Deekshith Nair

Deekshith Nair ಅವರ ಲೇಖನಗಳು
Ski Resort Fire: ಟರ್ಕಿಯ ಸ್ಕೀ ರೆಸಾರ್ಟ್‌ನಲ್ಲಿ ಬೆಂಕಿ ದುರಂತ; 66 ಸಾವು, 51 ಜನರಿಗೆ ಗಂಭೀರ ಗಾಯ ತಾಜಾ ಸುದ್ದಿ

ಟರ್ಕಿ ರೆಸಾರ್ಟ್‌ ಬೆಂಕಿ ದುರಂ; 66 ಜನರ ದಾರುಣ ಸಾವು!

Ski Resort Fire: ಟರ್ಕಿ ದೇಶದ ಪ್ರಖ್ಯಾತ ಸ್ಕೀ ರೆಸಾರ್ಟ್‌ನಲ್ಲಿರುವ ಹೋಟೆಲ್‌ನಲ್ಲಿ ಸಂಭವಿಸಿದ ಬೀಕರ ಬೆಂಕಿ ದುರಂತದಲ್ಲಿ 66 ಜನರು ಸಾವನ್ನಪ್ಪಿದ್ದಾರೆ. ಬೋಲು ಪ್ರಾಂತ್ಯದ ಕಾರ್ತಲ್ಕಯಾ ರೆಸಾರ್ಟ್‌ನಲ್ಲಿರುವ ಹೋಟೆಲ್‌ನಲ್ಲಿ ಬೆಳಗಿನ ಜಾವ 3:27 ಕ್ಕೆ ಅವಘಡ ಸಂಭವಿಸಿದೆ. ಸತ್ತವರ ಸಂಖ್ಯೆ 66 ಇದ್ದರೆ 51 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಟರ್ಕಿಯ ಆಂತರಿಕ ಸಚಿವಾಲಯ ತಿಳಿಸಿದೆ.

RG Kar Case: ಆರ್‌ಜಿಕರ್‌ ಪ್ರಕರಣ; ಮಮತಾ ಬ್ಯಾನರ್ಜಿ ಸಾಕ್ಷ್ಯಗಳನ್ನು ತಿರುಚಿದ್ದಾರೆ: ಸಂತ್ರಸ್ತೆ ವೈದ್ಯೆಯ ತಂದೆ ವಾಗ್ದಾಳಿ ತಾಜಾ ಸುದ್ದಿ

ಮಮತಾ ಬ್ಯಾನರ್ಜಿ ವಿರುದ್ಧ ಆರ್‌ಜಿಕರ್‌ ಪ್ರಕರಣದ ಸಂತ್ರಸ್ತೆ ವೈದ್ಯೆಯ ತಂದೆ ಕಿಡಿ!

RG Kar Case: ಕೋಲ್ಕತಾದ ಆರ್‌ಜಿ ಕರ್‌ ಕಾಲೇಜಿನ ಟ್ರೈನಿ ವೈದ್ಯೆಯ ಪ್ರಕರಣದಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆಯಾಗಿದೆ. ಅತ್ಯಾಚಾರ ಮಾಡಿ ಅಮಾನವೀಯವಾಗಿ ಹತ್ಯೆ ಎಸಗಿದ ಅವನನ್ನು ಗಲ್ಲಿಗೇರಿಸಬೇಕೆಂದು ಸಂತ್ರಸ್ತೆಯ ಪೋಷಕರು ನ್ಯಾಯಾಲಯದ ಮೊರೆ ಹೋಗಿದ್ದರು. ಗಲ್ಲುಶಿಕ್ಷೆ ತಪ್ಪಲು ಮಮತಾ ಬ್ಯಾನರ್ಜಿಯೇ ಕಾರಣ, ಅವರು ಸಾಕ್ಷ್ಯಗಳನ್ನು ತಿರುಚಿದ್ದಾರೆ ಎಂದು ವೈದ್ಯೆಯ ತಂದೆ ವಾಗ್ಧಾಳಿ ನಡೆಸಿದ್ದಾರೆ.

Saif Ali Khan: ಆಸ್ಪತ್ರೆಯಿಂದ‌ ನಟ ಸೈಫ್‌ ಆಲಿ‌ ಖಾನ್ ಡಿಸ್ಚಾರ್ಜ್ ತಾಜಾ ಸುದ್ದಿ

ಸೇಫಾಗಿ‌ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಟ ಸೈಫ್!

