ನವದೆಹಲಿ: ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡು ಭಾರೀ ದುರಂತ ಸಂಭವಿಸಿ ಅನೇಕ ಜೀವಗಳು ಬಲಿಯಾದ ಘಟನೆ ಈ ಹಿಂದೆ ಸಾಕಷ್ಟು ನಡೆದಿದೆ. ಇದೀಗ ವಿಡಿಯೋ ಒಂದು ವೈರಲ್ ಆಗಿದ್ದು ಕೂದಲೆಳೆಯ ಅಂತರದಲ್ಲಿ ಸಿಲಿಂಡರ್ ಸ್ಫೋಟದಿಂದ ಪಾರಾಗಿದ್ದಾರೆ. ಮನೆಯಲ್ಲಿ ಎಲ್‍ಪಿಜಿ ಸಿಲಿಂಡರ್ ಗ್ಯಾಸ್ ಸೋರಿಕೆ(Gas Cylinder Leak)ಯಿಂದಾಗಿ ಮನೆಯೊಳಗೆ ಬೆಂಕಿ ಕಾಣಿಸಿಕೊಂಡು ಮಹಿಳೆ ಮತ್ತು ಪುರುಷ ಪಾರಾಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೈರಲ್ ಆದ ವಿಡಿಯೊದಲ್ಲಿ ಎಲ್‌ಪಿಜಿ ಸಿಲಿಂಡರ್‌ಗೆ ಅಳವಡಿಸಲಾದ ಪೈಪ್‌ನಿಂದ ಗ್ಯಾಸ್ ಲೀಕ್ ಆಗುತ್ತಿರುವುದನ್ನು ತಡೆಯಲು ಪ್ರಯತ್ನಿಸುತ್ತಿರುವುದು ಸೆರೆಯಾಗಿದೆ.
ಗ್ಯಾಸ್ ಲೀಕ್ ಜಾಸ್ತಿ ಆದಾಗ ಅದನ್ನು ತಡೆಯಲು ಸಾಧ್ಯವಾಗದೇ ಮಹಿಳೆ ಸಹಾಯಕ್ಕಾಗಿ ಹೊರಗೆ ಓಡಿದ್ದಾಳೆ. ಕೊನೆಗೆ ಪುರುಷನೊಬ್ಬ ಬಂದು ಅದನ್ನು ತಡೆಯಲು ಪ್ರಯತ್ನಿಸಿದ್ದಾನೆ. ಆವಾಗ ಮನೆ ತುಂಬಾ ಗ್ಯಾಸ್ ತುಂಬಿಕೊಂಡು ಅಡುಗೆಮನೆಯೊಳಗೆ ಭಾರೀ ಸ್ಫೋಟ ಸಂಭವಿಸಿದೆ.
ವಿಡಿಯೊ ಇಲ್ಲಿದ ನೋಡಿ...
ಅದೃಷ್ಟವಶಾತ್, ಗ್ಯಾಸ್ ಲೀಕ್ ಆಗುವ ಸಮಯದಲ್ಲಿ ಮಹಿಳೆ ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ತೆರೆದಿಟ್ಟಿದ್ದರಿಂದ ಸ್ಫೋಟದ ಪರಿಣಾಮ ಕಡಿಮೆಯಾಯಿತು. ಮಹಿಳೆ ಮತ್ತು ಪುರುಷ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಅಬ್ಬಾ...ಎಂಥಾ ದುರಂತ! ನೋಡ ನೋಡ್ತಿದ್ದಂತೆ ಏರ್ ಬಲೂನ್ ಸ್ಫೋಟ- ಶಾಕಿಂಗ್ ವಿಡಿಯೊ ನೋಡಿ
ಈ ಹಿಂದೆ ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ಅಂಗಡಿಯೊಂದರಲ್ಲಿ ಸಂಭವಿಸಿದ ಭಾರೀ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದು, ಎಂಟು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಬಿಕಾನೆರ್ ನಗರದ ಜನನಿಬಿಡ ಕೊತ್ವಾಲಿ ಪೊಲೀಸ್ ಠಾಣೆ ಪ್ರದೇಶದಲ್ಲಿರುವ ಮದನ್ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ಸ್ಫೋಟದಿಂದ ಅಂಗಡಿ ಇದ್ದ ಕಟ್ಟಡಕ್ಕೆ ಹಾನಿಯಾಗಿದೆ. ಸ್ಫೋಟ ಎಷ್ಟು ಪ್ರಬಲವಾಗಿತ್ತೆಂದರೆ, ಮಾರುಕಟ್ಟೆಯ ಮೊದಲ ಮಹಡಿಯ ಛಾವಣಿ ಕುಸಿದು ಬಿದ್ದು, ಡಜನ್‍ಗಟ್ಟಲೆ ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು.