Viral Video: ವಿಮಾನ ಹಾರಾಟದ ಮಧ್ಯೆ ಪ್ರಯಾಣಿಕರೊಬ್ಬರ ಅನಿರೀಕ್ಷಿತ ಗಿಫ್ಟ್ ನೋಡಿ ಭಾವುಕರಾದ ಗಗನಸಖಿ; ಇಲ್ಲಿದೆ ಹೃದಯಸ್ಪರ್ಶಿ ವಿಡಿಯೊ
ಇಂಡಿಗೋ ಏರ್‌ಲೈನ್ಸ್ ಚೆನ್ನೈನಿಂದ ಕೊಲ್ಲಂಗೆ ತೆರಳುತ್ತಿದ್ದ ವೇಳೆ ಹೃದಯಸ್ಪರ್ಶಿ ಘಟನೆಯೊಂದು ನಡೆದಿದೆ. ವಿಮಾನ ಹಾರಾಟದ ವೇಳೆ ಗಗನಸಖಿಯೊಬ್ಬರು ಭಾವುಕರಾದ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ತಮಿಳುನಾಡಿನ ಕಲಾವಿದ ಆಕಾಶ್ ಸೆಲ್ವರಸು ಗಗನಸಖಿಯ ಸುಂದರವಾದ ಭಾವಚಿತ್ರವನ್ನು ಬಿಡಿಸುವ ಮೂಲಕ ಪುಟ್ಟ ಉಡುಗೊರೆ ನೀಡಿದ್ದಾರೆ.


ಚೆನ್ನೈ: ವಿಮಾನ ಹಾರಾಟದ ವೇಳೆ ಗಗನಸಖಿಯೊಬ್ಬರು (Air hostess) ಭಾವುಕರಾದ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ (Social media) ವೈರಲ್ ಆಗಿದೆ (Viral Video). ಇಂಡಿಗೋ ಏರ್‌ಲೈನ್ಸ್ ಚೆನ್ನೈನಿಂದ ಕೊಲ್ಲಂಗೆ ತೆರಳುತ್ತಿದ್ದ ವೇಳೆ ಹೃದಯಸ್ಪರ್ಶಿ ಘಟನೆ ನಡೆದಿದೆ. ಆಕಾಶ್ ಸೆಲ್ವರಸು ಎಂಬ ಪ್ರಯಾಣಿಕ ಗಗನಸಖಿಯ ಭಾವಚಿತ್ರವನ್ನು ಬಿಡಿಸಿದ್ದಾರೆ. ಇದನ್ನು ನೋಡಿದ ಗಗನಸಖಿ ಭಾವುಕರಾಗಿದ್ದಾರೆ.
ವಿಮಾನ ಹಾರಾಟದ ಸಮಯದಲ್ಲಿ ತಮಿಳುನಾಡಿನ ಕಲಾವಿದ ಆಕಾಶ್ ಸೆಲ್ವರಸು ಗಗನಸಖಿಯ ಸುಂದರವಾದ ಭಾವಚಿತ್ರವನ್ನು ಬಿಡಿಸುವ ಮೂಲಕ ಪುಟ್ಟ ಉಡುಗೊರೆ ನೀಡಿದ್ದಾರೆ. ವಿಮಾನದಲ್ಲಿ ಇತರ ಪ್ರಯಾಣಿಕರಂತೆ ಸದ್ದಿಲ್ಲದೆ ಕುಳಿತಿದ್ದ ಸೆಲ್ವರಸು, ಗಗನಸಖಿಯ ಚಿತ್ರ ಬಿಡಿಸಲು ಪ್ರಾರಂಭಿಸಿದರು. ಗಗನಸಖಿ ಪ್ರಯಾಣಿಕರನ್ನು ನೋಡಿಕೊಳ್ಳುತ್ತಿರುವ ವೇಳೆ ತನ್ನ ಆಸನದಲ್ಲಿ ಬಂದು ಕುಳಿತ ಕಲಾವಿದ ವಿಮಾನದ ಟಿಕೆಟ್‍ನಲ್ಲಿ ಅವರ ಚಿತ್ರ ಬಿಡಿಸಿದ್ದಾರೆ. ಗಗನಸಖಿಗೆ ವ್ಯಕ್ತಿಯೊಬ್ಬರು ತನ್ನ ಚಿತ್ರವನ್ನು ಬಿಡಿಸುತ್ತಿದ್ದಾರೆ ಎಂಬ ಬಗ್ಗೆ ಕಲ್ಪನೆಯೇ ಇರಲಿಲ್ಲ.