ಬಾಲಿವುಡ್‌ನ ಖ್ಯಾತ ನಟ ಸೈಫ್‌ ಆಲಿ ಖಾನ್ ಅವರನ್ನು ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದಿದ್ದ. ನಟನ ನಿವಾಸದಲ್ಲಿಯೇ ಅವರ ಮೇಲೆ ಹಲ್ಲೆ ನಡೆದಿತ್ತು. ಸೈಫ್‌ ಕಳೆದ ನಾಲ್ಕೈದು ದಿನಗಳಿಂದ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಎರಡು ಸರ್ಜರಿಗಳಾಗಿದ್ದು,ಆರೋಗ್ಯದಲ್ಲಿ ಚೇತರಿಕೆ ಕಂಡ ಕಾರಣ ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ.

Delhi Election 2025: ದೆಹಲಿ ಚುನಾವಣೆ;ಬಿಜೆಪಿಯ ಮತ್ತೊಂದು ಪ್ರಣಾಳಿಕೆ ರಿಲೀಸ್‌- ಉಚಿತ ಶಿಕ್ಷಣ ಘೋಷಣೆ ತಾಜಾ ಸುದ್ದಿ

ಎಲ್‌ಕೆಜಿಯಿಂದ ಪಿಜಿಯವರೆಗೆ ಉಚಿತ ಶಿಕ್ಷಣ- ಬಿಜೆಪಿಯಿಂದ ಮಹತ್ವದ ಘೋಷಣೆ

ಫೆಬ್ರವರಿ 5ರಂದು ದೆಹಲಿ ವಿಧಾನಸಭಾ ನಡೆಯಲಿದೆ ಬಿಜೆಪಿ ಪಕ್ಷಕ್ಕೆ ಇದು ಪ್ರತಿಷ್ಠೆಯ ಚುನಾವಣೆಯಾಗಿದ್ದು,ಆಮ್‌ ಆದ್ಮಿ ಅಧಿಪತ್ಯವಿರುವ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಕಷ್ಟು ಕಸರತ್ತು ನಡೆಸುತ್ತಿದೆ. ಮತದಾರರನ್ನು ಸೆಳೆಯಲು ಬಿಜೆಪಿ ಪಕ್ಷವು ಸಾಕಷ್ಟು ಮಹತ್ವದ ಪ್ರಣಾಳಿಕೆಗಳನ್ನು ಘೋಷಿಸುತ್ತಿದ್ದು,ಇದೀಗ ಸ್ನಾತಕೋತ್ತರ ಪದವಿಯವರೆಗೂ ಉಚಿತ ಶಿಕ್ಷಣ ನೀಡಲಾಗುವುದು ಎಂದು ಎರಡನೇ ಪ್ರಣಾಳಿಕೆಯಲ್ಲಿ ಘೋಷಿಸಿದೆ.

Donald Trump: ಖಡ್ಗ ಹಿಡಿದು ವಿಚಿತ್ರ ಡಾನ್ಸ್‌- ಕಮಾಂಡೊಗಳಿಗೆ ಮುಜುಗರ ತಂದ್ರಾ ಟ್ರಂಪ್?‌ ತಾಜಾ ಸುದ್ದಿ

ಪದಗ್ರಹಣದ ವೇಳೆ ಕಮಾಂಡೋಗಳ ಖಡ್ಗ ಹಿಡಿದು ವಿಚಿತ್ರವಾಗಿ ಸ್ಟೆಪ್‌ ಹಾಕಿದ ಟ್ರಂಪ್!

ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಅವರು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಪದಗ್ರಹಣ ಸಮಾರಂಭದಲ್ಲಿ ಜಗತ್ತಿನ ಹಲವು ಗಣ್ಯ ವ್ಯಕ್ತಿಗಳು ಭಾಗಿಯಾಗಿದ್ದರು. ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಸಾಕಷ್ಟು ಕುಣಿದು ಕುಪ್ಪಳಿಸಿದ್ದ ಟ್ರಂಪ್‌ ಇದೀಗ ಕಮಾಂಡೊಗಳ ಖಡ್ಗ ಹಿಡಿದು ವಿಚಿತ್ರವಾಗಿ ಕುಣಿದಿದ್ದಾರೆ. ಎಪ್ಪತ್ತೊಂಬರ ಇಳಿ ವಯಸ್ಸಿನ ಅಮೆರಿಕ ಅಧ್ಯಕ್ಷರ ಜೋಶ್‌ ನೋಡಿ ಹಲವರು ಫಿದಾ ಆಗಿದ್ದಾರೆ. ಮತ್ತೊಂದೆಡೆ ಜತೆಗಿದ್ದ ಕಮಾಂಡೋಗಳು ಮುಜುಗರಕ್ಕೊಳಗಾಗಿದ್ದಾರೆ.

Elon Musk: ಟ್ರಂಪ್‌ ಪದಗ್ರಹಣದಲ್ಲಿ ಎಲಾನ್‌ ಮಸ್ಕ್‌ ಭಾಷಣ; ಕೈ ಸನ್ನೆ ನೋಡಿ ಹಿಟ್ಲರ್‌ಗೆ ಹೋಲಿಸಿದ ನೆಟ್ಟಿಗರು! ತಾಜಾ ಸುದ್ದಿ

ಎಲಾನ್‌ ಮಸ್ಕ್‌ ಕೈ ಸನ್ನೆಯನ್ನು ಹಿಟ್ಲರ್‌ಗೆ ಹೋಲಿಸಿದ ನೆಟ್ಟಿಗರು!

ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಅವರು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಪದಗ್ರಹಣ ಸಮಾರಂಭದಲ್ಲಿ ಟೆಸ್ಲಾ ಒಡೆಯ ಎಲಾನ್‌ ಮಸ್ಕ್‌ ಕೂಡ ಭಾಗಿಯಾಗಿದ್ದು, ವೇದಿಕೆಯಲ್ಲಿ ಅವರು ಮಹತ್ವದ ಭಾಷಣ ಮಾಡಿದ್ದಾರೆ. ಭಾಷಣದ ವೇಳೆ ಎಲಾನ್‌ ಮಸ್ಕ್‌ ಒಂದು ಕೈಯನ್ನು ಮೇಲಕ್ಕೆತ್ತಿ ಸನ್ನೆ ಮಾಡಿದ್ದು,ಅದನ್ನು ನೆಟ್ಟಿಗರು ನಾಜಿ ಸೆಲ್ಯೂಟ್‌ಗೆ ಹೋಲಿಸಿ ಹಿಟ್ಲರ್‌ ಎಂದು ಕರೆದಿದ್ದಾರೆ.

Irani Singer: ಮೊಹಮ್ಮದ್‌ ಪೈಗಂಬರ್‌ಗೆ ಅಪಮಾನ; ಇರಾನಿ ಗಾಯಕನಿಗೆ ಗಲ್ಲು ಶಿಕ್ಷೆ! ತಾಜಾ ಸುದ್ದಿ

ಪ್ರವಾದಿ ಮೊಹಮ್ಮದ್‌ಗೆ ಅಪಮಾನ; ಇರಾನಿ ಗಾಯಕನಿಗೆ ಗಲ್ಲು ಶಿಕ್ಷೆ!

ಪ್ರವಾದಿ ಮುಹಮ್ಮದ್ ಅವರಿಗೆ ಅಪಮಾನ ಮಾಡಿದ ಪ್ರಕರಣದಲ್ಲಿ ಇರಾನ್‌ನ ಜನಪ್ರಿಯ ಗಾಯಕ ಅಮಿ‌ರ್ ಹೊಸೈನ್ ಮಾಘಶೋದ್ದೂಗೆ ಅಲ್ಲಿನ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿದೆ. ಇದೇ ಪ್ರಕರಣದಲ್ಲಿ ಗಾಯಕನಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದನ್ನು ವಿರೋಧಿಸಿ ಪ್ರಾಸಿಕ್ಯೂಟರ್ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಸುಪ್ರೀಂಕೋರ್ಟ್ ಒಪ್ಪಿತ್ತು. ಆದರೆ ಇದೇ ಅಂತಿಮ ತೀರ್ಪಲ್ಲ, ಅವರಿಗೆ ಮೇಲ್ಮನವಿ ಹೋಗಲು ಇನ್ನೂ ಅವಕಾಶವಿದೆ ಎನ್ನಲಾಗಿದೆ.

