ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಪರ್ವತ ಶಿಖರದಲ್ಲಿ ಬಿರುಗಾಳಿಯ ತೀವ್ರ ಹೊಡೆತಕ್ಕೆ ಸಿಕ್ಕ ಛಾಯಾಗ್ರಾಹಕ; ಭಯಾನಕ ವಿಡಿಯೊ ವೈರಲ್

Man Barely Stands Against Force Winds Storm: ಫ್ರಾನ್ಸ್‌ಗೆ ಬೆಂಜಮಿನ್ ಬಿರುಗಾಳಿ ಬಂದಪ್ಪಳಿಸಿದೆ. ಈ ವೇಳೆ ಪುಯ್ ಡೆ ಲಾ ಟಾಚೆ ಪರ್ವತದ ತುದಿಯಲ್ಲಿ ಛಾಯಾಗ್ರಾಹಕ ಥಾಮಸ್ ಸೌಲೆಟ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯು ನೇರವಾಗಿ ನಿಲ್ಲಲು ಹೆಣಗಾಡುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ.

ಪ್ಯಾರಿಸ್: ಫ್ರಾನ್ಸ್‌ನ ಪುಯ್ ಡೆ ಲಾ ಟಾಚೆ ಪರ್ವತದ ತುದಿಯಲ್ಲಿ ಬೆಂಜಮಿನ್ ಬಿರುಗಾಳಿಯ (Storm Benjamin) ಬೀಸುವ ಸಮಯದಲ್ಲಿ ವ್ಯಕ್ತಿಯೊಬ್ಬರು ನೇರವಾಗಿ ನಿಲ್ಲಲು ಹೆಣಗಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದ್ದು, ಪ್ರಕೃತಿಯ ಭಯಾನಕ ಶಕ್ತಿಯನ್ನು ಅನಾವರಣಗೊಳಿಸಿದೆ. ಛಾಯಾಗ್ರಾಹಕ ಥಾಮಸ್ ಸೌಲೆಟ್ ಎಂದು ಗುರುತಿಸಲ್ಪಟ್ಟ ಈ ವ್ಯಕ್ತಿ, ಮಧ್ಯ ಫ್ರಾನ್ಸ್‌ನಲ್ಲಿನ ತೀವ್ರ ಹವಾಮಾನವನ್ನು ಎದುರಿಸಿ ಚಂಡಮಾರುತದ ತೀವ್ರತೆಯನ್ನು ದಾಖಲಿಸಿದರು. ಬಿರುಗಾಳಿಯ ತೀವ್ರತೆಗೆ ನಿಲ್ಲಲೂ ಸಾಧ್ಯವಾಗದೆ ಕಷ್ಟಪಟ್ಟಿದ್ದಾರೆ.

ಸಾಹಸ ಛಾಯಾಗ್ರಾಹಕ ಎಂದು ಹೇಳಿಕೊಳ್ಳುವ ಸೌಲೆಟ್ ಈ ಬಗ್ಗೆ ಮಾಹಿತಿ ನೀಡಿ, ವಾಯುವ್ಯ ಮತ್ತು ಮಧ್ಯ ಫ್ರಾನ್ಸ್‌ನಲ್ಲಿ ಬೆಂಜಮಿನ್ ಬಿರುಗಾಳಿ ಅಪ್ಪಳಿಸಿದೆ. ಭಾರಿ ಗಾಳಿ ಮತ್ತು ವಿಪರೀತ ಮಳೆಯಿಂದ ತತ್ತರಿಸಿ 5,350 ಅಡಿ ಎತ್ತರದ (1,630 ಮೀಟರ್) ಶಿಖರವನ್ನು ಏರಿದ್ದೇನೆ. ಶಿಖರವನ್ನು ತಲುಪಿದ ತಕ್ಷಣ, ಚಂಡಮಾರುತದ ತೀವ್ರತೆಯು ಬಹುತೇಕ ಕೊಚ್ಚಿಕೊಂಡು ಹೋಯಿತು ಎಂದಿದ್ದಾರೆ.

