ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಮನೆ ಬಾಡಿಗೆಗೆ ಇದ್ದ ಯುವತಿಗೆ ಅಶ್ಲೀಲ ಸಿನಿಮಾಗಳ ಡಿವಿಡಿ ತೋರಿಸಿದ ಮಾಲೀಕ!

Landlord Shows Porn Collection: ಮುಂಬೈನಲ್ಲಿ ಯುವತಿಯೊಬ್ಬಳಿಗೆ ಅಪಾರ್ಟ್‌ಮೆಂಟ್ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದ ಮಾಲೀಕ ನಿರ್ವಹಣಾ ಭೇಟಿಗೆ ಆಗಮಿಸಿದ್ದ. ಈ ವೇಳೆ ಮಾಲೀಕ ಆಕೆಗೆ ಅಶ್ಲೀಲ ದೃಶ್ಯವಿರುವ ಸಂಗ್ರಹವನ್ನು ತೋರಿಸಿದ್ದಾಗಿ ಯುವತಿ ಆರೋಪಿಸಿದ್ದಾಳೆ. ಇದನ್ನು ಯುವತಿಯು ರೆಡ್ಡಿನ್‍ನಲ್ಲಿ ಪೋಸ್ಟ್‌ ಮಾಡಿದ್ದಾಳೆ.

ಮುಂಬೈ: ಅಪಾರ್ಟ್‌ಮೆಂಟ್‌ವೊಂದರಲ್ಲಿ (apartment) ಬಾಡಿಗೆಗಿರುವ 26 ವರ್ಷದ ಯುವತಿಯೊಬ್ಬರು, ನಿರ್ವಹಣಾ ಭೇಟಿಯ ಸಮಯದಲ್ಲಿ ತನ್ನ ಮನೆ ಮಾಲೀಕರು ಅಶ್ಲೀಲ ದೃಶ್ಯವಿರುವ ಸಂಗ್ರಹವನ್ನು (Porn Collection) ತೋರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನು ರೆಡ್ಡಿಟ್‌ನಲ್ಲಿ ಪೋಸ್ಟ್ (Reddit Post) ಮಾಡಲಾಗಿದ್ದು, ಅಲ್ಲಿ ಆಕೆ ಘಟನೆಯನ್ನು ವಿವರಿಸಿದ್ದಾರೆ. ಅಲ್ಲದೆ ಈ ಕುರಿತು ಬಳಕೆದಾರರಿಂದ ಸಲಹೆ ಕೇಳಿದ್ದಾರೆ.

ಮುಂಬೈನ ಯುವತಿಯ ಪೋಸ್ಟ್ ಪ್ರಕಾರ, 40 ರ ಹರೆಯದ ಮನೆ ಮಾಲೀಕರು ಭಾನುವಾರ ದುರಸ್ತಿ ಕೆಲಸ ಮಾಡುವ ನೆಪದಲ್ಲಿ ಅವರ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿದ್ದರು. ಭೇಟಿಯ ಸಮಯದಲ್ಲಿ, ಅವರು ಹಳೆಯ ಹಾರ್ಡ್ ಡ್ರೈವ್‌ಗಳನ್ನು ಟ್ಯಾಬ್ಲೆಟ್‌ಗೆ ಸಂಪರ್ಕಿಸಲು ಸಹಾಯ ಕೇಳಿದರು. ಅವರು ಚಲನಚಿತ್ರಗಳ ಸಂಗ್ರಹವನ್ನು ಉಲ್ಲೇಖಿಸುತ್ತಿದ್ದಾರೆಂದು ಭಾವಿಸಿ, ಆ ಯುವತಿ ಅವರಿಗೆ ಸಹಾಯ ಮಾಡಿದಳು.

ನಂತರ ಮನೆ ಮಾಲೀಕರು ಡಿವಿಡಿಗಳಿಂದ ತುಂಬಿದ ಚೀಲವನ್ನು ಹೊರತೆಗೆದರು. ನಂತರ ಕ್ಷಮಿಸಿ ನಾನು ನಿಮಗೆ ಇದನ್ನೆಲ್ಲ ತೋರಿಸಬಾರದು ಎಂದು ಮನೆ ಮಾಲೀಕ ಹೇಳಿದರಂತೆ. ಮೊದಲಿಗೆ, ಅವು ಸಾಮಾನ್ಯ ಚಲನಚಿತ್ರಗಳ ಡಿವಿಡಿ ಇರಬಹುದು ಎಂದು ಯುವತಿ ಭಾವಿಸಿದ್ದಳು. ಆದರೆ ಮಾಲೀಕನು ಮಹಿಳೆಗೆ ಕೆಲವು ಕವರ್‌ಗಳನ್ನು ತೋರಿಸಿದ ನಂತರ ಡಿಸ್ಕ್‌ಗಳಲ್ಲಿ ಅಶ್ಲೀಲ ಚಿತ್ರಗಳಿವೆ ಎಂದು ಅರಿತುಕೊಂಡಳು.