Kolkata Horror: ಕೊಲ್ಕತ್ತಾ ವೈದ್ಯೆ ಕೊಲೆ ಪ್ರಕರಣ; 17 ಲಕ್ಷ ಪರಿಹಾರ ತಿರಸ್ಕರಿಸಿದ ಪೋಷಕರು ತಾಜಾ ಸುದ್ದಿ

ಯಾವ ಹಣವೂ ಬೇಡ... ನ್ಯಾಯ ಬೇಕು ಎಂದ ಕೊಲ್ಕತ್ತಾ ವೈದ್ಯೆಯ ಪೋಷಕರು!

ಕಳೆದ ವರ್ಷ ಆಗಸ್ಟ್‌ನಲ್ಲಿ ಕೊಲ್ಕತ್ತಾದ ಟ್ರೈನಿ ವೈದೈಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತೀರ್ಪು ಇಂದು ಹೊರ ಬಿದ್ದಿದ್ದು,ಅಪರಾಧಿಗೆ ಶಿಕ್ಷೆಯ ಪ್ರಮಾಣವನ್ನು ಕೋರ್ಟ್‌ ಪ್ರಕಟಿಸಿದೆ. ವೈದ್ಯೆಯ ಪೋಷಕರಿಗೆ 17 ಲಕ್ಷ ರುಪಾಯಿ ಪಾವತಿಸಬೇಕೆಂದು ನಗರ ನ್ಯಾಯಾಲಯ ಆದೇಶಿಸಿತ್ತು. ಆದರೆ ಪರಿಹಾರದ ಹಣವನ್ನು ಪೋಷಕರು ತಿರಸ್ಕರಿಸಿದ್ದು,ನಮಗೆ ಹಣ ಬೇಡ ನ್ಯಾಯ ಬೇಕು ಎಂದು ನ್ಯಾಯಾಧೀಶರ ಮುಂದೆ ಹೇಳಿದ್ದಾರೆ.

Viral Video: ರಾಜ್ಯಪಾಲರ ಬೆಂಗಾವಲು ಪಡೆಯ ಬಳಿ ನಿಂತಿದ್ದ ವ್ಯಕ್ತಿ; ಒದ್ದು ದರ್ಪ ತೋರಿದ ಟ್ರಾಫಿಕ್‌ ಪೊಲೀಸ್ ತಾಜಾ ಸುದ್ದಿ

ರಾಜ್ಯಪಾಲರ ಬೆಂಗಾವಲು ಪಡೆಯ ಬಳಿ ನಿಂತಿದ್ದ ಬಡಪಾಯಿಗೆ ಖಾಕಿ ಮಾಡಿದ್ದೇನು ಗೊತ್ತಾ? ವಿಡಿಯೊ ಇದೆ

ರಾಜ್ಯಪಾಲರ ಬೆಂಗಾವಲು ವಾಹನದ ಬಳಿ ವ್ಯಕ್ತಿಯೊಬ್ಬ ನಿಂತುಕೊಂಡಿದ್ದಕ್ಕೆ ಕೆರಳಿದ ಟ್ರಾಫಿಕ್ ಪೋಲೀಸ್ ಅವನ ಮೇಲೆ ದರ್ಪ ಮೆರೆದಿದ್ದಾರೆ. ಆ ವ್ಯಕ್ತಿಯನ್ನು ತಳ್ಳಿ ಪೊಲೀಸರು ಒದ್ದು ಅಮಾನುಷವಾಗಿ ಹಲ್ಲೆ ನಡೆಸಿರುವ ವಿಡಿಯೊ ಇದೀಗ ಭಾರೀ ವೈರಲ್‌ ಆಗಿದೆ.

