ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮಕ್ಕಳನ್ನು ಶಾಲೆಗೆ ಬಿಡಲು ಮರೆತ ಗಂಡ- ಸಿಟ್ಟಿಗೆದ್ದ ಹೆಂಡ್ತಿ ಮಾಡಿದ್ದೇನು ಗೊತ್ತಾ? ಈ ವಿಡಿಯೊ ನೋಡಿ

Pregnant wife kicks husband: ಚೀನಾದಲ್ಲಿ ವ್ಯಕ್ತಿಯೊಬ್ಬ ಮಕ್ಕಳನ್ನು ಶಾಲೆಗೆ ಬಿಡಲು ಮರೆತಿದ್ದಕ್ಕಾಗಿ ಗರ್ಭಿಣಿ ಪತ್ನಿ ಅವನನ್ನು ಮೀನಿನ ಕೊಳಕ್ಕೆ ಒದ್ದಿದ್ದಾಳೆ. ಹಲವಾರು ಬಾರಿ ನೆನಪಿಸಿದರೂ, ಅವನು ಅವಳ ಸೂಚನೆಗಳನ್ನು ನಿರ್ಲಕ್ಷಿಸಿ ಮೀನುಗಳಿಗೆ ಆಹಾರ ನೀಡುತ್ತಲೇ ಇದ್ದನು. ಇದರಿಂದ ಕೋಪಗೊಂಡ ಪತ್ನಿ ಹಿಂದಿನಿಂದ ಬಂದು ಆತನಿಗೆ ಒದ್ದಿದ್ದಾಳೆ. ಈ ವಿಡಿಯೊ ವೈರಲ್ ಆಗಿದೆ.

ಮಾತು ಕೇಳದ ಗಂಡನಿಗೆ ಪತ್ನಿಯಿಂದ ತಕ್ಕ ಪಾಠ! ವಿಡಿಯೊ ನೋಡಿ

Priyanka P Priyanka P Aug 8, 2025 3:41 PM

ಬೀಜಿಂಗ್: ವ್ಯಕ್ತಿಯೊಬ್ಬ ಮಕ್ಕಳನ್ನು ಶಾಲೆಗೆ ಬಿಡಲು ಮರೆತಿದ್ದಾನೆ. ಪರಿಣಾಮ ಕೋಪಗೊಂಡ ಆತನ ಪತ್ನಿ ಅವನನ್ನು ಒದ್ದಿದ್ದಾಳೆ. ಒದ್ದ ರಭಸಕ್ಕೆ ಆತ ನೇರವಾಗಿ ಕೊಳಕ್ಕೆ ಬಿದ್ದಿದ್ದಾನೆ. ಚೀನಾದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral video) ಆಗಿದೆ. ವಿಡಿಯೊ ನೋಡಿದ ನೆಟ್ಟಿಗರಿಗೆ ನಗು ತರಿಸಿದೆ. ಚೀನಾದಲ್ಲಿ ವ್ಯಕ್ತಿಯೊಬ್ಬ ಮಕ್ಕಳನ್ನು ಶಾಲೆಗೆ ಬಿಡಲು ಮರೆತಿದ್ದಕ್ಕಾಗಿ ಗರ್ಭಿಣಿ ಪತ್ನಿ ಅವನನ್ನು ಮೀನಿನ ಕೊಳಕ್ಕೆ ಒದ್ದಿದ್ದಾಳೆ. ಹಲವಾರು ಬಾರಿ ನೆನಪಿಸಿದರೂ, ಅವನು ಅವಳ ಸೂಚನೆಗಳನ್ನು ನಿರ್ಲಕ್ಷಿಸಿ ಮೀನುಗಳಿಗೆ ಆಹಾರ ನೀಡುತ್ತಲೇ ಇದ್ದನು.

ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಆ ವ್ಯಕ್ತಿ ಕೊಳದ ಬಳಿ ಕುಳಿತಿರುವುದನ್ನು ಕಾಣಬಹುದು. ಏನಾಗಲಿದೆ ಎಂಬುದರ ಅರಿವಿಲ್ಲದೆ ಮೀನುಗಳಿಗೆ ಆಹಾರ ಹಾಕುತ್ತಾ ಕುಳಿತಿದ್ದಾನೆ. ಕೆಲವು ಕ್ಷಣಗಳ ನಂತರ, ಅವನ ಹೆಂಡತಿ ಹಿಂದಿನಿಂದ ಬಂದು ಒದ್ದಿದ್ದಾಳೆ. ಆಕೆ ಒದ್ದ ರಭಸಕ್ಕೆ ಪತಿರಾಯ ನೇರವಾಗಿ ಕೊಳಕ್ಕೆ ಬಿದ್ದಿದ್ದಾನೆ.

“ತಾನು ನೀರಿನಿಂದ ಮೇಲೆ ಎದ್ದೆ. ನನಗೆ ಯಾವುದೇ ಗಾಯವಾಗಲಿಲ್ಲ. ನಾನು ನೀರಿನಿಂದ ಮೇಲೆ ಬಂದ ನಂತರ, ನನ್ನ ಹೆಂಡತಿಗೆ ಕ್ಷಮೆಯಾಚಿಸಿದೆ. ಅವಳು ಒಳ್ಳೆಯಳೇ, ಆದರೆ ಅವಳು ಗರ್ಭಿಣಿಯಾಗಿರುವುದರಿಂದ ಕೆಲವೊಮ್ಮೆ ಆಕೆಗೆ ಬೇಗನೆ ಕೋಪ ಬರುತ್ತದೆ. ಅವಳು ಕೂಡ ಕ್ಷಮೆಯಾಚಿಸಿದಳು” ಎಂದು ಶ್ರೀಡು ಎಂದು ಗುರುತಿಸಲ್ಪಟ್ಟ ವ್ಯಕ್ತಿ ತನ್ನ ತಪ್ಪನ್ನು ಒಪ್ಪಿಕೊಂಡನು.

ವಿಡಿಯೊ ವೀಕ್ಷಿಸಿ:

ಆ ದಿನವನ್ನು ನೆನಪಿಸಿಕೊಳ್ಳುತ್ತಾ ಶ್ರೀ ಡು ಹೇಳಿದ್ದು ಹೀಗೆ, “ಆ ದಿನ, ನನ್ನ ಹೆಂಡತಿ ಮಕ್ಕಳನ್ನು ಕರೆದುಕೊಂಡು ಹೋಗಲು ಕೇಳಿದಳು, ಆದರೆ ನಾನು ಮರೆತಿದ್ದೆ. ಅವಳು ನನಗೆ ಹಲವಾರು ಬಾರಿ ಕರೆ ಮಾಡಿದಳು, ಆದರೆ ನಾನು ಅವಳನ್ನು ನಿರ್ಲಕ್ಷಿಸಿದೆ. ಆದ್ದರಿಂದ ಅವಳು ನನ್ನನ್ನು ಆ ರೀತಿ ಒದ್ದಳು. ನಾನು ಮೀನುಗಳಿಗೆ ಆಹಾರ ನೀಡುವಾಗ ನನಗೆ ಏನೂ ಕೇಳಿಸಲಿಲ್ಲ. ನಾನು ಅವಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಿಲ್ಲ. ಮರೆತಿದ್ದೆ ಅಷ್ಟೆ. ಕೊಳವು 1.6 ಮೀಟರ್ ಆಳದಲ್ಲಿತ್ತು. ಅದೃಷ್ಟವಶಾತ್, ನಾನು ಈಜಬಲ್ಲೆ ಹೀಗಾಗಿ ಬಚಾವ್ ಆದೆ” ಎಂದು ಹೇಳಿದ್ದಾನೆ.

ಈ ಸುದ್ದಿಯನ್ನೂ ಓದಿ: Khalistan Terrorists: ಗುರುದ್ವಾರ ಆವರಣದಲ್ಲಿ ಖಲಿಸ್ತಾನ್ ರಾಯಭಾರ ಕಚೇರಿ; ಫೋಟೋ ವೈರಲ್‌

ಪೋಸ್ಟ್‌ಗೆ ಪ್ರತಿಕ್ರಿಯಿಸುತ್ತಾ, ಒಬ್ಬ ಬಳಕೆದಾರರು, ತನ್ನ ಪತಿ ಒಮ್ಮೆ ನಮ್ಮ ಮಗುವನ್ನು ಡೇಕೇರ್‌ನಿಂದ ಕರೆದುಕೊಂಡು ಬರಲು ಮರೆತಿದ್ದರು. ಆ ದಿನ ಅವರಿಗೆ ಹೀಗೆ ಮಾಡದಿದ್ದಕ್ಕೆ ವಿಷಾದವಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಆಕೆಯ ಪತಿ ಕೊಳದಲ್ಲಿ ಸಂತೋಷವಾಗಿರುವಂತೆ ತೋರುತ್ತಿದೆ ಎಂದು ಮತ್ತೊಬ್ಬರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ಇನ್ನು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ವೈರಲ್ ಆದ ನಂತರ, ಇದು ದಂಪತಿಯನ್ನು ಚಿಂತೆಗೊಳಿಸಿತಂತೆ. ಘಟನೆಯ ನಂತರ ಅವನ ಪತ್ನಿಗೆ ಪೋಷಕರು ಕರೆ ಮಾಡಿ ವಿಚಾರಿಸಿದರಂತೆ. ಈ ವಿಚಾರ ಯಾವ ಹಂತಕ್ಕೆ ಹೋಗಬಹುದೆಂದು ಚಿಂತೆಗೊಳಗಾಗಿದ್ದರು. ಆದರೆ ಅದೃಷ್ಟವಶಾತ್ ಅಂಥದ್ದೇನು ಸಂಭವಿಸಲಿಲ್ಲ ಎಂದು ಶ್ರೀ ಡು ತಿಳಿಸಿದ್ದಾನೆ.