ಪಾಟ್ನಾ: ಚಲಿಸುತ್ತಿರುವ ರೈಲಿನಲ್ಲಿ ಇಬ್ಬರು ಯುವಕರು ಕೋಲಿನಿಂದ ಪ್ರಯಾಣಿಕರ ಮೇಲೆ ಹಲ್ಲೆ ನಡೆಸುತ್ತಿರುವ ಆಘಾತಕಾರಿ ಘಟನೆ ಬಿಹಾರ (Bihar)ದಲ್ಲಿ ನಡೆದಿದೆ. ಈ ಘಟನೆಯನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣ (social media)ದಲ್ಲಿ ಲೈಕ್ಸ್, ಕಾಮೆಂಟ್ ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಈ ದುಷ್ಕೃತ್ಯ ನಡೆದಿದೆ ಎನ್ನಲಾಗಿದೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್(Viral Video) ಆಗುತ್ತಿದ್ದು, ಕೆಲವು ಕಿಡಿಗೇಡಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಿಹಾರದ ಭೋಜ್‌ಪುರ ಜಿಲ್ಲೆಯ ನಾಗ್ರಿ ಹಾಲ್ಟ್ ಬಳಿ ನಡೆದ ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಹಂಚಿಕೊಂಡಿರುವ ಈ ವಿಡಿಯೊದಲ್ಲಿ, ಇಬ್ಬರು ವ್ಯಕ್ತಿಗಳು ಜಾಕೆಟ್ ಮತ್ತು ಜೀನ್ಸ್ ಧರಿಸಿ, ರೈಲ್ವೆ ಹಳಿಗಳ ಪಕ್ಕದಲ್ಲಿ ಕೋಲು ಹಿಡಿದು ನಿಂತಿರುವುದನ್ನು ತೋರಿಸಲಾಗಿದೆ. ರೈಲು ಹಾದುಹೋಗುವಾಗ, ಅವರಲ್ಲಿ ಒಬ್ಬಾತ ಬಾಗಿಲಿನ ಬಳಿ ಫುಟ್‌ಬೋರ್ಡ್‌ಗಳಲ್ಲಿ ಕುಳಿತಿದ್ದ ಪ್ರಯಾಣಿಕರಿಗೆ ಕೋಲಿನಿಂದ ಹೊಡೆದಿದ್ದಾನೆ.
ಆರ್‌ಪಿಎಫ್ ಹಂಚಿಕೊಂಡ ಇನ್ನೊಂದು ವಿಡಿಯೊದಲ್ಲಿ, ಆರ್‌ಪಿಎಫ್ ಠಾಣೆಯಲ್ಲಿ ಪೊಲೀಸರ ಹಿಂದೆ ಇಬ್ಬರು ಆರೋಪಿಗಳು ನಿಂತಿರುವುದನ್ನು ನೋಡಬಹುದು. ಅವರ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಗಮನಸೆಳೆಯುವ ಉದ್ದೇಶದಿಂದ ಆರೋಪಿಗಳು ಈ ರೀತಿ ಹಲ್ಲೆ ಮಾಡಿದ್ದಾರೆ ಎಂದು ಆರ್‌ಪಿಎಫ್ ತಿಳಿಸಿದೆ. ಬಿಹಾರದ ನಾಗರಿಹಾಲ್ಟ್ ಬಳಿ ರೈಲು ದಾಟುವಾಗ ಪ್ರಯಾಣಿಕರ ಮೇಲೆ ಹಲ್ಲೆ ನಡೆಸುತ್ತಿರುವ ವೈರಲ್ ವಿಡಿಯೊ ಸಂಬಂಧ ಯುವಕರನ್ನು ಬಂಧಿಸಲಾಗಿದೆ. ಎಫ್ಐಆರ್ ಕೂಡ ದಾಖಲಿಸಲಾಗಿದೆ. ಇತರರನ್ನು ಪತ್ತೆಹಚ್ಚಲಾಗುತ್ತಿದ್ದು, ತನಿಖೆ ನಡೆಯುತ್ತಿದೆ” ಎಂದು ಆರ್‌ಪಿಎಫ್, ಎಕ್ಸ್‌ನಲ್ಲಿ ತಿಳಿಸಿದೆ.
ವಿಡಿಯೊ ವೀಕ್ಷಿಸಿ:
#RPF arrested 02 youths for attacking passengers in a viral video shot near #NagriHalt, Bihar, during the crossing of train.
— RPF INDIA (@RPF_INDIA) July 30, 2025
FIR registered, others are being traced.
Investigation underway.#RailwaySafety #BiharNews @rpfecrhq1 @RailMinIndia pic.twitter.com/YwquLQaImo
ರೈಲಿನಲ್ಲಿರುವವರಿಗೆ ಮಾತ್ರವಲ್ಲದೆ ಅದನ್ನು ಮಾಡುವವರಿಗೂ ಇದು ಅತ್ಯಂತ ಅಪಾಯಕಾರಿ ಎಂದು ಅವರು ಎಚ್ಚರಿಸಿದ್ದಾರೆ. ಲೈಕ್ಸ್ ಮತ್ತು ಖ್ಯಾತಿಗಾಗಿ ಅಪಾಯಕಾರಿ ವಿಡಿಯೊಗಳನ್ನು ಮಾಡುವುದು ಕಠಿಣ ಶಿಕ್ಷೆಗೆ ಕಾರಣವಾಗಬಹುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Rajinikanth: ಕಾಲು ಜಾರಿ ಬಿದ್ರಾ ನಟ ರಜನಿಕಾಂತ್? ವೈರಲ್ ವಿಡಿಯೊದ ಅಸಲಿಯತ್ತೇನು?
ಈ ದೃಶ್ಯದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ. ಆರ್‌ಪಿಎಫ್ ತ್ವರಿತ ಕ್ರಮ ಕೈಗೊಂಡಿರುವುದು ಶ್ಲಾಘನೀಯ. ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಂತಹ ಘಟನೆಗಳನ್ನು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.