ವಾಷಿಂಗ್ಟನ್: ಫೇಸ್‌ಬುಕ್‌ನ (Facebook) ನೇರ ಪ್ರಸಾರದಲ್ಲಿದ್ದ ವ್ಯಕ್ತಿಯೊಬ್ಬನನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ನಡೆದಿದೆ. ಆತನ ಅಂತಿಮ ಕ್ಷಣಗಳನ್ನು ಸೆರೆಹಿಡಿಯಲಾಗಿರುವ ವಿಡಿಯೊ ಇದೀಗ ವೈರಲ್ ಆಗಿದೆ (Viral Video). ಹೌದು, 42 ವರ್ಷದ ವ್ಯಕ್ತಿಯೊಬ್ಬರು ಫೇಸ್‍ಬುಕ್‍ನಲ್ಲಿ ನೇರಪ್ರಸಾರ ಮಾಡುತ್ತಿದ್ದ ವೇಳೆ ಕೊಲ್ಲಲ್ಪಟ್ಟಿದ್ದಾರೆ. ಅಮೆರಿಕದ (America) ಚಿಕಾಗೊದ ಸೌತ್ ಆಸ್ಟಿನ್‌ನಲ್ಲಿ ಈ ಘಟನೆ ನಡೆದಿದ್ದು, ಚಿಕಾಗೊ ಪೊಲೀಸರು ಈ ಘಟನೆಯ ತನಿಖೆ ನಡೆಸುತ್ತಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೊದಲ್ಲಿ 42 ವರ್ಷದ ಕೆವಿನ್ ವ್ಯಾಟ್ಸನ್ ಎಂಬುವವರು ಕಾರಿನಲ್ಲಿ ಕುಳಿತು ಫೇಸ್‍ಬುಕ್‍ನಲ್ಲಿ ನೇರಪ್ರಸಾರ ಕೈಗೊಂಡಿದ್ದರು. ಈ ವೇಳೆ ಅವರನ್ನು ಯಾರೋ ಕೆಳಗಿಳಿಯುವಂತೆ ಹೇಳಿದ್ದಾರೆ. ಕೆಲವು ಸೆಕೆಂಡುಗಳ ನಂತರ ಗುಂಡಿನ ಸದ್ದು ಕೇಳಿ ಬಂದಿದೆ. ದುಷ್ಕರ್ಮಿಗಳು ವ್ಯಾಟ್ಸನ್ ಅವರಿಗೆ ಫೈರಿಂಗ್ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Viral Story: ವಿಮಾನದ ಕಾಕ್‍ಪಿಟ್ ಬಾಗಿಲು ಓಪನ್; ಪ್ರಯಾಣಿಕರು ಗಲಿಬಿಲಿ, ಪೈಲಟ್ ಅಮಾನತು; ನಡೆದಿದ್ದೇನು?
ದಕ್ಷಿಣ ಆಸ್ಟಿನ್‌ನ ವೆಸ್ಟ್ ಮ್ಯಾಡಿಸನ್ ಸ್ಟ್ರೀಟ್‌ನ 5000 ಬ್ಲಾಕ್‌ನಲ್ಲಿ ಆಗಸ್ಟ್ 13ರ ಸಂಜೆ 6:14ರ ಸುಮಾರಿಗೆ ಗುಂಡಿನ ದಾಳಿ ನಡೆದಿದೆ ಎಂದು ಚಿಕಾಗೊ ಪೊಲೀಸರು ವರದಿ ಮಾಡಿದ್ದಾರೆ. ವ್ಯಾಟ್ಸನ್ ಕಾರಿನಲ್ಲಿ ಕುಳಿತಿದ್ದಾಗ ಮತ್ತೊಂದು ವಾಹನ ಸಮೀಪಿಸುತ್ತಿತ್ತು. ಈ ವೇಳೆ ದುಷ್ಕರ್ಮಿಗಳು ಗುಂಡು ಹಾರಿಸಲು ಪ್ರಾರಂಭಿಸಿದರು. ವ್ಯಾಟ್ಸನ್ ಅವರ ಅಂತಿಮ ಕ್ಷಣಗಳನ್ನು ಫೇಸ್‌ಬುಕ್ ಲೈವ್‌ನಲ್ಲಿ ಸೆರೆ ಹಿಡಿಯಲಾಗಿದ್ದು, ಕುಟುಂಬಸ್ಥರು ದುಃಖದಲ್ಲಿ ಮುಳುಗಿದ್ದಾರೆ.
ವಿಡಿಯೊ ವೀಕ್ಷಿಸಿ:
NEW: Chicago man shot and k*lled while on Facebook Live, becomes the second person k*lled on that block this week.
— Collin Rugg (@CollinRugg) August 14, 2025
Horrific.
42-year-old Kevin Watson was seen on camera talking about a parking dispute when a driver approached him.
Watson then got out of the car on the 5000… pic.twitter.com/LG6fwJGgJ8
ಈ ವಾರ ಆ ಬ್ಲಾಕ್‌ನಲ್ಲಿ ಹತ್ಯೆಯಾದ ಎರಡನೇ ವ್ಯಕ್ತಿ ವ್ಯಾಟ್ಸನ್ ಎಂದು ತಿಳಿದು ಬಂದಿದೆ. ಈ ವಿಡಿಯೊವನ್ನು @CollinRugg ಎನ್ನುವ ಎಕ್ಸ್ ಕಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. 42 ವರ್ಷದ ಕೆವಿನ್ ವ್ಯಾಟ್ಸನ್ ಪಾರ್ಕಿಂಗ್ ವಿವಾದದ ಬಗ್ಗೆ ಮಾತನಾಡುತ್ತಿರುವುದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಆಗ ಒಬ್ಬ ವ್ಯಕ್ತಿ ಅವರ ಬಳಿಗೆ ಬಂದನು. ನಂತರ ವ್ಯಾಟ್ಸನ್ ವೆಸ್ಟ್ ಮ್ಯಾಡಿಸನ್ ಸ್ಟ್ರೀಟ್‌ನ 5000 ಬ್ಲಾಕ್‌ನಲ್ಲಿ ನಿಲ್ಲಿಸಿದ್ದ ತನ್ನ ಕಾರಿನಿಂದ ಇಳಿದರು. ಈ ವೇಳೆ ಗೂಂಡಾಗಳು ಅವರ ಮೇಲೆ ಫೈರಿಂಗ್ ಮಾಡಿದ್ದಾರೆ ಎಂದು ಪೋಸ್ಟ್‌ನಲ್ಲಿ ವಿವರಿಸಲಾಗಿದೆ.
ಗುರುದಾಸ್ಪುರದಲ್ಲಿ ಮಂಗಳವಾರ, 18 ವರ್ಷದ ಯುವಕನೊಬ್ಬ ಫೈರಿಂಗ್‍ನಲ್ಲಿ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಂಘೋವಾಲ್ ಗ್ರಾಮದ ಬಳಿ ಬರ್ಗರ್ ತಿನ್ನುತ್ತಿದ್ದಾಗ ದುಷ್ಕರ್ಮಿಗಳು ಫೈರಿಂಗ್ ಮಾಡಿದ್ದಾರೆ. ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಜನರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದರು.