ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಹೋಟೆಲ್‍ನ ಶೌಚಾಲಯದಲ್ಲಿ ಹೆಡೆ ಎತ್ತಿ ಕುಳಿತ ನಾಗರಹಾವು; ವಿಷಸರ್ಪ ನೋಡಿ ಹೌಹಾರಿದ ಅತಿಥಿಗಳು

Man Spots Giant Cobra: ಹೋಟೆಲ್‍ನ ಶೌಚಾಲಯದೊಳಗೆ ಹೋದ ಅತಿಥಿಗಳು ದಿಗ್ಭ್ರಮೆಗೊಳಗಾದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಕಮೋಡ್‍ನಲ್ಲಿ 5 ಅಡಿ ಉದ್ದದ ಬುಸ್ ಬುಸ್ ನಾಗರಹಾವು ಹೆಡೆ ಎತ್ತಿ ಕುಳಿತಿರುವುದನ್ನು ನೋಡಿ ಹೌಹಾರಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಜೈಪುರ: ಹೋಟೆಲ್ ಒಂದರಲ್ಲಿ ಉಳಿದುಕೊಳ್ಳಲು ಹೋದಾಗ ಅತಿಥಿಗಳು ದಿಗ್ಭ್ರಮೆಗೊಳಗಾಗುವಂತಹ ಘಟನೆ ನಡೆದಿದೆ. ರಾಜಸ್ಥಾನದ (Rajasthan) ಹೋಟೆಲ್‍ಗೆ ಅತಿಥಿಗಳು ಶೌಚಾಲಯದೊಳಗೆ ಹೋದಾಗ 5 ಅಡಿ ಉದ್ದದ ನಾಗರಹಾವನ್ನು ನೋಡಿದ್ದಾರೆ. ಯಾತ್ರಾ ಸ್ಥಳವಾದ ಅಜ್ಮೀರ್‌ನ ಪುಷ್ಕರ್‌ನಲ್ಲಿರುವ ಹೋಟೆಲ್‌ನ ಎರಡನೇ ಮಹಡಿಯಲ್ಲಿ ಈ ಘಟನೆ ಸಂಭವಿಸಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನಾಗರಹಾವು ಶೌಚಾಲಯದ ಕಮೋಡ್ ಒಳಗಿನಿಂದ ಹೆಡೆಯೆತ್ತಿರುವುದನ್ನು ವಿಡಿಯೊದಲ್ಲಿ (Viral Video) ನೋಡಬಹುದು.

ಕೂಡಲೇ ಹೋಟೆಲ್ ಸಿಬ್ಬಂದಿಗೆ ಅತಿಥಿಗಳು ಮಾಹಿತಿ ನೀಡಿದ್ದಾರೆ. ಹೋಟೆಲ್ ಆಡಳಿತ ಮಂಡಳಿಯು ತಕ್ಷಣ ರಾಜಸ್ಥಾನ ಕೋಬ್ರಾ ತಂಡಕ್ಕೆ ಘಟನೆಯ ಬಗ್ಗೆ ಮಾಹಿತಿ ನೀಡಿ, ಹಾವನ್ನು ರಕ್ಷಿಸಲಾಯಿತು. ವಿಡಿಯೊದಲ್ಲಿ ಒಬ್ಬ ಮಹಿಳೆ, ಈಗ ನಾವು ಇಲ್ಲಿ ಕುಳಿತುಕೊಳ್ಳುವ ಮೊದಲು ಎಚ್ಚರಿಕೆಯಿಂದ ಯೋಚಿಸುತ್ತೇವೆ ಎಂದು ಹೇಳುವುದನ್ನು ಕೇಳಬಹುದು. ಇನ್ನೊಬ್ಬ ವ್ಯಕ್ತಿ, ನಾನು ಇಲ್ಲಿ ಕುಳಿತುಕೊಳ್ಳುವುದೇ ಇಲ್ಲ ಎಂದು ಹೇಳಿದರು. ಈ ನಾಗರಹಾವು ಎರಡನೇ ಮಹಡಿಗೆ ಹೇಗೆ ತಲುಪಿತು? ಎಂದು ಅಲ್ಲಿದ್ದವರು ಅಚ್ಚರಿಪಟ್ಟಿದ್ದಾರೆ.

ಈ ಭಯಾನಕ ಘಟನೆಯ ಬಗ್ಗೆ ಜನರು ಕಾಮೆಂಟ್ ಮಾಡುವುದರೊಂದಿಗೆ ವಿಡಿಯೊ ತ್ವರಿತವಾಗಿ ವೈರಲ್ ಆಯಿತು. ಹೋಟೆಲ್ ಶೌಚಾಲಯದಲ್ಲಿ ಹಾವು ಇರುವುದನ್ನು ನೋಡಿ ಅನೇಕ ಜನರು ಆಘಾತಕ್ಕೊಳಗಾದರು. ಆದರೆ ಇತರರು ಇದೇ ರೀತಿಯ ಅನುಭವಗಳನ್ನು ಹೇಳಿದರು.