landlord

ನಂತರ ಅವನು ಆ ಡಿವಿಡಿಗಳ ಸಂಗ್ರಹವನ್ನು ಹೊರತೆಗೆದು ಕವರ್‌ಗೆ ಹಾಕಿದನು. ಕೊನೆಯದರಲ್ಲಿ ಅಸಭ್ಯ ಚಿತ್ರಣವಿತ್ತು. ಹೀಗಾಗಿ ಅದು ಸಾಮಾನ್ಯ ಚಲವಚಿತ್ರಗಳ ಡಿವಿಡಿಯಲ್ಲ, ಅವು ಅಶ್ಲೀಲ ಸಿನಿಮಾಗಳ ಡಿವಿಡಿ ಎಂಬುದು ತನಗೆ ತಿಳಿಯಿತು ಎಂದು ಯುವತಿ ಹೇಳಿದ್ದಾಳೆ. ವಿಚಾರ ತಿಳಿದ ಕೂಡಲೇ ನನಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯಲಿಲ್ಲ. ಹೀಗಾಗಿ ನಾನು ಬೇರೆಡೆ ನೋಡಿದೆ. ನಾನು ಏನು ಮಾಡಬೇಕು? ಎಂದು ಯುವತಿಯು ಇತರ ರೆಡ್ಡಿಟ್ ಬಳಕೆದಾರರಲ್ಲಿ ಕೇಳಿದಳು (Viral News).

ಯುವತಿಯು ಮನೆ ಮಾಲೀಕನ ವಿರುದ್ಧ ಔಪಚಾರಿಕ ದೂರು ದಾಖಲಿಸಲು ಯೋಜಿಸುತ್ತಿದ್ದಾಳೆಯೇ ಅಥವಾ ಇಲ್ಲವೇ ಎಂಬುದನ್ನು ಸೂಚಿಸಲಿಲ್ಲ. ಈ ಪೋಸ್ಟ್ ಮಾತ್ರ ಸಾಮಾಜಿಕ ಮಾಧ್ಯದಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. ಅನೇಕರು ಈ ವಿಷಯವನ್ನು ಪೊಲೀಸರಿಗೆ ವರದಿ ಮಾಡಬೇಕೆಂದು ಅಥವಾ ತಕ್ಷಣ ಕಾನೂನು ಸಲಹೆ ಪಡೆಯಬೇಕೆಂದು ತಿಳಿಸಿದ್ದಾರೆ.

ಅವನನ್ನು ಒಬ್ಬಂಟಿಯಾಗಿ ಮನೆಯೊಳಗೆ ಬಿಡಬೇಡಿ. ಅವನು ಮನೆ ಕಡೆಗೆ ಬಂದಾಗ ಮನೆಗೆ ಯಾರನ್ನಾದರೂ ಬರಲು ಹೇಳಿ ಎಂದು ರೆಡ್ಡಿಟ್ ಪೋಸ್ಟ್‌ನಲ್ಲಿ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಮಾಲೀಕ ತನಗೆ ತಿಳಿಸದೆ ಬರುತ್ತಾನೆ. ಅಲ್ಲದೆ ನಾನು ಒಬ್ಬಂಟಿಯಾಗಿ ವಾಸಿಸುತ್ತೇನೆ. ಹೀಗಾಗಿ ಯಾರನ್ನಾದರೂ ಬರಲು ಕೇಳಲು ಸಾಧ್ಯವಾಗುವುದಿಲ್ಲ ಎಂದು ಆ ಯುವತಿ ಬರೆದಿದ್ದಾರೆ.

ಇದನ್ನೂ ಓದಿ: Viral News: ವಿವಾಹಿತ ಪುರುಷನೊಂದಿಗೆ ಪ್ರೇಮ; ಪತ್ನಿಯ ಜೀವನಾಂಶಕ್ಕೆ 3.7 ಕೋಟಿ ರೂ. ನೀಡಿದ ಮಹಿಳೆ, ಆಮೇಲಾಗಿದ್ದೇ ರೋಚಕ