ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಬಿಸಿಲಿನ ಶಾಖದಿಂದ ಕಾರನ್ನು ಕಾಪಾಡುವ ಈತನ ಐಡಿಯಾ ನೋಡಿ

ಮಹಾರಾಷ್ಟ್ರದ ಪಂಡರಪುರದ ಆಯುರ್ವೇದ ವೈದ್ಯ ಡಾ. ಕದಮ್ ಬಿಸಿಲಿನ ತಾಪದಿಂದ ತಮ್ಮ ಕಾರನ್ನು ತಂಪಾಗಿಡಲು ಹಸುವಿನ ಸಗಣಿಯನ್ನು ಹಚ್ಚಿದ್ದಾರೆ. ಕಾರಿಗೆ ಸಗಣಿ ಬಳಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಹೀಂದ್ರಾ ಎಕ್ಸ್ ಯುವಿ 300ಗೆ ಸಗನಿ ಹಚ್ಚಿರುವ ವಿಡಿಯೊ ನೋಡಿ:

ನಿಮ್ಮ ಕಾರು ಬಿಸಿಲಿಗೆ ಹಾಳಾಗದಂತೆ ಕಾಪಾಡಬೇಕೆ? ಈ ವಿಧಾನ ಟ್ರೈ ಮಾಡಿ

Profile pavithra Mar 29, 2025 3:13 PM

ಮುಂಬೈ: ಬೇಸಗೆ ಕಾಲ ಶುರುವಾಗಿದೆ. ಹೊರಗಡೆ ಬಿಸಿಲಿನ ತಾಪ ಹೆಚ್ಚಾಗಿದೆ. ಈ ಬಿಸಿಲಿನ ತಾಪ ಮನುಷ್ಯರು, ಪ್ರಾಣಿ-ಪಕ್ಷಿಗಳು ಮಾತ್ರವಲ್ಲ ವಾಹನಗಳ ಮೇಲೂ ಪರಿಣಾಮ ಬೀರುತ್ತಿದೆ. ಹಾಗಾಗಿ ಕಾರು ಮಾಲೀಕರು ಬಿಸಿಲಿನಿಂದ ತಮ್ಮ ಕಾರನ್ನು ಕಾಪಾಡಲು ಒಂದಲ್ಲ ಒಂದು ಮಾರ್ಗವನ್ನು ಹುಡುಕುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಕಾರು ಮಾಲೀಕ ಬಿಸಿಲಿನ ತಾಪದಿಂದ ಕಾರನ್ನು ತಂಪಾಗಿಡುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಆಯುರ್ವೇದ ವೈದ್ಯನಾದ ಆತ ತನ್ನ ಕಾರಿಗೆ ಹಸುವಿನ ಸಗಣಿಯನ್ನು ಹಚ್ಚಿದ್ದಾನೆ. ಅವನು ಅನುಸರಿಸಿದ ಈ ಪರಿಸರ ಸ್ನೇಹಿ ಮತ್ತು ದೇಸಿ ವಿಧಾನವು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ನೀವೂ ಕೂಡ ಈ ವಿಧಾನ ಅನುಸರಿಸುವ ಮೂಲಕ ನಿಮ್ಮ ಕಾರನ್ನು ತಂಪಾಗಿಡಬಹುದು. ಹೇಗೆ, ಏನು, ಎಂಬಿತ್ಯಾದಿ ವಿವರಗಳು ಇಲ್ಲಿದೆ ನೋಡಿ.

ವೈರಲ್ ವಿಡಿಯೊದಲ್ಲಿ ಹಸುವಿನ ಸಗಣಿಯಿಂದ ಲೇಪಿತ ಮಹೀಂದ್ರಾ ಎಕ್ಸ್ ಯುವಿ 300 ಅನ್ನು ಸೆರೆಹಿಡಿಯಲಾಗಿದೆ. ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಕಾರು ಆಯುರ್ವೇದ ವೈದ್ಯ ಡಾ.ರಾಮ್ ಹರಿ ಕದಮ್ ಅವನಿಗೆ ಸೇರಿದ್ದು ಎನ್ನಲಾಗಿದೆ. ತಾಪಮಾನವನ್ನು ಹೆಚ್ಚಿಸುವ ಬೇಸಗೆಯಲ್ಲಿ ಸಮಯದಲ್ಲಿ ಈ ಕಾರನ್ನು ತಂಪಾಗಿಡಲು ಹಸುವಿನ ಸಗಣಿಯನ್ನು ಬಳಸಲಾಗಿದೆ.

