Viral Video: ಮರಾಠಿ ಮಾತನಾಡು....ಇಲ್ಲದಿದ್ದರೆ ಎತ್ತಿ ಹೊರಗೆ ಎಸೆಯುತ್ತೇನೆ... ರೈಲಿನಲ್ಲಿ ಮಹಿಳೆಗೆ ಬೆದರಿಕೆ
Woman Threatens Co-Passenger: ಮುಂಬೈ ರೈಲಿನಲ್ಲಿ ಭಾಷಾ ವಿವಾದಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರ ನಡುವೆ ಮಾತಿನ ಚಕಮಕಿ ನಡೆದಿದೆ. ಒಬ್ಬ ಮಹಿಳೆಯು ತನ್ನ ಸಹ ಪ್ರಯಾಣಿಕ ಮಹಿಳೆಗೆ ಮರಾಠಿ ಮಾತನಾಡುವಂತೆ ಒತ್ತಡ ಹೇರಿದ್ದಾಳೆ. ಇಲ್ಲದಿದ್ದಲ್ಲಿ ಮಹಾರಾಷ್ಟ್ರ ಬಿಟ್ಟು ತೊಲಗುವಂತೆ ಆಗ್ರಹಿಸಿದ್ದಾಳೆ.

-

ಮುಂಬೈ: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊವೊಂದರಲ್ಲಿ (Viral Video) ಮತ್ತೆ ಭಾಷಾ ವಿವಾದ ಮುನ್ನಲೆಗೆ ಬಂದಂತೆ ಕಾಣುತ್ತಿದೆ. ಮುಂಬೈನ ಜನದಟ್ಟಣೆಯ ಸ್ಥಳೀಯ ರೈಲಿನೊಳಗೆ ಚಿತ್ರೀಕರಿಸಲಾದ ಈ ವಿಡಿಯೊ, ಇಬ್ಬರು ಮಹಿಳೆಯರ ನಡುವಿನ ವಾಗ್ವಾದವನ್ನು ಸೆರೆಹಿಡಿದಿದೆ. ಒಬ್ಬಾಕೆ ಮಗುವನ್ನು ಹಿಡಿದುಕೊಂಡಿದ್ದು ಮತ್ತೊಬ್ಬ ಮಹಿಳೆಯೊಂದಿಗೆ ತಾವು ಮಹಾರಾಷ್ಟ್ರದಲ್ಲಿದ್ದೇವೆ (Maharashtra) ಎಂದು ಉಲ್ಲೇಖಿಸಿ ಮರಾಠಿಯಲ್ಲಿ ಮಾತ್ರ ಮಾತನಾಡಬೇಕೆಂದು ಹೇಳಿದ್ದಾರೆ. ಮರಾಠಿ (Marathi) ಮಾತನಾಡುವ ಮಹಿಳೆಯು, ಸ್ಥಳೀಯ ಭಾಷೆಯನ್ನು ಬಳಸಲು ನಿರಾಕರಿಸಿದರೆ ರಾಜ್ಯದಿಂದ ಒದ್ದೋಡಿಸುವುದಾಗಿ ಎಚ್ಚರಿಸಿದರು.
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಆ ಮಹಿಳೆಯನ್ನು ನಿರ್ದಿಷ್ಟ ಭಾಷೆಯಲ್ಲಿ ಮಾತನಾಡುವಂತೆ ಒತ್ತಾಯಿಸಿದ್ದಕ್ಕಾಗಿ ಟೀಕಿಸಿದ್ದಾರೆ. ಆಕೆಯ ಕ್ರಮಗಳು ಅನಗತ್ಯ ಮತ್ತು ಆಕ್ರಮಣಕಾರಿ ಎಂದು ಹೇಳಿದ್ದಾರೆ. ತಾನು ಮಹಾರಾಷ್ಟ್ರದಲ್ಲಿ ವಾಸಿಸುತ್ತಿರುವುದರಿಂದ ಮರಾಠಿಯಲ್ಲಿ ಮಾತ್ರ ಮಾತನಾಡುತ್ತೇನೆ ಎಂದು ಹೇಳುವುದರೊಂದಿಗೆ ವಿಡಿಯೊ ಪ್ರಾರಂಭವಾಗುತ್ತದೆ. ಇನ್ನೊಬ್ಬ ಮಹಿಳೆ ತಾನು ಈ ರಾಜ್ಯದವಳಲ್ಲ ಎಂದು ಹೇಳಿದ್ದಾಳೆ. ಈ ವೇಳೆ ಪರಸ್ಪರ ವಾಗ್ವಾದ ನಡೆದಿದೆ.
