ತಿರುವನಂತಪುರಂ: ಕೇರಳ(Kerala) ದ ವಯನಾಡಿನಲ್ಲಿ ಕಾಂಗ್ರೆಸ್ ಸಂಸದೆ(Congress MP) ಪ್ರಿಯಾಂಕಾ ಗಾಂಧಿ(Priyanka Gandhi) 'ಆಲಿಯಾ ಭಟ್' (Alia Bhatt) ಹೆಸರಿನ ಹಸುವೊಂದನ್ನು ಭೇಟಿಯಾಗಿದ್ದಾರೆ. ಈ ಕುರಿತ ವಿಡಿಯೋವೊಂದನ್ನು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅದು ಭಾರಿ ವೈರಲ್ ಆಗಿದೆ. ಇತ್ತೀಚೆಗೆ ತಿರುವಂಬಾಡಿಯಲ್ಲಿರುವ ಕೊಡೆಂಚೆರ್ರಿ ಡೈರಿ ಫಾರ್ಮ್‌ಗೆ ಪ್ರಿಯಾಂಕ್ ಗಾಂಧಿ (Congress MP Priyanka Gandhi) ಭೇಟಿ ನೀಡಿದ್ದರು. ಅಲ್ಲಿ ಬಾಲಿವುಡ್ ನಟಿ 'ಆಲಿಯಾ ಭಟ್' ಹೆಸರಿನ ಮುದ್ದಾದ ಹಸುವನ್ನು ಕಂಡು ಫುಲ್ ಖುಷ್ ಆಗಿದ್ದಾರೆ.
"ಕುಟುಂಬವೊಂದು ನಡೆಸುತ್ತಿರುವ ಸುಂದರವಾದ ಡೈರಿ ಫಾರ್ಮ್‌ನಲ್ಲಿ ರೈತರನ್ನು ಭೇಟಿಯಾದೆ. (ಅಲ್ಲಿ 'ಆಲಿಯಾ ಭಟ್' ಎಂಬ ಹಸುವನ್ನೂ ಭೇಟಿಯಾದೆ!, ಆಲಿಯ ಭಟ್ ಬಳಿ ಕ್ಷಮೆಯಾಚಿಸುತ್ತೇನೆ, ಆದರೆ, ಅವಳು ನಿಜಕ್ಕೂ ಮುದ್ದಾಗಿದ್ದಾಳೆ!)," ಎಂದು ಪ್ರಿಯಾಂಕಾ ಗಾಂಧಿ ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇದೇ ವೇಳೆ ಪ್ರಿಯಾಂಕಾ ಗಾಂಧಿ, ಸಹಕಾರಿ ಸಂಘಗಳು ಮತ್ತು ಸ್ಥಳೀಯ ರೈತರೊಂದಿಗೆ ಸಂವಾದ ನಡೆಸಿದ್ದಾರೆ. ಇದೇ ವೇಳೆ ಹೈನುಗಾರಿಕೆಯಲ್ಲಿನ ಬಿಕ್ಕಟ್ಟುಗಳು, ಹೆಚ್ಚುತ್ತಿರುವ ವೆಚ್ಚಗಳು, ಕಾಡು ಪ್ರಾಣಿಗಳ ಉಪಟಳ ಸೇರಿದಂತೆ ರೈತರು ತಾವು ಎದಿರಿಸುತ್ತಿರುವ ಹಲವಾರು ತೊಂದರೆಗಳ ಬಗ್ಗೆ ಸಂಸದರ ಬಳಿ ಅಳಲನ್ನು ತೋಡಿಕೊಂಡಿದ್ದಾರೆ.
ಈ ಸುದ್ದಿಯನ್ನು ಓದಿ: Bihar Assembly Election: ಬಿಹಾರ ಚುನಾವಣೆಗೆ ಕೇಂದ್ರದಿಂದ ಹೈ ಸೆಕ್ಯೂರಿಟಿ; 500 ಭದ್ರತಾ ತುಕುಡಿಗಳ ಮತ್ತೊಂದು ಬ್ಯಾಚ್ ರವಾನೆ
ರೈತರ ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಗಾಂಧಿ, "ದುರದೃಷ್ಟವಶಾತ್, ಹೈನುಗಾರರು ಹಲವಾರು ಸಮಸ್ಯೆಗಳನ್ನು ಎದರಿಸುತ್ತಿದ್ದಾರೆ. ಅನೇಕರಿಗೆ ಜೀವನ ನಿರ್ವಹಣೆಯೂ ಸಾಧ್ಯವಾಗುತ್ತಿಲ್ಲ. ಪಶುವೈದ್ಯಕೀಯ, ಔಷಧಿಗಳ ಬೆಲೆ ಏರಿಕೆ, ವಿಮಾ ರಕ್ಷಣೆಯ ಕೊರತೆ, ಗುಣಮಟ್ಟದ ಪಶು ಆಹಾರ ಪಡೆಯಲು ಆಗುತ್ತಿರುವ ತೊಂದರೆಗಳು ಸೇರಿದಂತೆ ಎದರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ರೈತರಿಗೆ ಅರಿವು ಮೂಡಿಸಲು ಸಂಬಂಧಪಟ್ಟ ಸಚಿವಾಲಯಕ್ಕೆ ಪತ್ರ ಬರೆಯಲು ಬಯಸುತ್ತೇನೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ನನಗೆ ವಿವರಿಸಿದ್ದಕ್ಕಾಗಿ ರೈತರೆಲ್ಲರಿಗೂ ಕೃತಜ್ಞತೆ ಅರ್ಪಿಸುತ್ತೇನೆ ಹಾಗೂ ನನ್ನಿಂದಾಗುವ ಎಲ್ಲ ರೀತಿಯ ಸಹಾಯವನ್ನೂ ನಾನು ಮಾಡುತ್ತೇನೆ ಸಿದ್ಧವಾಗಿದ್ದೇನೆ," ಎಂದು ಹೇಳಿದ್ದಾರೆ.
ಇನ್ನು ಹಾಸ್ಯದೊಂದಿಗೆ ಪೋಸ್ಟ್ ಅನ್ನು ಆರಂಭಿಸಿದ ಪ್ರಿಯಾಂಕಾ ಗಾಂಧಿ, ನಂತರ ಡೈರಿ ರೈತರು ಎದುರಿಸುತ್ತಿರುವ ಹಲವಾರ ಗಂಭೀರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ರೈತರ ಸಂಕಷ್ಟಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸುತ್ತಿರುವ ಕಾಂಗ್ರೆಸ್ ಸಂಸದೆಗೆ ನೆಟ್ಟಿಗರಿಂದ ಶ್ಲಾಘನೀಯ ಕಾಮೆಂಟ್‌ಗಳ ಮಹಾಪೂರವೇ ಹರಿದುಬಂದಿದೆ.