Shot Dead: ಅಮೆರಿಕದಲ್ಲಿ ಗುಂಡಿನ ದಾಳಿಗೆ ಬಲಿಯಾದ ಹೈದರಾಬಾದ್‌ ಯುವಕ! ವಿದೇಶ

ಅಮೆರಿಕದಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಭಾರತೀಯ ಯುವಕ ಬಲಿ

ಸ್ನಾತಕೋತ್ತರ ಪದವಿಗಾಗಿ ಅಮೆರಿಕಕ್ಕೆ ಹೋಗಿ ಇತ್ತೀಚೆಗಷ್ಟೇ ಕೋರ್ಸ್ ಮುಗಿಸಿದ್ದ, ಹೈದರಾಬಾದ್‌ನ 26 ವರ್ಷದ ಯುವಕನನ್ನು ದುಷ್ಕರ್ಮಿಗಳು ಅಮೆರಿಕದ ವಾಷಿಂಗ್ಟನ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ

Tirupati Egg Biriyani Row:ತಿರುಮಲ ಬೆಟ್ಟದಲ್ಲಿ ಮೊಟ್ಟೆ ಬಿರಿಯಾನಿ ಸೇವಿಸಿದ ಭಕ್ತರು-ಭುಗಿಲೆದ್ದ ಆಕ್ರೋಶ ತಾಜಾ ಸುದ್ದಿ

ತಿರುಪತಿಯಲ್ಲಿ ಮತ್ತೊಂದು ವಿವಾದ; ದೇಗುಲದ ಬಳಿ ಮೊಟ್ಟೆ ಬಿರಿಯಾನಿ ಸೇವಿಸಿದ ಭಕ್ತರು! ವಿಡಿಯೊ ವೈರಲ್‌

ತಮಿಳುನಾಡು ಮೂಲದ ಭಕ್ತರ ಗುಂಪೊಂದು ತಿರುಮಲದ ಪವಿತ್ರ ಬೆಟ್ಟದಲ್ಲಿ ಮೊಟ್ಟೆ ಬಿರಿಯಾನಿ ತಿನ್ನುತ್ತಿದ್ದಾಗ ಸಿಕ್ಕಿಬಿದ್ದಿದ್ದು,ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೊ ಭಾರೀ ವೈರಲ್‌ ಆಗುತ್ತಿದೆ.

Sharon Raj Murder Case: ಕೇರಳದ ಶರೋನ್‌ ರಾಜ್‌ ಕೊಲೆ ಪ್ರಕರಣ; ಪ್ರೇಯಸಿ ಗ್ರೀಷ್ಮಾಗೆ ಗಲ್ಲುಶಿಕ್ಷೆ! ರಾಷ್ಟ್ರೀಯ

ಪ್ರಿಯಕರನಿಗೆ ಆಯುರ್ವೇದ ಔಷಧಿಯಲ್ಲಿ ವಿಷ ಬೆರೆಸಿ ಕೊಂದ ಪಾತಕಿಗೆ ಗಲ್ಲುಶಿಕ್ಷೆ-ಕೇರಳದ ಶರೋನ್‌ ರಾಜ್‌ ಕೊಲೆ ಕೇಸ್‌ನಲ್ಲಿ ಮಹತ್ವದ ತೀರ್ಪು

ಶರೋನ್ ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆತನ ಗೆಳತಿ ಎಸ್.ಎಸ್. ಗ್ರೀಷ್ಮಾಗೆ ನೆಯ್ಯಟ್ಟಿಂಕರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿದೆ. ಬ್ರೇಕಪ್‌ಗೆ ಒಪ್ಪದ ಕಾರಣಕ್ಕೆ ತನ್ನ ಗೆಳೆಯನಿಗೆ ವಿಷವುಣಿಸಿ ಕೊಂದ ಆರೋಪವನ್ನು ಗ್ರೀಷ್ಮಾ ಎದುರಿಸುತ್ತಿದ್ದಳು.

Rahul Gandhi: ರಾಹುಲ್‌ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆಗೆ ಸುಪ್ರೀಂ ತಡೆಯಾಜ್ಞೆ! ರಾಷ್ಟ್ರೀಯ

ಅವಹೇಳನಕಾರಿ ಹೇಳಿಕೆ-ರಾಗಾ;ಸುಪ್ರೀಂ ತಡೆಯಾಜ್ಞೆ!

