Rajinikanth: ಕಾಲು ಜಾರಿ ಬಿದ್ರಾ ನಟ ರಜನಿಕಾಂತ್? ವೈರಲ್ ವಿಡಿಯೊದ ಅಸಲಿಯತ್ತೇನು?
ತಮಿಳು ನಟ ರಜನಿಕಾಂತ್ ಚೆನ್ನೈ ಯ ತಮ್ಮ ಮನೆಯ ಗಾರ್ಡನ್‌ನಲ್ಲಿ ಕಾಲು ಸ್ಲಿಪ್ ಆಗಿ ಬಿದ್ದಿದ್ದಾರೆ ಎಂದು ಹೇಳುವ ವಿಡಿಯೋ ಒಂದು ಇತ್ತೀಚೆಗಷ್ಟೆ ವೈರಲ್ ಆಗಿತ್ತು. ಆದರೆ ವೈರಲ್ ಆಗುತ್ತಿರುವ ವಿಡಿಯೊದಲ್ಲಿ ಇರುವುದು ನಟ ರಜನಿಕಾಂತ್ ಅಲ್ಲ ಎಂಬುದು ದೃಢ ಪಟ್ಟಿದೆ. ಹಾಗಾದರೆ ಈ ವಿಡಿಯೊದಲ್ಲಿ ರಜನೀಕಾಂತ್ ಅವರಂತೆ ಕಾಣುವ ಆ ವ್ಯಕ್ತಿ ಯಾರು ಎಂಬ ಬಗ್ಗೆ ಚರ್ಚೆ ಕೂಡ ಜೋರಾಗಿ ನಡೆಯುತ್ತಿದೆ.

Rajinikanth

ಚೆನ್ನೈ: ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ತಮ್ಮ ಅದ್ಭುತ ಅಭಿನಯದ ಮೂಲಕವೇ ಅಭಿಮಾನಿಗಳ ಮನಗೆದ್ದ ಇವರಿಗೆ ದೊಡ್ಡ ಫ್ಯಾನ್ಸ್ ಬಳಗವೇ ಇದೆ. ಈಗಲೂ ಯಂಗ್ ಲುಕ್‌ನಲ್ಲಿ ಮಾಸ್ ಎಂಟ್ರಿ ನೀಡಿ ಸಿನಿಮಾದಲ್ಲಿ ಮಿಂಚುವ ಇವರಿಗೆ ಭರ್ಜರಿ ಸಿನಿಮಾ ಆಫರ್ಸ್ ಕೂಡ ಬರುತ್ತಲೇ ಇದೆ. ಆದರೆ ನಟ ರಜನಿಕಾಂತ್ ಇತ್ತೀಚೆಗಷ್ಟೆ ಕಾಲು ಜಾರಿಬಿದ್ದಿದ್ದಾರೆ ಎಂದು ಹೇಳುವ ವಿಡಿಯೊ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೊ ನೋಡಿದ ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಳವಳ ವ್ಯಕ್ತಪಡಿಸಿದ್ದರು. ಇದೀಗ ವಿಡಿಯೊದ ಹಿಂದಿನ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಅಸಲಿಗೆ ವಿಡಿಯೊದಲ್ಲಿರುವುದು ರಜನಿಕಾಂತ್ ಅಲ್ಲವೇ ಅಲ್ಲ ಎನ್ನುವುದು ದೃಢಪಟ್ಟಿದೆ.
ತಮಿಳು ನಟ ರಜನಿಕಾಂತ್ ಚೆನ್ನೈಯ ತಮ್ಮ ಮನೆಯ ಗಾರ್ಡನ್‌ನಲ್ಲಿ ಓಡಾಡುತ್ತಿರುವಾಗ ಕಾಲು ಜಾರಿ ಬಿದ್ದಿದ್ದಾರೆ ಎಂದು ಹೇಳುವ ವಿಡಿಯೊ ವೈರಲ್ ಆಗಿತ್ತು. ಆದರೆ ವೈರಲ್ ಆಗುತ್ತಿರುವ ವಿಡಿಯೊದಲ್ಲಿರುವುದು ನಟ ರಜನಿಕಾಂತ್ ಅಲ್ಲ ಎಂಬುದು ಇದೀಗ ದೃಢ ಪಟ್ಟಿದೆ. ಹಾಗಾದರೆ ಈ ವಿಡಿಯೊದಲ್ಲಿ ರಜನಿಕಾಂತ್ ಅವರಂತೆ ಕಾಣುವ ಆ ವ್ಯಕ್ತಿ ಯಾರು ಎಂಬ ಬಗ್ಗೆ ಚರ್ಚೆ ಕೂಡ ನಡೆಯುತ್ತಿದೆ. ಉಡುಪಿಯ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ವಿಡಿಯೊ ಇದಾಗಿದ್ದು ಇತ್ತೀಚೆಗಷ್ಟೆ ಈ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಅವರು ಹಂಚಿಕೊಂಡಿದ್ದರು.
ಈ ವಿಚಾರ ತಿಳಿದ ಅಭಿಮಾನಿಗಳು ನಾನಾ ಬಗೆಯ ಕಾಮೆಂಟ್ ಹಾಕಿದ್ದಾರೆ. ಇವರು ಸೈಡ್ ಆ್ಯಂಗಲ್‌ನಲ್ಲಿ ರಜನಿ ಸರ್ ತರವೇ ಇದ್ದಾರೆ ಎಂದು ಸೋಶಿಯಲ್ ಮೀಡಿಯಾ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ. ರಜನಿಕಾಂತ್ ಎಂದು ಹೇಳಿ ಗಾಸಿಪ್ ಸುದ್ದಿ ಹರಡಬೇಡಿ ಎಂದು ಮತ್ತೊಬ್ಬರು ಮನವಿ ಮಾಡಿದ್ದಾರೆ.
ಇದನ್ನು ಓದಿ:Rajanivaasa Movie: ಟ್ರೇಲರ್‌ನಲ್ಲೇ ಕುತೂಹಲ ಮೂಡಿಸಿದೆ ʼರಾಜನಿವಾಸʼ ಚಿತ್ರ
ಸದ್ಯ ನಟ ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಬಹುನಿರೀಕ್ಷಿತ ʼಕೂಲಿʼ ಸಿನಿಮಾ ಪೂರ್ತಿ ಗೊಳಿಸಿದ್ದು ಬಿಡುಗಡೆಗೆ ಸಜ್ಜಾಗಿದೆ. ಲೋಕೇಶ್ ಕನಗರಾಜ್ ನಿರ್ದೇಶನದ ಈ ಸಿನಿಮಾದಲ್ಲಿ ಶ್ರುತಿ ಹಾಸನ್, ನಾಗಾರ್ಜುನ, ಉಪೇಂದ್ರ, ಸೌಬಿನ್ ಶಾಹಿರ್, ಸತ್ಯರಾಜ್, ರೆಬಾ ಮೋನಿಕಾ ಜಾನ್, ಜೂನಿಯರ್ ಎಂಜಿಆರ್, ಮೋನಿಶಾ ಬ್ಲೆಸ್ಸಿ ಮತ್ತು ಕಾಳಿ ವೆಂಕಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆ. 14ರಂದು ಈ ಸಿನಿಮಾ ರಿಲೀಸ್ ಆಗಲಿದ್ದು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.