ನವದೆಹಲಿ: ಭಾರತೀಯ ಸಮಾಜದಲ್ಲಿ, ತಾಯಿ ಮತ್ತು ಮಗನ (mother-son) ನಡುವಿನ ಬಾಂಧವ್ಯವನ್ನು ಅತ್ಯಂತ ಪವಿತ್ರ ಮತ್ತು ಪೂಜ್ಯ ಸಂಬಂಧಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಈ ಸಂಬಂಧದಲ್ಲಿ ಹುದುಗಿರುವ ಮಮತೆ, ಪ್ರೀತಿ, ವಾತ್ಸಲ್ಯ ಮತ್ತು ಪರಸ್ಪರ ಗೌರವವನ್ನು ಪ್ರಶ್ನಾತೀತವೆಂದು ಪರಿಗಣಿಸಲಾಗುತ್ತದೆ. ಆದರೆ, ಸಾಮಾಜಿಕ ಮಾಧ್ಯಮದಲ್ಲಿ (social media) ಖ್ಯಾತಿ ಗಳಿಸಬೇಕು ಅನ್ನೋ ಉದ್ದೇಶದಿಂದ ಈ ಸಂಬಂಧವು ದುರ್ಬಲಗೊಳ್ಳುತ್ತಿದ್ದು, ನೈತಿಕ ರೇಖೆಗಳನ್ನು ದಾಟುತ್ತಿರುವಂತೆ ತೋರುತ್ತಿದೆ.
ಹೌದು, ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊವೊಂದು (Viral Video) ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ವಿಡಿಯೊದಲ್ಲಿ, ಜಿಯಾ ವ್ಯಾಸ್ (@jiya_browny) ಎಂಬ ಮಹಿಳೆ ತನ್ನ ಮಗನೊಂದಿಗೆ ಬಾಲಿವುಡ್ ಹಾಡಿನ ಸೆಕೆಂಡ್ ಹ್ಯಾಂಡ್ ಜವಾನಿ ಹಾಡಿಗೆ ನೃತ್ಯ ಮಾಡುತ್ತಿರುವುದು ಕಂಡುಬರುತ್ತದೆ. ಇದು ನೆಟ್ಟಿಗರ ಕೆಂಗಣ್ಣಿಗೆ ಕಾರಣವಾಗಿದೆ. ಇದು ಅನುಚಿತ ಮತ್ತು ಅಗೌರವದಿಂದ ಕೂಡಿದೆ ಎಂದು ಹೇಳಿದ್ದಾರೆ.
ಜಿಯಾ ಕೆಂಪು ಹೃದಯದ (red heart) ಚಿಹ್ನೆಗಳಿಂದ ಅಲಂಕರಿಸಲ್ಪಟ್ಟ ಬಿಳಿ ಸೀರೆಯನ್ನು ಧರಿಸಿದ್ದರೆ, ಆಕೆಯ ಮಗ ಜೀನ್ಸ್ ಮತ್ತು ಟಿ-ಶರ್ಟ್‌ನಲ್ಲಿ ಧರಿಸಿದ್ದಾನೆ. ವಿಡಿಯೊದಲ್ಲಿ, ಜಿಯಾ ತನ್ನ ಮಗನೊಂದಿಗೆ ನೃತ್ಯ ಮಾಡಿದ್ದಾಳೆ. ಪುತ್ರ ತನ್ನ ಮೊಬೈಲ್ ಫೋನ್‌ನಲ್ಲಿ ಇದನ್ನು ರೆಕಾರ್ಡ್ ಮಾಡಿದ್ದಾನೆ. ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಅಮ್ಮನ ಮುದ್ದಾದ ಮಗ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ.