2018 ರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧದ ಅವಹೇಳನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಜಾರ್ಖಂಡ್ ನ್ಯಾಯಾಲಯದಲ್ಲಿ ರಾಹುಲ್‌ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಸುಪ್ರೀಂ ಕೋರ್ಟ್‌ ರಾಹುಲ್ ವಿಚಾರಣೆಗೆ ಇಂದು(ಜ.20) ತಡೆಯಾಜ್ಞೆ ನೀಡಿದೆ

Arvind Kejriwal : ದೆಹಲಿ ಚುನಾವಣೆ ಪ್ರಚಾರ; ಬೀದಿ ಬದಿಯಲ್ಲಿ ವೆಜಿಟೇಬಲ್‌ ಮೊಮೊ ಸೇವಿಸಿದ ಕೇಜ್ರಿವಾಲ್ ರಾಷ್ಟ್ರೀಯ

ಬೀದಿ ಬದಿಯಲ್ಲಿ ಮೊಮೋಸ್‌ ಸೇವಿಸಿದ ಕೇಜ್ರಿವಾಲ್

ದೆಹಲಿ ಚುನಾವಣಾ ಪ್ರಚಾರ ರಂಗೇರಿದ್ದು,ಎಎಪಿ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಮತದಾರರನ್ನು ಸೆಳೆಯಲು ನಾನಾ ರೀತಿಯ ಸರ್ಕಸ್ಸುಗಳನ್ನು ಮಾಡುತ್ತಿದ್ದಾರೆ. ಮೂರನೇ ಅವಧಿಗೆ ದೆಹಲಿ ಗದ್ದುಗೆ ಏರಲು ಎಎಪಿ ಚುನಾವಣಾ ಕಣದಲ್ಲಿ ಮತ ಬೇಟೆ ಶುರು ಮಾಡಿದೆ. ನಿನ್ನೆ(ಜ.19) ಎಎಪಿ ಮುಖ್ಯಸ್ಥ ಕೇಜ್ರಿವಾಲ್‌ ಚುನಾವಣಾ ಪ್ರಚಾರದ ವೇಳೆ ರಸ್ತೆ ಬದಿಯ ಅಂಗಡಿಯಲ್ಲಿ ವೆಜಿಟೇಬಲ್‌ ಮೊಮೋಸ್‌ ಸೇವಿಸಿದ್ದಾರೆ.

Donald Trump : ಡೊನಾಲ್ಡ್‌ ಟ್ರಂಪ್‌ ಪದಗ್ರಹಣ;ಔತಣಕೂಟದಲ್ಲಿ ಪಾಲ್ಗೊಂಡ ಮುಖೇಶ್‌ ಅಂಬಾನಿ ದಂಪತಿ ವಿದೇಶ

ಡೊನಾಲ್ಡ್‌ ಟ್ರಂಪ್‌ ಭೇಟಿಯಾದ ಮುಖೇಶ್‌ ಅಂಬಾನಿ ದಂಪತಿ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಡೊನಾಲ್ಡ್‌ ಟ್ರಂಪ್‌ ಅವರು ಸೋಮವಾರ(ಜ.20) 47ನೇ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ. ಇಂದು ಭಾರತದ ಖ್ಯಾತ ಉದ್ಯಮಿ ಮುಖೇಶ್‌ ಅಂಬಾನಿ ದಂಪತಿ ಟ್ರಂಪ್‌ ಅವರನ್ನು ಭೇಟಿಯಾಗಿದ್ದು,ಔತಣಕೂಟದಲ್ಲಿ ಪಾಲ್ಗೊಂಡಿದ್ದಾರೆ.

Cylinder Blast: ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ; ಸಿಲಿಂಡರ್‌ಗಳ ಸ್ಫೋಟ! ರಾಷ್ಟ್ರೀಯ

ಕುಂಭಮೇಳದಲ್ಲಿ ಸಿಲಿಂಡರ್‌ಗಳ ಸ್ಫೋಟ!

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನ ಐತಿಹಾಸಿಕ ಮಹಾ ಕುಂಭಮೇಳದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಶಾಸ್ತ್ರೀ ಬ್ರಿಡ್ಜ್​ ಸೆಕ್ಟರ್ 19ರಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ನಿರಂತರ ಸಿಲಿಂಡರ್‌ ಸ್ಫೋಟವಾಗುತ್ತಿದೆ.

Viral Video: ರಾಮ ಭಜನೆ ಹಾಡಿದ ಇಟಲಿ ಮಹಿಳೆಯರು; ಯೋಗಿ ಆದಿತ್ಯನಾಥ್‌ ಫಿದಾ! ವೈರಲ್‌

ಇಟಲಿ ಮಹಿಳೆಯರ ರಾಮ ಭಜನೆಗೆ ಯೋಗಿಜೀ ಫಿದಾ!