ಮಹಿಳೆಯು ಮರಾಠಿ ಮಾತನಾಡಲು ಹೇಳಿದಾಗ, ಇನ್ನೊಬ್ಬಾಕೆ ಅದು ಅಗತ್ಯವಿಲ್ಲ ಎಂದು ಹೇಳಿದಳು. ನಂತರ ಅವಳು, ನೀನು ಮರಾಠಿಯಲ್ಲಿ ಮಾತನಾಡುವುದಿಲ್ಲವೇ? ನಾನು ನಿನ್ನನ್ನು ಮಹಾರಾಷ್ಟ್ರದಿಂದ ಹೊರಗೆ ಹಾಕುತ್ತೇನೆ ಎಂದು ಹೇಳಿದ್ದಾಳೆ. ಇನ್ನೊಬ್ಬ ಮಹಿಳೆ, ನೀನು ಯಾರು ನನ್ನನ್ನು ಇಲ್ಲಿಂದ ಆಚೆ ಹಾಕೋಕೆ? ನಾನು ಕೂಡ ಇಲ್ಲಿಂದ ಬಂದವಳು ಎಂದು ಹೇಳಿದ್ದಾಳೆ. ಈ ವಿಡಿಯೊವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಮಹಾರಾಷ್ಟ್ರದಲ್ಲಿ ಮರಾಠಿ ವಿವಾದ ಹೊಸದು. ಸ್ಥಳೀಯ ಮಹಿಳಾ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಸಹ ಪ್ರಯಾಣಿಕರಿಗೆ ಮರಾಠಿಯಲ್ಲಿ ಮಾತನಾಡಲು ಬೆದರಿಕೆ ಹಾಕಿದ್ದಾಳೆ. ನಿಜಕ್ಕೂ ಇದು ಗೂಂಡಾಗಿರಿ ಎಂದು ಶೀರ್ಷಿಕೆ ನೀಡಲಾಗಿದೆ.
ವಿಡಿಯೊ ವೀಕ್ಷಿಸಿ:
New in the Marathi row from #Maharashtra: Woman travelling in local ladies compartment schools fellow passenger, threatening to speak in Marathi.
— Simran (@SimranBabbar_05) August 7, 2025
Entire conversation recored:
Truly insane. Hooliganism. pic.twitter.com/PYHAxDq2P5
ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಬಳಕೆದಾರರು, ನನ್ನ ಮರಾಠಿ ಸಹೋದರ-ಸಹೋದರಿಯರು ನಿರಾಶೆಗೊಂಡಿದ್ದಾರೆ, ರಾಜಕಾರಣಿಗಳು ಅವರನ್ನು ಬಳಸುತ್ತಿದ್ದಾರೆ. ಮರಾಠಿ ಮಾತನಾಡುವುದು ಒಂದೇ ಪರಿಹಾರವಲ್ಲ ಎಂದು ಬರೆದಿದ್ದಾರೆ. ಒಂದು ರಾಜ್ಯದ ಜನರೊಂದಿಗೆ ಸಂವಹನವನ್ನು ಸುಲಭಗೊಳಿಸಲು ಆ ರಾಜ್ಯದ ಭಾಷೆಯನ್ನು ತಿಳಿದುಕೊಳ್ಳುವುದು ಅವಶ್ಯಕ. ಆದರೆ ಅದನ್ನು ಒತ್ತಾಯಿಸುವುದು ಅಪರಾಧ. ನಾವು ನಮ್ಮ ಸ್ವಂತ ದೇಶದಲ್ಲಿಲ್ಲ, ಆದರೆ ಬೇರೆ ಯಾವುದೋ ದೇಶದಲ್ಲಿ ಇದ್ದಂತೆ ಭಾಸವಾಗುತ್ತದೆ ಎಂದು ಮತ್ತೊಬ್ಬರು ಹಂಚಿಕೊಂಡಿದ್ದಾರೆ.