ಈಗ ವೈರಲ್ ಆಗಿರುವ ವಿಡಿಯೊದಲ್ಲಿ ಸೌಲೆಟ್ ಕೆಳಕ್ಕೆ ಬಾಗಿ, ನೆಲವನ್ನು ಬಿಗಿಯಾಗಿ ಹಿಡಿದುಕೊಳ್ಳುವುದನ್ನು ಕಾಣಬಹುದು. ತೀವ್ರವಾದ ಗಾಳಿ ಅವನನ್ನು ಹಿಂದಕ್ಕೆ ತಳ್ಳುತ್ತಿದೆ. ಒಂದು ಹಂತದಲ್ಲಿ, ಗಾಳಿಯು ಪರ್ವತಶ್ರೇಣಿಯಾದ್ಯಂತ ಬೀಸುತ್ತಿದ್ದಂತೆ ಅವರು ಬಹುತೇಕ ಕುಸಿದು ಬೀಳುವಂತೆ ಕಂಡಿದ್ದಾರೆ. ಗಾಳಿಯ ವೇಗ ಗಂಟೆಗೆ 187 ಕಿ.ಮೀ (115 ಮೈಲು) ತಲುಪಿತ್ತು. ಇದು ವರ್ಗ 3ರ ಚಂಡಮಾರುತಕ್ಕೆ ಸಮಾನ.

ವಿಡಿಯೊ ವೀಕ್ಷಿಸಿ:



ಇದನ್ನೂ ಓದಿ: Viral Video: ಅರೇ ಇದೆಂಥಾ ಹಬ್ಬ! ಇಲ್ಲಿ ಸೆಗಣಿ ಎರಚೋದೆ ದೀಪಾವಳಿಯ ವಿಶೇಷವಂತೆ

ಬೆಂಜಮಿನ್ ಚಂಡಮಾರುತವು ಫ್ರಾನ್ಸ್‌ನ ಕೆಲವು ಭಾಗಗಳಲ್ಲಿ ಅಪಾಯಕಾರಿ ಗಾಳಿ ಮತ್ತು ಧಾರಾಕಾರ ಮಳೆಯನ್ನು ಸುರಿಸಿದೆ. ಪರಿಣಾಮ ಸಾರಿಗೆ ಅಸ್ತವ್ಯಸ್ತಗೊಂಡಿದ್ದು, ವಿದ್ಯುತ್ ಕಡಿತಗೊಂಡಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಅನಗತ್ಯ ಪ್ರಯಾಣ ಮತ್ತು ಎತ್ತರದ ಪ್ರದೇಶಗಳಿಗೆ ತೆರಳದಂತೆ ನಾಗರಿಕರನ್ನು ಅಧಿಕಾರಿಗಳು ಒತ್ತಾಯಿಸಿದರು.

ಸೌಲೆಟ್ ಸುರಕ್ಷಿತವಾಗಿ ಪಾರಾದರೂ, ಅವರ ವಿಡಿಯೊ ಪ್ರಕೃತಿಯ ಶಕ್ತಿ ಮತ್ತು ಚಂಡಮಾರುತದ ತೀವ್ರತೆಯ ಗಾಳಿಯ ನಡುವೆಯೂ ದೃಶ್ಯವು ಬಹಳ ಕುತೂಹಲಕಾರಿಯಾಗಿದೆ. ಇದು ಹೋರಾಟದಂತೆ ಕಾಣುತ್ತಿಲ್ಲ. ತೀವ್ರ ಗಾಳಿಯು ಹಲಗೆಯಂತೆ ಕಾಣುತ್ತದೆ. ಹಲಗೆಯು ಅವರಿಗೆ ನಿಲ್ಲಲು ನೆರವು ನೀಡುವಂತೆ ಕಾಣಿಸುತ್ತಿದೆ. ಬೆಟ್ ಥಾಮಸ್ ಸೌಲೆಟ್ ಮಾತ್ರ ಅಪಾಯಕಾರಿ ಪರಿಸ್ಥಿತಿಯಲ್ಲೂ ಅದ್ಭುತ ದೃಶ್ಯವನ್ನು ಪಡೆದರು ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಪ್ರಕೃತಿ ತನ್ನ ವೈಭವವನ್ನು ಪ್ರದರ್ಶಿಸುತ್ತಿದೆ. ಶಿಖರವು ಕೇವಲ ಒಂದು ದೃಶ್ಯ ಕಾವ್ಯವಲ್ಲ. ಬದಲಾಗಿ ತೀವ್ರವಾದ ಗಾಳಿಯ ವಿರುದ್ಧದ ಯುದ್ಧ ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.