ವಿಡಿಯೊ ವೀಕ್ಷಿಸಿ:



ನಾನು ಪ್ರತಿ ರಾತ್ರಿ ಶೌಚಾಲಯಕ್ಕೆ ಹೋದಾಗಲೂ ಇದು ನನ್ನನ್ನು ದುಃಸ್ವಪ್ನದಂತೆ ಕಾಡುತ್ತದೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ನೀವು ಈ ಶೌಚಾಲಯದ ಮೇಲೆ ಕುಳಿತ ತಕ್ಷಣ, ನಿಮ್ಮ ಎಲ್ಲ ಪಾಪಗಳು ತೊಳೆದುಹೋಗುತ್ತವೆ ಎಂದು ಮತ್ತೊಬ್ಬ ಬಳಕೆದಾರರು ಹಾಸ್ಯ ಮಾಡಿದರು. ಒಮ್ಮೆ ಕಪ್ಪೆ ಇದ್ದಕ್ಕಿದ್ದಂತೆ ತನ್ನ ಶೌಚಾಲಯದ ಸೀಟಿನಿಂದ ಹೊರಗೆ ಹಾರಿತು ಎಂದು ಮಗದೊಬ್ಬ ಬಳಕೆದಾರರು ತಮ್ಮ ಅನುಭವವನ್ನು ಹಂಚಿಕೊಂಡರು.

ಶೌಚಾಲಯದೊಳಗೆ ಹಾವು ಅಡಗಿ ಕೂತದ್ದಕ್ಕೆ ರಕ್ಷಣೆ ಸವಾಲಿನದ್ದಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಶಸ್ವಿ ಕಾರ್ಯಾಚರಣೆಯ ನಂತರ, ತಂಡವು ಹತ್ತಿರದ ಕಾಡಿಗೆ ನಾಗರಹಾವನ್ನು ಯಶಸ್ವಿಯಾಗಿ ಬಿಟ್ಟಿದೆ.

ಕಳೆದ ವಾರ ಕೋಟಾ ನಗರದ ನಯಾಪುರ ಪ್ರದೇಶದಲ್ಲಿರುವ ಎಂಬಿಎಸ್ ಮತ್ತು ಜೆಕೆ ಲೋನ್ ಆಸ್ಪತ್ರೆಯ ಆವರಣದಲ್ಲಿರುವ ನಿವಾಸಿ ವೈದ್ಯರ ಪಿಜಿ ಹಾಸ್ಟೆಲ್‌ಗೆ ವಿಷಪೂರಿತ ಹಾವೊಂದು ಪ್ರವೇಶಿಸಿದಾಗ ಇದೇ ರೀತಿಯ ಘಟನೆ ಸಂಭವಿಸಿತ್ತು. ಶೌಚಾಲಯದಲ್ಲಿ ಹೆಡೆಯಿತ್ತಿ ಕೂತಿದ್ದ ಕರಿ ನಾಗರಹಾವನ್ನು ನೋಡಿ ವೈದ್ಯರು ಗಾಬರಿಗೊಂಡಿದ್ದರು. ಹಾವು ಒಳಗೆ ಹೋಗುತ್ತಿದ್ದಂತೆ ಅವರು ಭಯಭೀತರಾಗಿ ತಮ್ಮ ಕೋಣೆಗಳಿಂದ ಹೊರಗೆ ಓಡಿಹೋದರು. ವರದಿಗಳ ಪ್ರಕಾರ, ನಾಗರಹಾವು ಶೌಚಾಲಯದ ಪೈಪ್ ಮೂಲಕ ಕಮೋಡ್‌ಗೆ ಪ್ರವೇಶಿಸಿ ನಂತರ ಹಾಸ್ಟೆಲ್ ಕೋಣೆಗೆ ಪ್ರವೇಶಿಸಿತು.

2024ರ ಆರಂಭದಲ್ಲಿ, ಬೆಂಗಳೂರಿನ ಜೆಪಿ ನಗರದಲ್ಲಿ ಭಾರಿ ಮಳೆಯಾದ ನಂತರ ಶೌಚಾಲಯದಲ್ಲಿ ಐದು ಅಡಿ ಉದ್ದದ ನಾಗರಹಾವು ಕಂಡುಬಂದಿತ್ತು. ಆ ಸರೀಸೃಪವನ್ನು ರಕ್ಷಿಸಿ ನಂತರ ಕಾಡಿಗೆ ಬಿಡಲಾಯಿತು.

ಇದನ್ನೂ ಓದಿ: Viral Video: ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಲ್ಯಾಂಬೋರ್ಘಿನಿ ಕಾರು; ವಿಡಿಯೊ ವೈರಲ್