ಭಾವಚಿತ್ರ ಪೂರ್ಣಗೊಂಡ ನಂತರ, ಸೆಲ್ವರಸು ರೇಖಾಚಿತ್ರವನ್ನು ಹಸ್ತಾಂತರಿಸಿದರು. ಗಗನಸಖಿ ಸಹೋದ್ಯೋಗಿಯೊಂದಿಗೆ ಕಾರ್ಯನಿರತರಾಗಿದ್ದರು. ತಮ್ಮ ರೇಖಾಚಿತ್ರವನ್ನು ನೋಡಿದ ಕೂಡಲೇ ಅವರ ಮುಖವು ಸಂತೋಷದಿಂದ ಅರಳಿತು. ಭಾವಪರವಶರಾದ ಅವರು ತಕ್ಷಣವೇ ರೇಖಾಚಿತ್ರವನ್ನು ತಮ್ಮ ಸಹೋದ್ಯೋಗಿಗಳೊಂದಿಗೆ ಹಂಚಿಕೊಂಡರು. ತುಂಬಾ ಸಂತೋಷಗೊಂಡ ಗಗನಸಖಿ ಸೆಲ್ವರಸು ಅವರಿಗೆ ಧನ್ಯವಾದ ಅರ್ಪಿಸಿದರು.
ಇದನ್ನೂ ಓದಿ: Viral News: ನಿಧಿ ಹುಡುಕಾಟದಲ್ಲಿ ಪತ್ತೆಯಾಯ್ತು 1,500 ವರ್ಷಗಳಷ್ಟು ಹಳೆಯ ಚಿನ್ನದ ಹಾರ!
ಸದ್ಯ ಈ ವಿಡಿಯೊ ಭಾರಿ ವೈರಲ್ (Viral Video) ಆಗಿದೆ. ನನಗೆ ನಂಬಲು ಸಾಧ್ಯವಾಗುತ್ತಿಲ್ಲ, ನಿಮ್ಮ ಪ್ರೀತಿಗೆ ತುಂಬಾ ಧನ್ಯವಾದಗಳು ಎಂದು ಸಾಮಾಜಿಕ ಮಾಧ್ಯಮದಲ್ಲಿ ಗಗನಸಖಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಬಳಕೆದಾರರು ಸೆಲ್ವರಸು ಅವರ ಪ್ರತಿಭೆ ಮತ್ತು ಕಲ್ಪನಾ ಶಕ್ತಿಯನ್ನು ಹೊಗಳಿದರೆ, ಇತರರು ಅದ್ಭುತ ರೇಖಾಚಿತ್ರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸೆಲ್ವರಸು ತನ್ನ ಕಲೆಯ ಮೂಲಕ ಮೆಚ್ಚಿಸಿದ್ದು ಇದೇ ಮೊದಲಲ್ಲ. ಅನಂತಪುರಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನಲ್ಲಿ ರೈಲು ಪ್ರಯಾಣದ ಸಮಯದಲ್ಲಿ, ಟಿಕೆಟ್ ಪರೀಕ್ಷಕ (ಟಿಟಿಇ)ನ ರೇಖಾಚಿತ್ರ ಬಿಡಿಸಿ ನಂತರ ಅವರಿಗೆ ಹಸ್ತಾಂತರಿಸಿದ್ದರು. ಟಿಕೆಟ್ ಪರಿಶೀಲನೆಯಲ್ಲಿ ನಿರತರಾಗಿದ್ದ ಟಿಟಿಇ ಕೂಡ ತನ್ನ ರೇಖಾಚಿತ್ರ ನೋಡಿ ಭಾವುಕರಾಗಿದ್ದರು. ಪ್ರಯಾಣಿಕರು ಆ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದರು. ಟಿಟಿಇ ಅವರ ಸಭ್ಯತೆ ತನಗೆ ಖುಷಿ ಕೊಟ್ಟಿತು. ಹೀಗಾಗಿ ಅವರ ಚಿತ್ರ ಬಿಡಿಸಿ ಉಡುಗೊರೆ ನೀಡಿದ್ದಾಗಿ ಸೆಲ್ವರಸು ಹೇಳಿದ್ದರು.
ಇದನ್ನೂ ಓದಿ: Tragic Accident: ಮೇಲ್ಸೇತುವೆ ಮೇಲಿಂದ ಕೆಳಕ್ಕೆ ಬಿದ್ದ ಕಬ್ಬಿಣದ ತುಂಡುಗಳು; ಸ್ಕೂಟರ್ ಸವಾರ ಗಂಭೀರ, ಸಿಸಿಟಿವಿ ವಿಡಿಯೊ ವೈರಲ್