Viral Video: ಕಾರ್ಗಿಲ್ ವೀರನಿಗೆ ವಿಮಾನದಲ್ಲಿ ಸಿಕ್ತು ಭರ್ಜರಿ ಸ್ವಾಗತ! ಹೃದಯಸ್ಪರ್ಶಿ ವಿಡಿಯೊ ನೋಡಿ
Kargil Hero: ಕಾರ್ಗಿಲ್ ಯುದ್ಧದ ವೀರ ನಾಯಕ್ ದೀಪ್ ಚಂದ್ ಅವರನ್ನು ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರ ಸಮ್ಮುಖದಲ್ಲಿ ಸನ್ಮಾನಿಸಿದ ಹೃದಯಸ್ಪರ್ಶಿ ಘಟನೆ ನಡೆಯಿತು. ಈ ಗೌರವವನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದ್ದು, ಈ ವಿಡಿಯೊ ವೈರಲ್ ಆಗಿದೆ. ಪ್ರಯಾಣಿಕರು ತಮ್ಮ ಫೋನ್‌ಗಳಿಂದ ಆ ಕ್ಷಣವನ್ನು ರೆಕಾರ್ಡ್ ಮಾಡುತ್ತಿದ್ದಾರೆ. ಕೆಲವರು ನಗುತ್ತಿದ್ದರೆ, ಇನ್ನು ಕೆಲವರು ಚಪ್ಪಾಳೆ ತಟ್ಟುತ್ತಿದ್ದಾರೆ.


ನವದೆಹಲಿ: ಕಾರ್ಗಿಲ್ ಯುದ್ಧದ ವೀರ ನಾಯಕ್ ದೀಪ್ ಚಂದ್ ಅವರನ್ನು ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರ ಸಮ್ಮುಖದಲ್ಲಿ ಸನ್ಮಾನಿಸಿದ ಹೃದಯಸ್ಪರ್ಶಿ ಘಟನೆ ನಡೆಯಿತು. ಈ ಗೌರವವನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದ್ದು, ಈ ವಿಡಿಯೊ ವೈರಲ್(Viral Video) ಆಗಿದೆ. ದೇಶಾದ್ಯಂತ ಪ್ರಶಂಸೆ ಗಳಿಸಿದೆ. ಈ ವಿಡಿಯೊದಲ್ಲಿ, ನಾಯಕ್ ದೀಪ್ ಚಂದ್ ಕಿಟಕಿಯ ಪಕ್ಕದಲ್ಲಿ ಕುಳಿತಿರುವುದನ್ನು ಕಾಣಬಹುದು. ಪ್ರಯಾಣಿಕರು ತಮ್ಮ ಫೋನ್‌ಗಳಿಂದ ಆ ಕ್ಷಣವನ್ನು ರೆಕಾರ್ಡ್ ಮಾಡುತ್ತಿದ್ದಾರೆ. ಕೆಲವರು ನಗುತ್ತಿದ್ದರೆ, ಇನ್ನು ಕೆಲವರು ಚಪ್ಪಾಳೆ ತಟ್ಟುತ್ತಿದ್ದಾರೆ. ವಿಮಾನದ ಒಳಗಿನ ವಾತಾವರಣವು ಗೌರವ ಮತ್ತು ಮೆಚ್ಚುಗೆಯಿಂದ ತುಂಬಿದೆ.
ವಿಮಾನ ಹಾರಾಟದ ಸಮಯದಲ್ಲಿ, ಪೈಲಟ್ ಇಂಟರ್‌ಕಾಮ್‌ನಲ್ಲಿ ಹೃತ್ಪೂರ್ವಕ ಘೋಷಣೆ ಮಾಡಿದರು. “ಇಂದು ನಮ್ಮ ವಿಮಾನದಲ್ಲಿ ಬಹಳ ವಿಶೇಷ ಅತಿಥಿ ಇದ್ದಾರೆ. ಅವರನ್ನು ಪರಿಚಯಿಸಲು ತುಂಬಾ ಸಂತೋಷ ಪಡುತ್ತೇನೆ. ಕಾರ್ಗಿಲ್ ಯುದ್ಧದ ವೀರ ನಾಯಕ್ ದೀಪ್ ಚಂದ್, ನಮ್ಮ ರಾಷ್ಟ್ರದ ರಕ್ಷಕ ಇಂದು ನಮ್ಮೊಂದಿಗಿದ್ದಾರೆ. ಆಪರೇಷನ್ ಪರಾಕ್ರಮ್ ಸಮಯದಲ್ಲಿ ಅವರು ತಮ್ಮ ಮೂರು ಅಂಗಗಳನ್ನು ಕಳೆದುಕೊಂಡರು. ಆದರೂ ಛಲಬಿಡದೆ ಹೋರಾಡಿದ ಅವರ ಪರಾಕ್ರಮವು ಎಲ್ಲರಿಗೂ ಸ್ಪೂರ್ತಿ. ನಾವೆಲ್ಲರೂ ನಮ್ಮ ಕೈಗಳನ್ನು ಒಟ್ಟುಗೂಡಿಸಿ ಅವರಿಗೆ ಧನ್ಯವಾದ ಹೇಳೋಣ. ಜೈ ಹಿಂದ್ ಮತ್ತು ಜೈ ಭಾರತ್” ಎಂದು ಹೇಳುತ್ತಿದ್ದಂತೆ ಪ್ರಯಾಣಿಕರೆಲ್ಲರು ಚಪ್ಪಾಳೆ ತಟ್ಟಲು ಪ್ರಾರಂಭಿಸಿದರು. ಕೆಲವರು ಗೌರವಸೂಚಕವಾಗಿ ಎದ್ದು ನಿಂತರು.
ವಿಡಿಯೊ ವೀಕ್ಷಿಸಿ:
ಪ್ರಯಾಣಿಕರ ಪ್ರೀತಿಪೂರ್ವಕ ಚಪ್ಪಾಳೆ, ಪೈಲಟ್ ನೀಡಿದ ಆದರದ ಸ್ವಾಗತದಿಂದ ಭಾವುಕರಾದ ಯೋಧ, ಎಲ್ಲರನ್ನೂ ನೋಡಿ ಪ್ರೀತಿಯಿಂದ ನಗುತ್ತಾ ನಮಸ್ಕರಿಸಿದರು. ವಿಡಿಯೊದಲ್ಲಿ ಪ್ರಯಾಣಿಕರು ಯೋಧನಿಗೆ ಗೌರವ ವ್ಯಕ್ತಪಡಿಸಿದ್ದನ್ನು ಕಾಣಬಹುದು. ಇದು ಕೇವಲ ಒಬ್ಬ ವ್ಯಕ್ತಿಗೆ ಸಲ್ಲಿಸಿದ ಗೌರವವಲ್ಲ. ಬದಲಾಗಿ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಸೈನಿಕರ ಶೌರ್ಯಕ್ಕೆ ಸಂದ ಸಾಮೂಹಿಕ ಗೌರವವಾಗಿದೆ.
ಈ ಸುದ್ದಿಯನ್ನೂ ಓದಿ: Digital Arrest: ಅಶ್ಲೀಲ ಫೋಟೋ ವೈರಲ್ ಮಾಡುವ ಬೆದರಿಕೆ; 3 ತಿಂಗಳಲ್ಲಿ 19 ಕೋಟಿ ರೂ ಕಳೆದುಕೊಂಡ ವೈದ್ಯೆ
ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೊ ಎಲ್ಲರ ಗಮನಸೆಳೆಯಿತು. ನಮ್ಮ ನಿಜವಾದ ವೀರರಿಗೆ ನಾವು ಯಾವಾಗಲೂ ನಮಸ್ಕರಿಸುತ್ತೇವೆ. ರಾಷ್ಟ್ರವು ನಿಮ್ಮನ್ನು ವಂದಿಸುತ್ತದೆ. ನಿಮ್ಮನ್ನು ಮತ್ತು ನಮ್ಮನ್ನು ರಕ್ಷಿಸುತ್ತಿರುವ ಎಲ್ಲಾ ಯೋಧರಿಗೆ ನಾವು ಯಾವಾಗಲೂ ಋಣಿಯಾಗಿರುತ್ತೇವೆ. ಜೈ ಹಿಂದ್, ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.