ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಹುಡುಗಿಯರನ್ನು ಇಂಪ್ರೆಸ್‌ ಮಾಡೋಕೆ ಕಾಲೇಜಿನ ಮುಂದೆ ಶರ್ಟ್ ಲೆಸ್ ಸ್ಟಂಟ್; ಆಮೇಲೆ ನಡೆದಿದ್ದೇನು ಗೊತ್ತಾ?

Man’s Shirtless Stunt: ಹುಡುಗಿಯರ ಕಾಲೇಜಿನ ಹೊರಗೆ ಯುವಕನೊಬ್ಬ ತನ್ನ ಶರ್ಟ್ ಬಿಚ್ಚಿ ಸ್ಟಂಟ್ ಪ್ರದರ್ಶಿಸಿದ್ದಾನೆ. ಈ ಅಸಭ್ಯ ವರ್ತನೆಗೆ ವಿದ್ಯಾರ್ಥಿನಿಯರು ಸೇರಿದಂತೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ವಿಡಿಯೊ ವೈರಲ್ ಆಗಿದೆ.

ಜೈಪುರ: ಹುಡುಗಿಯರ ಕಾಲೇಜಿನ ಹೊರಗೆ ಯುವಕನೊಬ್ಬ ಅಸಭ್ಯ ವರ್ತನೆ ತೋರಿದ ಘಟನೆ ರಾಜಸ್ಥಾನದ (Rajasthan) ಭರತ್‌ಪುರದ ಬಯಾನಾ ಪಟ್ಟಣದಲ್ಲಿ ನಡೆದಿದೆ. ಇದು ವಿದ್ಯಾರ್ಥಿನಿಯರು, ಪೋಷಕರು ಮತ್ತು ಸ್ಥಳೀಯ ನಿವಾಸಿಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ವರದಿಗಳ ಪ್ರಕಾರ, ದೇವನಾರಾಯಣ್ ಹುಡುಗಿಯರ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಸಲಾಬಾದ್ ಗ್ರಾಮದ ಸಾಹಿಲ್ ಖಾನ್ ಎಂಬ ವ್ಯಕ್ತಿ ಅಸಭ್ಯವಾಗಿ ವರ್ತಿಸಿದಾತ. ಈತ ತನ್ನ ಶರ್ಟ್ ತೆಗೆದು ವಿದ್ಯಾರ್ಥಿನಿಯರ ಮುಂದೆ ಶಕ್ತಿ ಪ್ರದರ್ಶನ (shirtless stunt) ತೋರಿದ್ದಾನೆ. ಅಲ್ಲದೆ, ಈ ದೃಶ್ಯವನ್ನು ಚಿತ್ರೀಕರಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾನೆ. ಈ ವಿಡಿಯೊ ವೈರಲ್ (Viral Video) ಆಗುತ್ತಿದ್ದಂತೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ವಿಡಿಯೊ ವೀಕ್ಷಿಸಿ:



ಯುವಕನ ವಿರುದ್ಧ ಕಾಲೇಜು ಉಪನ್ಯಾಸಕರು ಮತ್ತು ಸ್ಥಳೀಯ ನಾಗರಿಕರಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಶಿಕ್ಷಣ ಸಂಸ್ಥೆಯಲ್ಲಿ ಸಭ್ಯತೆಯ ಉಲ್ಲಂಘನೆಯ ಬಗ್ಗೆ ವಿದ್ಯಾರ್ಥಿನಿಯರು ಮತ್ತು ಅವರ ಪೋಷಕರು ಆಕ್ರೋಶಗೊಂಡಿದ್ದಾರೆ. ಈ ಬಗ್ಗೆ ದೂರು ನೀಡಲಾಗಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಸರ್ಕಲ್ ಆಫೀಸರ್ ಕೃಷ್ಣರಾಜ್ ಜಂಗಿಡ್ ಅವರು ವಿಡಿಯೊದ ತನಿಖೆ ನಡೆಸಿ ಆರೋಪಿಯನ್ನು ಪತ್ತೆಹಚ್ಚಲು ವಿಶೇಷ ಪೊಲೀಸ್ ತಂಡವನ್ನು ರಚಿಸಿದರು.

ಶೀಘ್ರದಲ್ಲೇ ಸಾಹಿಲ್ ಖಾನ್‍ನನ್ನು ಪತ್ತೆಹಚ್ಚಿ ಬಂಧಿಸಲಾಯಿತು. ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದಾಗ, ಆತ ಕೈಮುಗಿದು ಕ್ಷಮೆಯಾಚಿಸಿದ್ದಾನೆ ಎನ್ನಲಾಗಿದೆ. ಪೊಲೀಸರು ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (BNSS) ಸೆಕ್ಷನ್ 170 ರ ಅಡಿಯಲ್ಲಿ ದುರ್ನಡತೆಗಾಗಿ ಪ್ರಕರಣ ದಾಖಲಿಸಿದ್ದಾರೆ. ವಿಶೇಷವಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಬೇಜವಾಬ್ದಾರಿ ಕೃತ್ಯಗಳನ್ನು ಸಹಿಸಲಾಗುವುದಿಲ್ಲ ಎಂದು ಅಧಿಕಾರಿಗಳು ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ: Viral News: ಸರ್ಜರಿ ಮಾಡುತ್ತಿರುವಾಗ ಸೆಲ್ಫಿ ತೆಗೆದು ಪೋಸ್ಟ್- ವೈದ್ಯನ ಲೈಸೆನ್ಸ್‌ ಕ್ಯಾನ್ಸಲ್‌!