ಚಂಡೀಗಢ: ಅತ್ಯಾಚಾರ ಮತ್ತು ವಂಚನೆ ಆರೋಪದ ಮೇಲೆ ಬಂಧಿಸಲ್ಪಟ್ಟ ಪಂಜಾಬ್ ಆಮ್ ಆದ್ಮಿ ಪಕ್ಷದ (Aam Admi Party) ಶಾಸಕ ಹರ್ಮೀತ್ ಸಿಂಗ್ ಧಿಲ್ಲೋನ್ ಪಠಾಣಮಾಜ್ರಾ ಮಂಗಳವಾರ ಕರ್ನಾಲ್‌ನಲ್ಲಿ ಅಧಿಕಾರಿಗಳ ಮೇಲೆ ಗುಂಡು ಹಾರಿಸಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ಎಂದು ತಿಳಿದು ಬಂದಿದೆ. ಅತ್ಯಾಚಾರ ಆರೋಪಕ್ಕೆ ಸಂಬಂಧಪಟ್ಟಂತೆ ಇಂದು ಬೆಳಗ್ಗೆ ಪಂಜಾಬ್ ಎಎಪಿ ಶಾಸಕ (Viral News) ಹರ್ಮೀತ್ ಪಠಾಣಮಜ್ರಾನನ್ನು ಪೊಲೀಸರು ಕರ್ನಾಲ್ ನಿಂದ ಬಂಧಿಸಿ ಕರೆತರಲಾಗುತ್ತಿತ್ತು. ಈ ವೇಳೆ ಹರ್ಮೀತ್ ಸಹಚರರು ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಸದ್ಯ ಶಾಸಕನಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಪರಾರಿಯಾದ ವ್ಯಕ್ತಿ ಸನೂರ್ ಶಾಸಕರಾಗಿದ್ದಾರೆ. ಗುಂಡು ಹಾರಿಸಿದ್ದರಿಂದ ಒಬ್ಬ ಪೊಲೀಸ್ ಸಿಬ್ಬಂದಿ ಗಾಯಗೊಂಡರು ಎಂದು ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲದೇ ತಪ್ಪಿಸಿಕೊಳ್ಳುವಾಗ ಎಸ್‌ಯುವಿ ಕಾರನ್ನು ಪೊಲೀಸ್ ಸಿಬ್ಬಂದಿ ಮೇಲೆ ಹತ್ತಿಸಿದ್ದರಿಂದ ಓರ್ವ ಪೋಲಿಸ್ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ತಪ್ಪಿಸಿಕೊಳ್ಳಲು ಬಳಸಲಾದ ಫಾರ್ಚೂನರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಆತನನ್ನು ಪತ್ತೆಹಚ್ಚಲು ಶೋಧ ಕಾರ್ಯ ಆರಂಭಿಸಲಾಗಿದೆ. ಪಠಾಣಮಜ್ರಾ ವಿರುದ್ಧ ಜಿರಾಕ್‌ಪುರದ ಮಹಿಳೆಯೊಬ್ಬರು ಸಲ್ಲಿಸಿದ ಎಫ್‌ಐಆರ್‌ನ ನಂತರ ಅವರನ್ನು ಬಂಧಿಸಲಾಯಿತು. ಅವರು ತಮ್ಮೊಂದಿಗೆ ಸಂಬಂಧ ಬೆಳೆಸುವ ಮೊದಲು ವಿಚ್ಛೇದಿತ ಎಂದು ತಪ್ಪಾಗಿ ಬಿಂಬಿಸಿಕೊಂಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು.
2021 ರಲ್ಲಿ ವಿವಾಹಿತರಾಗಿರುವಾಗಲೇ ಪಠಾಣಮಜ್ರಾ ತನ್ನನ್ನು ವಿವಾಹವಾದರು, ಲೈಂಗಿಕವಾಗಿ ಶೋಷಿಸಿದರು, ಅಶ್ಲೀಲ ವಸ್ತುಗಳನ್ನು ಕಳುಹಿಸಿದರು ಮತ್ತು ಬೆದರಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಪಠಾಣಮಜ್ರಾ ವಿರುದ್ಧದ ಎಫ್‌ಐಆರ್‌ನಲ್ಲಿ ಅತ್ಯಾಚಾರ, ವಂಚನೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪಗಳಿವೆ. ಆದಾಗ್ಯೂ, ಶಾಸಕರು ಈ ಪ್ರಕರಣವು ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದ್ದರು.
ಈ ಸುದ್ದಿಯನ್ನೂ ಓದಿ: Kerala High Court: ಮದುವೆಯಾಗುವುದಾಗಿ ನಂಬಿಸಿ ನಡೆಯುವ ಸಮ್ಮತಿಯ ಲೈಂಗಿಕತೆ ಅತ್ಯಾಚಾರವಲ್ಲ: ಕೇರಳ ಹೈಕೋರ್ಟ್
ತಮ್ಮ ಪಕ್ಷದ ವಿರುದ್ಧವೇ ಅವರು ಕಿಡಿ ಕಾರಿದ್ದರು. ದೆಹಲಿ ಆಮ್ ಆದ್ಮಿ ಪಕ್ಷ, ಪಂಜಾಬ್‌ನಲ್ಲಿ ಅಧಿಕಾರ ಚಲಾಯಿಸುತ್ತಿದೆ ಎಂದು ಹೇಳಿದ್ದರು. ಅವರ ವಿರುದ್ಧ ನಾನು ಧ್ವನಿ ಎತ್ತಿದ್ದಕ್ಕಾಗಿ ನನ್ನ ಮೇಲೆ ಈ ರೀತಿಯ ಆರೋಪ ಹೊರಿಸಲಾಗುತ್ತಿದೆ. ಅವರು ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ನಾನು ಜೈಲಿನಲ್ಲಿ ಉಳಿಯಬಹುದು, ಆದರೆ ನನ್ನ ಧ್ವನಿಯನ್ನು ನಿಗ್ರಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಪಟಿಯಾಲದಲ್ಲಿ ಪ್ರವಾಹ ನಿರ್ವಹಣೆ ಕುರಿತು ಶಾಸಕರು ಇತ್ತೀಚೆಗೆ ತಮ್ಮದೇ ಸರ್ಕಾರದೊಂದಿಗೆ ಘರ್ಷಣೆ ನಡೆಸಿದ್ದರು. ಟ್ಯಾಂಗ್ರಿಯಂತಹ ನದಿಗಳನ್ನು ಹೂಳೆತ್ತುವಂತೆ ಪದೇ ಪದೇ ಮಾಡಿದ ಮನವಿಗಳನ್ನು ಹಿರಿಯ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ಅವರು ಆರೋಪಿಸಿದ್ದರು.