ಮಹಾ ಕುಂಭಮೇಳದ ಸಂಭ್ರಮಾಚರಣೆಯ ಮಧ್ಯೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಇಟಲಿಯಿಂದ ಆಗಮಿಸಿರುವ ಮಹಿಳಾ ನಿಯೋಗವನ್ನು ಭೇಟಿ ಮಾಡಿದ್ದಾರೆ. ಇಟಲಿ ಮಹಿಳೆಯರು ರಾಮ ಭಜನೆ ಹಾಡಿ ಯೋಗಿ ಅವರ ಗಮನಸೆಳೆದಿದ್ದು,ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Delhi Tragedy: ಕಾರು ದುರಂತ; ಹಸೆಮಣೆ ಏರಬೇಕಿದ್ದವನು ಹೆಣವಾಗಿ ಮನೆಗೆ ಬಂದ! ರಾಷ್ಟ್ರೀಯ

ಲಗ್ನಪತ್ರಿಕೆ ಹಂಚಲು ಹೋದ ಯುವಕನ ದುರಂತ ಸಾವು!

ಶನಿವಾರ(ಜ.18) ತಡರಾತ್ರಿ ದೆಹಲಿಯಲ್ಲಿ ತನ್ನ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ವಿತರಿಸಲು ತೆರಳುತ್ತಿದ್ದ ಯುವಕನ್ನೊಬ್ಬ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಬೆಂಕಿ ಅವಘಡವಾಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

Dolly Dhananjay: ದಕ್ಷಿಣ ಕಾಶಿ ನಂಜನಗೂಡಿಗೆ ಡಾಲಿ ಧನಂಜಯ್;‌ ನಟ ರಾಕ್ಷಸ ಹಸೆಮಣೆ ಏರುವ ಹೊತ್ತು! ಸಿನಿಮಾ

ನಂಜನಗೂಡಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ ಡಾಲಿ!

ನಟ ಡಾಲಿ ಧನಂಜಯ್‌ ಡಾ.ಧನ್ಯತಾ ಅವರೊಂದಿಗೆ ಹಸೆಮಣೆ ಏರುತ್ತಿದ್ದಾರೆ. ಇಬ್ಬರ ವಿವಾಹವು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಫೆಬ್ರವರಿ 16 ರಂದು ನಡೆಯಲಿದೆ. ಹಲವು ಗಣ್ಯರು ಮತ್ತು ರಾಜಕಾರಣಿಗಳು ಮದುವೆಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ಮದುವೆಗೂ ಮುನ್ನ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿರುವ ಡಾಲಿ ಇಂದು ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

Viral Video:  ಬೆಡ್‌ಶೀಟ್‌ ಕದ್ದು ಲಗೇಜ್ ಬ್ಯಾಗ್‌ನೊಳಗೆ ಬಚ್ಚಿಟ್ಟ ಖತರ್ನಾಕ್‌ ಪ್ರಯಾಣಿಕರು! ರಾಷ್ಟ್ರೀಯ

ಬೆಡ್‌ಶೀಟ್‌ ಕದ್ದವರನ್ನು ರೆಡ್‌ ಹ್ಯಾಂಡ್‌ ಆಗಿ ಹಿಡಿದ ಅಧಿಕಾರಿಗಳು!

ಪ್ರಯಾಣಿಕರು ರೈಲ್ವೆ ಇಲಾಖೆಯ ಬೆಡ್ ಶೀಟ್‌, ಟವೆಲ್‌ಗಳನ್ನು ಕದ್ದು ಲಗೇಜು ಬ್ಯಾಗಿನೊಳಗೆ ಬಚ್ಚಿಟ್ಟಿದ್ದನ್ನು ರೈಲ್ವೆ ಸಿಬ್ಬಂದಿ ರೆಡ್‌ ಹ್ಯಾಂಡ್‌ ಆಗಿ ಹಿಡಿದಿದ್ದಾರೆ. ಇದೀಗ ಆ ವಿಡಿಯೊ ಭಾರೀ ವೈರಲ್ ಆಗಿದೆ.