ವಿಡಿಯೊ ವೀಕ್ಷಿಸಿ:
ಆದರೆ, ನೆಟ್ಟಿಗರಿಗೆ ಈ ವಿಡಿಯೊ ಸರಿತೋರಿಲ್ಲ. ತಾಯಿ-ಮಗನ ಈ ನೃತ್ಯ ಪ್ರದರ್ಶನದ ದೃಶ್ಯವನ್ನು ಟೀಕಿಸಿದ್ದಾರೆ. ಇದು ಆಕ್ಷೇಪಾರ್ಹ ಮತ್ತು ತಾಯಿ-ಮಗನ ಸಂಬಂಧಕ್ಕೆ ಯೋಗ್ಯವಲ್ಲ ಎಂದು ಹೇಳಿದ್ದಾರೆ. ಜಿಯಾ ಅವರ ಸಾಮಾಜಿಕ ಮಾಧ್ಯಮದ ಪ್ರೊಫೈಲ್ ಅನ್ನು ಪರಿಶೀಲಿಸಿದಾಗ, ಅವರು ಆಗಾಗ ಇದೇ ರೀತಿಯ ವಿಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ ಎಂದು ಕಂಡುಬಂದಿದೆ. ಮಕ್ಕಳೊಂದಿಗಿನ ನೃತ್ಯ, ಇನ್ನು ಕೆಲವು ಸಾರ್ವಜನಿಕವಾಗಿ ಅವಳು ಬಟ್ಟೆ ಬದಲಾಯಿಸುವುದನ್ನು ತೋರಿಸುತ್ತವೆ ಮತ್ತು ಅವಳ ಮಕ್ಕಳೊಂದಿಗೆ ಪ್ರಣಯ ಗೀತೆಗಳಿಗೆ ನೃತ್ಯ ಮಾಡುವುದನ್ನು ಸಹ ತೋರಿಸಿವೆ.
ಸದ್ಯ ಈ ವಿಡಿಯೊ ಈಗ 12 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳು, 452,000 ಕ್ಕೂ ಹೆಚ್ಚು ಲೈಕ್‌ಗಳು ಮತ್ತು 6,000 ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಗಳಿಸಿದೆ. ಹಲವಾರು ಮಂದಿ ಬಳಕೆದಾರರು ಅಸಹ್ಯ ಮತ್ತು ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಈ ವಿಡಿಯೊಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ತೀವ್ರ ಅಸಮ್ಮತಿ ವ್ಯಕ್ತಪಡಿಸಿದರು. ಒಬ್ಬ ಬಳಕೆದಾರರು ಈ ವಿಡಿಯೊವನ್ನು ತಾಯ್ತನದ ಪರಿಕಲ್ಪನೆಗೆ ಅವಮಾನ ಎಂದು ಬಣ್ಣಿಸಿದರು. ಮತ್ತೊಬ್ಬ ಬಳಕೆದಾರರು, ಅವರು ವೈರಲ್ ಆಗಲು ಏನು ಬೇಕಾದರೂ ಮಾಡುತ್ತಾರೆ ಎಂದು ಆರೋಪಿಸಿದರು. ಕನಿಷ್ಠ ತಾಯಿ-ಮಗನ ಬಾಂಧವ್ಯವನ್ನು ಗೌರವಿಸುವಂತೆ ಒತ್ತಾಯಿಸಿದರು. ಮಕ್ಕಳ ಮುಂದೆ ಅಶ್ಲೀಲವಾಗಿ ನೃತ್ಯ ಮಾಡಬೇಡಿ. ತಾಯ್ತನದ ಹೆಸರಿಗೆ ಕಳಂಕ ತರುತ್ತೀದ್ದೀರಿ ಎಂದು ಹಲವರು ಟೀಕಿಸಿದರು.
ಇದನ್ನೂ ಓದಿ: Viral Video: ಮರಾಠಿ ಮಾತನಾಡು....ಇಲ್ಲದಿದ್ದರೆ ಎತ್ತಿ ಹೊರಗೆ ಎಸೆಯುತ್ತೇನೆ... ರೈಲಿನಲ್ಲಿ ಮಹಿಳೆಗೆ ಬೆದರಿಕೆ