ಗುರುಗ್ರಾಮ: ಜೋರಾಗಿ ಹಾಡು ಹಾಕುತ್ತಾ ಮಹೀಂದ್ರಾ ಸ್ಕಾರ್ಪಿಯೋ ಮತ್ತು ಕಿಯಾ ಸೆಲ್ಟೋಸ್ ಸೇರಿದಂತೆ ಎಸ್‌ಯುವಿ ವಾಹನಗಳ ಚಾಲಕರು ರಸ್ತೆಯಲ್ಲಿ ಇತರೆ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿದ್ದಾರೆ. ಗುರುಗ್ರಾಮ-ದೆಹಲಿ ಎಕ್ಸ್‌ಪ್ರೆಸ್‌ವೇಯಲ್ಲಿ (Gurugram-Delhi expressway) ಈ ಘಟನೆ ನಡೆದಿದ್ದು, 12ಕ್ಕೂ ಹೆಚ್ಚು ಕಪ್ಪು ಬಣ್ಣದ ಕಾರುಗಳು ಸರತಿ ಸಾಲಿನಲ್ಲಿ ನಿಂತು, ಜೋರಾಗಿ ಹಾಡುಗಳನ್ನು ಹಾಕುತ್ತಾ ಚಾಲನೆ ಮಾಡಿದ್ದಾರೆ. ಒಬ್ಬ ವ್ಯಕ್ತಿಯಂತೂ ಕಾರಿನ (Car) ಮೇಲೆ ಕುಳಿತು ಸಾಹಸ ಮಾಡಿದ್ದಾನೆ. ಈ ಮೂಲಕ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ.
19 ಸೆಕೆಂಡುಗಳ ವೈರಲ್ ವಿಡಿಯೊದಲ್ಲಿ (Viral Video), ವ್ಯಕ್ತಿಯೊಬ್ಬ ಕಾರಿನ ಮೇಲ್ಭಾಗದಲ್ಲಿ ಕುಳಿತು ಕ್ಯಾಮರಾವನ್ನು ನೋಡುತ್ತಾ ಹಿನ್ನೆಲೆ ಸಂಗೀತಕ್ಕೆ ತಕ್ಕಂತೆ ಕುಣಿದಿದ್ದಾನೆ. ಕಾರಿನ ಬಾನೆಟ್‌ಗೆ ರಾಷ್ಟ್ರಧ್ವಜವನ್ನು ಅಂಟಿಸಲಾಗಿದೆ. ಪಕ್ಕದ ಕಾರಿನಲ್ಲಿರುವವರು ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ವಿಡಿಯೊ ಪ್ರಾರಂಭವಾದಾಗ ಹೆದ್ದಾರಿಯಲ್ಲಿ ಕಾರುಗಳು ನಿಂತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ನಂತರ ಒಂದರ ಹಿಂದೆ ಒಂದರಂತೆ ವಾಹನಗಳನ್ನು ಚಲಾಯಿಸಲಾಗಿದೆ. ಈ ವೇಳೆ ಒಬ್ಬ ವ್ಯಕ್ತಿ ಕಾರಿನ ಮೇಲೆ ಕುಳಿತಿದ್ದಾನೆ.
ಹರಿಯಾಣವಿ ನಟ ಎಂದು ಹೇಳಲಾಗುವ ವ್ಯಕ್ತಿ ಸನ್‌ರೂಫ್ ಮೇಲೆ ನಿಂತು ಪೋಸ್ ನೀಡುತ್ತಾ, ನಗುತ್ತಾ ನೃತ್ಯ ಮಾಡಿದ್ದಾನೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೊ ವೈರಲ್ ಆಗಿದ್ದು, ಪೊಲೀಸರು ವಾಹನಗಳು ಮತ್ತು ಆರೋಪಿಗಳನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ.
ವಿಡಿಯೊ ವೀಕ್ಷಿಸಿ:
Video: Men In Black SUVs Block Gurugram-Delhi Highway, Dance To Loud Musichttps://t.co/FZj1FFOq9W pic.twitter.com/97k7wG80oB
— NDTV (@ndtv) August 18, 2025
ಈ ತಿಂಗಳ ಆರಂಭದಲ್ಲಿ ಗುರುಗ್ರಾಮ್‌ನ ಸೆಕ್ಟರ್ 108 ರಲ್ಲಿ ಇದೇ ರೀತಿಯ ಘಟನೆ ವರದಿಯಾಗಿತ್ತು. ಸಾಮಾಜಿಕ ಮಾಧ್ಯಮದಲ್ಲಿ ರೀಲ್ಸ್ ಪೋಸ್ಟ್ ಮಾಡುವ ಉದ್ದೇಶದಿಂದ ಗುಂಪೊಂದು ಈ ರೀತಿ ವರ್ತಿಸಿ, ಇತರೆ ವಾಹನ ಸವಾರರಿಗೆ ತೊಂದರೆಯನ್ನುಂಟು ಮಾಡಿತ್ತು. ಸೆಕ್ಟರ್ 108 ರಿಂದ ದ್ವಾರಕಾ ಎಕ್ಸ್‌ಪ್ರೆಸ್‌ವೇಗೆ ಸಂಪರ್ಕ ಕಲ್ಪಿಸುವ ಪ್ರದೇಶದಲ್ಲಿ, ಶೋಭಾ ಸಿಟಿ ಮತ್ತು ಎಕ್ಸ್‌ಪೀರಿಯನ್ ಹಾರ್ಟ್‌ಸಾಂಗ್ ವಸತಿ ಬಹುಮಹಡಿ ಕಟ್ಟಡಗಳ ಬಳಿ ಈ ಘಟನೆ ನಡೆದಿತ್ತು.
ಇದನ್ನೂ ಓದಿ: Viral Video: ಮೇಕೆ ನುಂಗಿದ ದೈತ್ಯ ಹೆಬ್ಬಾವನ್ನು ಕೊಡಲಿಯಿಂದ ಹೊಡೆದು ಕೊಂದ ಕಿಡಿಗೇಡಿಗಳು; ಶಾಕಿಂಗ್ ವಿಡಿಯೊ ಇಲ್ಲಿದೆ
ವಾಹನಗಳಲ್ಲಿ ಅಕ್ರಮ ಸೈರನ್‌ಗಳನ್ನು ಅಳವಡಿಸಲಾಗಿದ್ದು, ಸಾಹಸ ಪ್ರದರ್ಶನದ ಉದ್ದಕ್ಕೂ ಅವುಗಳನ್ನು ಮೊಳಗಿಸಲಾಗುತ್ತಿತ್ತು ಎಂದು ಜನರು ಆರೋಪಿಸಿದ್ದಾರೆ. ಈ ಶಬ್ಧ ಮತ್ತು ಅಡಚಣೆಯಿಂದಾಗಿ ಏಳು ನಿಮಿಷಗಳಿಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಮತ್ತು ಆ ಪ್ರದೇಶದ ಮೂಲಕ ಹಾದುಹೋಗಲು ಪ್ರಯತ್ನಿಸುತ್ತಿದ್ದ ನಿವಾಸಿಗಳಿಗೆ ತೊಂದರೆಯಾಯಿತು ಎಂದು ವರದಿಯಾಗಿದೆ.