್ಥಳೀಯರಲ್ಲಿ ಭೀತಿ ಮೂಡಿಸಿರುವ ಘಟನೆ ಉತ್ತರ ಪ್ರದೇಶದ ಲಖನೌದಲ್ಲಿ ಸೋಮವಾರ ನಡೆದಿದೆ. ಹಸು ಹತ್ತಿದ್ದು ತಿಳಿದಾಕ್ಷಣ ಜನರು ಸ್ಥಳೀಯ ಕಾರ್ಪೊರೇಟರ್‌ಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಹಸುವನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ವರದಿ ಪ್ರಕಾರ, ಅಲಿ ಕಾಲೋನಿ (ಮಲಾಹಿ ಟೋಲಾ -2 ವಾರ್ಡ್) ನಲ್ಲಿರುವ ಮಂಜು ಟಂಡನ್ ಧಾಲ್ ಬಳಿ ಈ ಘಟನೆ ವರದಿಯಾಗಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. @SantoshGaharwar ಎಂಬ ಹೆಸರಿನ ವ್ಯಕ್ತಿಯೊಬ್ಬರು ಈ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ನಾಲ್ಕನೇ ಮಹಡಿಯಲ್ಲಿ ಹಸುವನ್ನು ನೋಡಿದ ನಂತರ, ನಿವಾಸಿಗಳು ಹಸು ತಮ್ಮ ಮೇಲೆ ಬೀಳಬಹುದೆಂದು ಭಯಪಟ್ಟರು.

ಸ್ಥಳೀಯರು ಘಟನೆಯ ಬಗ್ಗೆ ಕಾರ್ಪೊರೇಟರ್ ಗುಲ್ಶನ್ ಅಬ್ಬಾಸ್ ರಿಜ್ವಿಗೆ ಮಾಹಿತಿ ನೀಡಿದ್ದು, ಅವರು ಲಖನೌ ಮುನ್ಸಿಪಲ್ ಕಾರ್ಪೊರೇಷನ್‌ಗೆ ಕರೆ ಮಾಡಿ ಹಸುವನ್ನು ಕೆಳಗಿಳಿಸಲು ಒತ್ತಾಯಿಸಿದರು. ಹಸು ನಾಲ್ಕನೇ ಮಹಡಿಗೆ ಹೇಗೆ ಏರಿತು ಎಂದು ಯಾರಿಗೂ ತಿಳಿದಿಲ್ಲ" ಎಂದು ಕಾರ್ಪೊರೇಟರ್ ರಿಜ್ವಿ ಹೇಳಿದ್ದಾರೆ.

ವಿಡಿಯೊ ವೀಕ್ಷಿಸಿ:



ನಂತರ, ಎಲ್‌ಎಂಸಿಯ ಪ್ರಾಣಿ ಕಲ್ಯಾಣ ಅಧಿಕಾರಿ ಡಾ. ಅಭಿನವ್ ವರ್ಮಾ ಅವರಿಗೂ ಮಾಹಿತಿ ನೀಡಲಾಯಿತು. ಅವರು ನಂತರ ಜಾನುವಾರು ಹಿಡಿಯುವ ತಂಡವನ್ನು ಕಳುಹಿಸಿ, ಹಸುವನ್ನು ಕೆಳಗಿಳಿಸಿದರು. “ಹಸುವನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲಾಯಿತು. ಮಾತ್ರವಲ್ಲದೆ, ಆ ಪ್ರದೇಶದಲ್ಲಿ ಭೀತಿ ಅಥವಾ ಯಾವುದೇ ಅಪಘಾತವನ್ನು ತಡೆಗಟ್ಟಲು ಪರಿಸ್ಥಿತಿಯನ್ನು ಬಹಳ ನಾಜೂಕಾಗಿ ನಿಭಾಯಿಸಲಾಗಿದೆ” ಎಂದು ಎಲ್‌ಎಂಸಿ ತಮ್ಮ ಹೇಳಿಕೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: International Yoga Day:‌ ಸಿಕ್ಕಾಪಟ್ಟೆ ವೈರಲ್‌ ಆಯ್ತು ಶ್ವಾನದ ಈ ಯೋಗಾಸನ; ವಿಡಿಯೊ ವೈರಲ್!

ಸುರಕ್ಷಿತವಾಗಿ ಕೆಳಗಿಳಿಸಿದ ನಂತರ, ಆ ಹಸುವನ್ನು ನಾಗರಿಕ ಸಂಸ್ಥೆಯ ಗೋಶಾಲೆಗೆ ಕಳುಹಿಸಲಾಯಿತು. “ಎಲ್‌ಎಂಸಿ ತಂಡವು ಅಂತಹ ಪ್ರಕರಣಗಳಿಗೆ ಸಕ್ರಿಯವಾಗಿ ಸ್ಪಂದಿಸುತ್ತದೆ ಮತ್ತು ಸಂಕಷ್ಟದಲ್ಲಿರುವ ಪ್ರಾಣಿಗಳ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತದೆ” ಎಂದು ವರ್ಮಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.