Viral Video: ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಲ್ಯಾಂಬೋರ್ಘಿನಿ ಕಾರು; ವಿಡಿಯೊ ವೈರಲ್
Lamborghini Crashes into Divider: ಲ್ಯಾಂಬೋರ್ಘಿನಿ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಘಟನೆ ಮುಂಬೈನಲ್ಲಿ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಘಟನೆಯ ನಂತರದ ದೃಶ್ಯಾವಳಿಗಳನ್ನು ತೋರಿಸಲಾಗಿದೆ. ಕಿತ್ತಳೆ ಬಣ್ಣದ ಐಷಾರಾಮಿ ಲ್ಯಾಂಬೋರ್ಘಿನಿ ಕಾರು ಜಖಂಗೊಂಡಿದೆ.

-

ಮುಂಬೈ: ಐಷಾರಾಮಿ ಲ್ಯಾಂಬೋರ್ಘಿನಿ (Lamborghini) ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಜಖಂಗೊಂಡ ಘಟನೆ ಮುಂಬೈನಲ್ಲಿ ನಡೆದಿದೆ. ಶನಿವಾರ ಬೆಳಿಗ್ಗೆ 9:15 ರ ಕಾರು ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಮಳೆ ಬರುತ್ತಿರುವ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ (social media) ವೈರಲ್ ಆಗಿರುವ ವಿಡಿಯೊದಲ್ಲಿ (Viral Video) ಘಟನೆಯ ನಂತರದ ದೃಶ್ಯಾವಳಿಗಳನ್ನು ತೋರಿಸಲಾಗಿದೆ.
ಈ ವಿಡಿಯೊದಲ್ಲಿ ಕಿತ್ತಳೆ ಬಣ್ಣದ ಲ್ಯಾಂಬೋರ್ಘಿನಿ ಕಾರು ಜಖಂಗೊಂಡ ಸ್ಥಿತಿಯಲ್ಲಿರುವುದನ್ನು ಕಾಣಬಹುದಾಗಿದೆ. ಅಪಘಾತ ಸಂಭವಿಸುವ ಕೆಲವು ಕ್ಷಣಗಳ ಮೊದಲು, ನಿಯಂತ್ರಣ ತಪ್ಪಿದ ಕಾರು ಕೂಡ ವಿಡಿಯೊದಲ್ಲಿ ಸೆರೆಯಾಗಿದೆ. ಐಷಾರಾಮಿ ಕಾರಿನ ಮುಂಭಾಗಕ್ಕೆ ಗಮನಾರ್ಹ ಹಾನಿಯಾಗಿದ್ದು, ಬಂಪರ್ ಮತ್ತು ಹುಡ್ ಜಖಂಗೊಂಡಿದೆ. ಮುಂಭಾಗದ ಟ್ರಂಕ್ ತೆರೆದಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಇದು ಕಾರಿಗೆ ಎಷ್ಟು ಹಾನಿಯಾಗಿದೆ ಎಂಬುದನ್ನು ತೋರಿಸುತ್ತದೆ. ಹಲವಾರು ಮಂದಿ ಕಾರಿನ ಸುತ್ತಲೂ ನಿಂತಿರುವುದು ಕಂಡುಬಂದಿದೆ.
ವಿಡಿಯೊ ವೀಕ್ಷಿಸಿ:
ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ತಲುಪಿದ್ದು, ಇಲ್ಲಿಯವರೆಗೆ ಯಾವುದೇ ಗಾಯಗಳ ಬಗ್ಗೆ ವರದಿಯಾಗಿಲ್ಲ. ರೇಮಂಡ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಬಳಕೆದಾರರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಮುಂಬೈನ ಕರಾವಳಿ ರಸ್ತೆಯಲ್ಲಿ ಬೆಳಗ್ಗೆ 9:15ಕ್ಕೆ ಲ್ಯಾಂಬೋರ್ಘಿನಿ ಕಾರಿನ ಅಪಘಾತ ಸಂಭವಿಸಿದೆ. ಈ ಕಾರುಗಳು ನಿಯಂತ್ರಣಕ್ಕೆ ಸಿಗುವುದಿಲ್ಲವೆ? ಲ್ಯಾಂಬೋರ್ಘಿನಿಗೆ ಏನಾಗುತ್ತಿದೆ ಎಂದು ವಿಡಿಯೊಗೆ ಶೀರ್ಷಿಕೆ ನೀಡಿ ಪೋಸ್ಟ್ ಮಾಡಲಾಗಿದೆ.
ಇದನ್ನೂ ಓದಿ: Viral Video: ಪೊಲೀಸ್ ಠಾಣೆಯ ಹೊರಗೆ ಮಹಿಳೆಯ ಹೈಡ್ರಾಮಾ! ಈ ವಿಡಿಯೊ ನೋಡಿ
ಪೊಲೀಸರ ವರದಿ ಪ್ರಕಾರ, ಮಳೆಯಿಂದ ನೆನೆದ ರಸ್ತೆಗಳಿಂದಾಗಿ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಮತ್ತೊಂದು ವಿಡಿಯೊದಲ್ಲಿ, ನಗರದಲ್ಲಿ ಮಳೆ ಸುರಿಯುತ್ತಿರುವಾಗ ಅಪಘಾತ ಸಂಭವಿಸುವ ಮೊದಲು ಕಾರು ವೃತ್ತಾಕಾರವಾಗಿ ತಿರುಗುತ್ತಿರುವುದನ್ನು ಕಾಣಬಹುದು. ಕಾರಿನ ಚಾಲಕನನ್ನು 52 ವರ್ಷದ ಅತಿಶ್ ಶಾ ಎಂದು ಗುರುತಿಸಲಾಗಿದ್ದು, ಚಕ್ರಗಳ ನಿಯಂತ್ರಣ ತಪ್ಪಿದ ಪರಿಣಾಮ ಕಾರು ರಸ್ತೆಯಲ್ಲಿ ಸ್ಕಿಡ್ ಆಗಿ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಷಾ ಅವರು ನೆಪಿಯನ್ ಸಮುದ್ರ ತೀರದಿಂದ ದಕ್ಷಿಣ ಮುಂಬೈನ ಕೊಲಾಬಾಗೆ ಕಾರಿನಲ್ಲಿ ಹೋಗುತ್ತಿದ್ದರು ಎನ್ನಲಾಗಿದೆ. ಅಧಿಕಾರಿಯ ಪ್ರಕಾರ, ಹಾನಿಗೊಳಗಾದ ಕಾರನ್ನು ನಂತರ ರಸ್ತೆಯಿಂದ ದೂರ ಎಳೆದುಕೊಂಡು ಹೋಗಲಾಯಿತು. ದುಡುಕಿನ ಚಾಲನೆಗಾಗಿ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಷಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.