ಆಸ್ಪತ್ರೆ ಅಥವಾ ರಕ್ತನಿಧಿಯಲ್ಲಿ, ವೈದ್ಯರು ಅಥವಾ ರಕ್ತದಾನಿಗಳು ನಿರ್ದಿಷ್ಟ ಭಾಷೆಯಲ್ಲಿ ಮಾತನಾಡುತ್ತಾರೆಯೇ ಎಂದು ಯಾರಾದರೂ ಪರಿಶೀಲಿಸುತ್ತಾರೆಯೇ? ಹಾಗಾದರೆ ದೈನಂದಿನ ಜೀವನದಲ್ಲಿ ಜನರನ್ನು ವಿಭಜಿಸಲು ಭಾಷಾ ಪ್ರಚಾರವನ್ನು ಏಕೆ ಬಳಸಬೇಕು? ಅಲ್ಲಿ ಮಾನವೀಯತೆಯು ಮೊದಲು ಬರಬೇಕು? ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ನಿಮ್ಮ ಮಕ್ಕಳಿಗೆ ಮರಾಠಿ ಮಾಧ್ಯಮದಲ್ಲಿ ಮಾತ್ರ ಕಲಿಸಿ, ಅವರನ್ನು ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸಬೇಡಿ ಎಂದು ಮತ್ತೊಬ್ಬರು ಹೇಳಿದರು.
ಮುಂಬೈ ಲೋಕಲ್ ರೈಲಿನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ಸೀಟಿನ ಬಗ್ಗೆ ನಡೆದ ವಾಗ್ವಾದವು ಭಾಷಾ ವಿವಾದಕ್ಕೆ ಕಾರಣವಾಯಿತು. ಈ ಬಿಸಿ ಮಾತಿನ ಚಕಮಕಿಯಲ್ಲಿ, ಒಬ್ಬ ಮಹಿಳೆ ಇನ್ನೊಬ್ಬರಿಗೆ ಮರಾಠಿಯಲ್ಲಿ ಮಾತನಾಡಲು ಅಥವಾ ಹೊರಹೋಗಲು ಹೇಳಿದ್ದಾಳೆಂದು ವರದಿಯಾಗಿದೆ. ಬೈಕುಲ್ಲಾ ನಿಲ್ದಾಣದಲ್ಲಿ ಆರಂಭವಾದ ವಾಗ್ವಾದವು ಮುಲುಂಡ್‌ವರೆಗೂ ಮುಂದುವರೆದಿದೆ ಎಂದು ವರದಿಯಾಗಿದೆ. ರೈಲ್ವೆ ಸಿಬ್ಬಂದಿ ಪ್ರಯಾಣದ ಸಮಯದಲ್ಲಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದರು. ಆದರೆ, ಮಹಿಳಾ ಬೋಗಿಯಲ್ಲಿ ತುಂಬಾ ಜನದಟ್ಟಣೆ ಇತ್ತು, ಹೀಗಾಗಿ ಮಧ್ಯಪ್ರವೇಶಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: Viral News: ಸ್ಕೂಲ್ ಬ್ಯಾಗ್‌ಗಳಲ್ಲಿ ಪತ್ತೆಯಾಯ್ತು ಆಲ್ಕೋಹಾಲ್, ಕಾಂಡೋಮ್, ಸೆಕ್ಸ್ ಬುಕ್ಸ್!