ಅಮರಾವತಿ: ರೈಲಿನಲ್ಲಿ ಒಂದಲ್ಲ ಒಂದು ವಿಚಿತ್ರ ಘಟನೆ ನಡೆಯುತ್ತಿರುತ್ತದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊಗಳು ಸಹ ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ವ್ಯಕ್ತಿಯೊಬ್ಬ ರೈಲಿನಲ್ಲಿ ಟಿಕೆಟ್ ಇಲ್ಲದೆ ಎಸಿ ಕೋಚ್‌ನಲ್ಲಿ ಪ್ರಯಾಣಿಸಿದ್ದಲ್ಲದೆ, ಇಳಿಯಲು ಹೇಳಿದ್ದಕ್ಕೆ ಕಿರುಚಾಡುತ್ತಾ ತನ್ನ ಬಟ್ಟೆ ಬಿಚ್ಚಿ ಎಲ್ಲರೂ ಶಾಕ್ ಆಗುವಂತೆ ಮಾಡಿದ್ದಾನೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕೊನೆಗೆ ಕುರ್ಲಾ-ಕೊಯಮತ್ತೂರು ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಈ ವ್ಯಕ್ತಿಯನ್ನು ಆಂಧ್ರ ಪ್ರದೇಶದ (Andrapradesh) ಗುಂಟಕಲ್‌ನಲ್ಲಿ ಬಂಧಿಸಲಾಗಿದೆ.
ರೈಲು ಆಂಧ್ರ ಪ್ರದೇಶದ ವಾಡಿ ಮತ್ತು ಗುಂಟಕಲ್ ನಿಲ್ದಾಣದ ನಡುವೆ ಇದ್ದಾಗ ಈ ಘಟನೆ ಸಂಭವಿಸಿದೆ. ವರದಿ ಪ್ರಕಾರ, ಆ ವ್ಯಕ್ತಿ ಟಿಕೆಟ್ ಇಲ್ಲದೆ ರೈಲಿನ ಎಸಿ ಕೋಚ್ ಹತ್ತಿದ್ದಾನೆ. ಆಗ ಮಹಿಳಾ ಟಿಟಿಇ ಕೂಡಲೇ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್)ಗೆ ಮಾಹಿತಿ ನೀಡಿದ್ದಾಳೆ. ಅಧಿಕಾರಿಗಳು ಆ ವ್ಯಕ್ತಿಯನ್ನು ರೈಲಿನಿಂದ ಇಳಿಸಲು ಪ್ರಯತ್ನಿಸಿದಾಗ, ಅವನು ಅವರ ಮುಂದೆ ಅಸಭ್ಯವಾಗಿ ವರ್ತಿಸಿದ್ದಾನೆ ಮತ್ತು ತನ್ನ ಬಟ್ಟೆಯನ್ನು ಬಿಚ್ಚಿದ್ದಾನೆ. ಇದರಿಂದ ಪೊಲೀಸರು ಆ ವ್ಯಕ್ತಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ರೈಲಿನಿಂದ ಹೊರಟು ಹೋಗಿದ್ದಾರೆ. ಈ ಘಟನೆಯ ವಿಡಿಯೊ ಈಗ ವೈರಲ್ ಆಗಿದ್ದು, ಇದು ಸೋಶಿಯಲ್ ಮೀಡಿಯಾಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ವೈರಲ್ ವಿಡಿಯೊ ಇಲ್ಲಿದೆ:
ನಂತರ ಕರ್ತವ್ಯದಲ್ಲಿದ್ದ ಮಹಿಳಾ ಟಿಟಿಇ, ವಿಡಿಯೊ ರೆಕಾರ್ಡ್ ಮಾಡಿ ಆರ್‌ಪಿಎಫ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಘಟನೆಯ ಬಗ್ಗೆ ವರದಿ ಮಾಡಿದ್ದಾಳೆ. ನಂತರ ಗುಂಟಕಲ್‌ನ ಜಿಆರ್‌ಪಿ ಮತ್ತು ಆರ್‌ಪಿಎಫ್ ಸಿಬ್ಬಂದಿ ವ್ಯಕ್ತಿಯನ್ನು ಕೆಳಗಿಳಿಸಿದ್ದಾರೆ. ಆತ ಮಾನಸಿಕವಾಗಿ ಅಸ್ವಸ್ಥ ವ್ಯಕ್ತಿ ಎಂದು ಹೇಳಿದ್ದರಿಂದ ಆತನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ:Viral Video: ವಿಮಾನದಲ್ಲಿ 11A ಸೀಟಿಗಾಗಿ ಕಿತ್ತಾಡಿಕೊಂಡ ಪ್ರಯಾಣಿಕರು; ಏನಿದು ಪ್ರಕರಣ?
ಈ ಘಟನೆಯಲ್ಲಿ ಭಾಗಿಯಾದ ರಾಯಚೂರು ಆರ್‌ಪಿಎಫ್ ಸಿಬ್ಬಂದಿ ಯಾವುದೇ ಕ್ರಮ ಕೈಗೊಳ್ಳದೆ ಹೊರಟು ಹೋದ ಕಾರಣ ಅವರ ವಿರುದ್ಧ ಆಂತರಿಕ ತನಿಖೆ ಶುರುಮಾಡಬೇಕೆಂದು ಮಹಿಳಾ ಟಿಟಿಇ ಹೇಳಿದ್ದಾಳೆ. ನಂತರ ರಾಯಚೂರು ಆರ್‌ಪಿಎಫ್ ಹೇಳಿಕೆ ನೀಡಿ, “ಆ ವ್ಯಕ್ತಿ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದ. ಆ ವ್ಯಕ್ತಿಯ ಪ್ರತಿರೋಧದಿಂದಾಗಿ, ಅವನನ್ನು ರೈಲಿನಿಂದ ಕೆಳಗೆ ಇಳಿಸಲು ಸಾಧ್ಯವಾಗಲಿಲ್ಲ. ಮುಂದಿನ ನಿಲ್ದಾಣದಲ್ಲಿ ಅವನನ್ನು ಇಳಿಸಲಾಯಿತು" ಎಂದು ತಿಳಿಸಿದೆ. ಕೊನೆಗೂ ಆ ವ್ಯಕ್ತಿಯನ್ನು ಆಂಧ್ರ ಪ್ರದೇಶದ ಗುಂಟಕಲ್‌ನಲ್ಲಿ ವಶಕ್ಕೆ ಪಡೆಯಲಾಯಿತು.