Tejaswi Surya: ಮ್ಯಾರಥಾನ್‌ನಲ್ಲಿ ಯೂತ್‌ ಐಕಾನ್‌ ತೇಜಸ್ವಿ ಸೂರ್ಯ ಭಾಗಿ;ಫಿಟ್‌ನೆಸ್‌ ಬಗ್ಗೆ ಜಾಗೃತಿ ಮೂಡಿಸಿದ ಸಂಸದ ತಾಜಾ ಸುದ್ದಿ

ಮ್ಯಾರಥಾನ್‌ನಲ್ಲಿ ಯಂಗ್‌ ಅಂಡ್‌ ಎನರ್ಜಿಟಿಕ್‌ ತೇಜಸ್ವಿ ಸೂರ್ಯ!

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮುಂಬೈನಲ್ಲಿ ನಡೆದ ಟಾಟಾ ಮುಂಬೈನ ಮ್ಯಾರಥಾನ್‌ನಲ್ಲಿ ಭಾಗಿಯಾಗಿದ್ದು,ಫಿಟ್‌ನೆಸ್‌ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

Saif Ali Khan: ಐಸಿಯುನಲ್ಲಿರುವ ಸೈಫ್‌ ಆಲಿಖಾನ್‌ ಚೇತರಿಕೆ; ಏನಂದ್ರು ಕರೀನಾ ಕಪೂರ್? ರಾಷ್ಟ್ರೀಯ

ಸೈಫ್‌ ಪತ್ನಿ ನಟಿ ಕರೀನಾ ಕಪೂರ್‌ ಫಸ್ಟ್ ರಿಯಾಕ್ಷನ್!

ಇಂದು(ಜ.16) ಮುಂಜಾನೆ ತಮ್ಮ ನಿವಾಸದಲ್ಲಿ ಹಲ್ಲೆಗೊಳಗಾದ ನಟ ಸೈಫ್ ಆಲಿಖಾನ್ ಶಸ್ತ್ರ ಚಿಕಿತ್ಸೆ ನಂತರ ಮುಂಬೈನ ಲೀಲಾವತಿ ಆಸ್ಪತ್ರೆಯ ಐಸಿಯುನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಬೆನ್ನು, ಕುತ್ತಿಗೆ, ಕೈ ಮುಂತಾದ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಇದೀಗ ಸೈಫ್ ಪತ್ನಿ ಕರೀನಾ ಕಪೂರ್ ಘಟನೆಯ ಕುರಿತ ಮಾಹಿತಿಯನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Naxalites Encounter: ಛತ್ತೀಸ್‌ಗಢದಲ್ಲಿ ಎನ್ಕೌಂಟರ್;‌ 12 ನಕ್ಸಲರ ಹೆಡೆಮುರಿ ಕಟ್ಟಿದ ಭದ್ರತಾ ಪಡೆ! ರಾಷ್ಟ್ರೀಯ

ಎನ್ಕೌಂಟರ್‌ನಲ್ಲಿ 12 ನಕ್ಸಲರ ಹತ್ಯೆ!

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ 12 ನಕ್ಸಲರು ಬಲಿಯಾಗಿದ್ದಾರೆ. ಇಂದು ಬೆಳಗ್ಗೆ 9 ಗಂಟೆಯಿಂದ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಎನ್​ಕೌಂಟರ್​​​​ಗಳು ನಡೆಯುತ್ತಿವೆ.

Saif Ali Khan: ಸೈಫ್‌ ಆಲಿಖಾನ್‌ ಹಲ್ಲೆ ಪ್ರಕರಣ; ಸಿಸಿಟಿವಿಯಲ್ಲಿ ಸೆರೆಸಿಕ್ಕ ದುಷ್ಕರ್ಮಿ! ರಾಷ್ಟ್ರೀಯ

ಸೈಫ್‌ಗೆ ಚಾಕು ಇರಿತ; ಸಿಸಿಟಿವಿಯಲ್ಲಿ ಸೆರೆಸಿಕ್ಕ ಆರೋಪಿ!

ಬಾಲಿವುಡ್‌ನ ಖ್ಯಾತ ನಟ ಸೈಫ್ ಆಲಿಖಾನ್​ಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ದುಷ್ಕರ್ಮಿಯ ಫೋಟೋವೊಂದು, ಸಿಸಿಟಿವಿ ದೃಶ್ಯಾವಳಿಯಲ್ಲಿ ಇದೀಗ ಬಹಿರಂಗಗೊಂಡಿದೆ.