ಲಂಡನ್: ಲಂಡನ್‌ನ(London) ಟರ್ಕಿಶ್(Turkish) ರಾಯಭಾರಿ ಕಚೇರಿಯ ಹೊರಗೆ ವ್ಯಕ್ತಿಯೊಬ್ಬ ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಕುರಾನ್‌ಗೆ(Quran Dishonor) ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ನಂತರ ಅವನ ಮೇಲೆ ಹಲ್ಲೆ ನಡೆದಿದೆ. ಸ್ಥಳೀಯ ಸುದ್ದಿ ಮಾಧ್ಯಮಗಳ ವರದಿ ಪ್ರಕಾರ ಈ ಆಘಾತಕಾರಿ ಘಟನೆಯು ಗುರುವಾರ(ಫೆ.13) ಮಧ್ಯಾಹ್ನ ನೈಟ್ಸ್‌ಬ್ರಿಡ್ಜ್‌ನಲ್ಲಿರುವ(Knightsbridge) ಟರ್ಕಿ ದೂತಾವಾಸದ ಬಳಿ ನಡೆದಿದೆ . ಸಾಮಾಜಿಕ ಜಾಲತಾಣಗಳಲ್ಲಿ ಆ ಸಂಬಂಧ ವಿಡಿಯೊ ಹರಿದಾಡುತ್ತಿದೆ.
ವ್ಯಕ್ತಿಯೊಬ್ಬ ಮುಸ್ಲಿಮರ ಧರ್ಮಗ್ರಂಥವಾದ ಕುರಾನ್‌ಗೆ ಬೆಂಕಿ ಹಚ್ಚಿ, ಅದು ಉರಿಯುತ್ತಿರುವಾಗ ಅದನ್ನು ಎತ್ತಿ ಹಿಡಿದು ಸಾರ್ವಜನಿಕವಾಗಿ ತೋರಿಸಿದ್ದಾನೆ. ಕಾನ್ಸುಲೇಟ್ ಕಚೇರಿ ಹೊರಗೆ ನಿಂತು ಉರಿಯುತ್ತಿರುವ ಪುಸ್ತಕವನ್ನು ನಂತರ ಅವನು ಬಿಸಾಡಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಹಲ್ಲೆ ನಡೆಸಿದ್ದಾರೆ. ಬಳಿಕ ಆ ವ್ಯಕ್ತಿಯನ್ನು ರಸ್ತೆಯ ಮೇಲೆ ಮಲಗಿಸಿ ಮತ್ತೊಬ್ಬ ವ್ಯಕ್ತಿ ಒದ್ದು ಹಿಂಸೆ ನೀಡಿದ್ದಾನೆ.ಚಾಕುವಿನಿಂದಲೂ ಹಲ್ಲೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ICYMI: Man burns Quran outside London Turkish Consulate, gets stabbed, spat on and kicked by the knifeman
— RT (@RT_com) February 14, 2025
The demonstrator was rushed to the hospital after the attacker was detained pic.twitter.com/jrO4GZZhzL
ನಂತರ ಹಲ್ಲೆಗೊಳಗಾದ ವ್ಯಕ್ತಿಯನ್ನು ನೆರೆಹೊರೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವ್ಯಕ್ತಿಯ ಕೈ ಬೆರಳುಗಳಿಗೆ ಗಾಯವಾಗಿದ್ದು,ಗಂಭೀರ ಗಾಯಗಳಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಕುರಾನ್ ಅನ್ನು ಸುಡಲು ಪ್ರಯತ್ನಿಸಿದ ವ್ಯಕ್ತಿ ಟರ್ಕಿಶ್ ಮೂಲದವನೆಂದು ಹೇಳಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ:Modi-Trump Meet: 5ನೇ ಜನರೇಷನ್ ಜೆಟ್, ಮಿಷನ್ 500, ಮುಂಬೈ ದಾಳಿ ರೂವಾರಿಯ ಗಡಿಪಾರು; ಟ್ರಂಪ್-ಮೋದಿ ಒಪ್ಪಂದಗಳ ಲಿಸ್ಟ್ ಇಲ್ಲಿದೆ
ಕುರಾನ್ ಸುಟ್ಟು ಹಾಕಿದ್ದ ಸಲ್ವಾನ್ ಗುಂಡೇಟಿಗೆ ಬಲಿ!
ಸ್ವೀಡನ್‌ನಲ್ಲಿ ಕುರಾನ್ ಸುಟ್ಟು ಹಾಕಿದ ಕುಖ್ಯಾತಿ ಹೊಂದಿದ್ದ ಇರಾಕ್ ನಿರಾಶ್ರಿತನಾಗಿದ್ದ ಸಲ್ವಾನ್ ಮೊಮಿಕಾ(38) ಎಂಬ ವ್ಯಕ್ತಿ ಇತ್ತೀಚೆಗಷ್ಟೇ ಅಪರಿಚಿತರ ಗುಂಡೇಟಿಗೆ ಬಲಿಯಾಗಿದ್ದಾನು. 2023ರಲ್ಲಿ ಸ್ವೀಡನ್‌ನಲ್ಲಿ ಇಸ್ಲಾಂ ಪವಿತ್ರ ಗ್ರಂಥವಾದ ಕುರಾನ್ ಅನ್ನು ಸುಟ್ಟು ಹಾಕಿದ್ದನು. ಇದರಿಂದ ಸ್ವೀಡನ್ ಮಾತ್ರವಲ್ಲದೆ, ವಿಶ್ವಾದ್ಯಾಂತ ಮುಸ್ಲಿಂ ರಾಷ್ಟ್ರಗಳು ಈತನ ಕೃತ್ಯದ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತಪಡಿಸಿದ್ದವು. ಈ ಕೃತ್ಯದಿಂದ ಇತನು ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದ್ದನು.