ಸಗಣಿಯ ಲೇಪನದಿಂದ ಸುಂದರವಾಗಿ ಕಾಣುತ್ತಿದ್ದ ಕಾರಿನ ವಿಡಿಯೊ ಇಲ್ಲಿದೆ ನೋಡಿ...



ಮಹಾರಾಷ್ಟ್ರದ ಪಂಡರಪುರದ ಆಯುರ್ವೇದ ವೈದ್ಯ ಡಾ. ಕದಮ್ ಬೇಸಿಗೆಯ ಶಾಖವನ್ನು ತಡೆಯಲು ಕಾರುಗಳ ಮೇಲೆ ಹಸುವಿನ ಸಗಣಿಯನ್ನು ಹಚ್ಚಲು ಹೇಳಿದ್ದಾರೆ. ಇದು ಸ್ಥಳೀಯ ವಿಧಾನವೆಂದು ಅವರು ತಿಳಿಸಿದ್ದಾರೆ. ಹಸುವಿನ ಸಗಣಿಯನ್ನು ಗೋಮೂತ್ರದೊಂದಿಗೆ ಬೆರೆಸಿ, ಪೇಸ್ಟ್ ತಯಾರಿಸಿ, ಅದನ್ನು ತಮ್ಮ ವಾಹನಗಳ ಹೊರ ಮೇಲ್ಮೈಯಲ್ಲಿ ಎಚ್ಚರಿಕೆಯಿಂದ ಹರಡುವಂತೆ ಅವನು ಜನರಿಗೆ ಮಾಹಿತಿ ನೀಡಿದ್ದಾನೆ. ಹಸುವಿನ ಸಗಣಿ ನೈಸರ್ಗಿಕವಾಗಿ ವಾಹನಕ್ಕೆ ಹಾನಿಯಾಗದಂತೆ ತಡೆಯುತ್ತದೆ ಮತ್ತುತಂಪಾಗಿರಿಸುತ್ತದೆ ಎಂದು ಅವರು ವಿವರಿಸಿದ್ದಾರೆ. ಅದು ಅಲ್ಲದೇ ಜಾಸ್ತಿ ಮಳೆಗೆ ಈ ಕಾರನ್ನು ಒಡ್ಡದಿದ್ದರೆ ಈ ಲೇಪನವು ಐದು ತಿಂಗಳವರೆಗೆ ಇರುತ್ತದೆ ಎಂದು ಹೇಳಿದ್ದಾರೆ.

ವರದಿ ಪ್ರಕಾರ, ಆಯುರ್ವೇದ ವೈದ್ಯ ಡಾ. ಕದಮ್ ಈ ರೀತಿಯ ವಿಧಾನಗಳನ್ನು ಅನುಸರಿಸಿದ್ದು ಇದೇ ಮೊದಲಲ್ಲ. ಈ ಹಿಂದೆ ತಮ್ಮ ದ್ವಿಚಕ್ರ ವಾಹನಕ್ಕೆ ಹಸುವಿನ ಸಗಣಿ ಪೇಸ್ಟ್ ಅನ್ನು ಲೇಪಿಸಿದ್ದರು ಮತ್ತು ಸಗಣಿಯನ್ನು ತಮ್ಮ ಮನೆಯ ಗೋಡೆಗಳಿಗೂ ಸಹ ಹಚ್ಚಿದ್ದರಂತೆ.

ಈ ಸುದ್ದಿಯನ್ನೂ ಓದಿ:Viral Video: ಅಬ್ಬಾ... ಎಂಥಾ ಭೀಕರ ದೃಶ್ಯ! ಆರು ವರ್ಷದ ಕಂದಮ್ಮನ ಮೇಲೆ ಹರಿದ ಕಾರು-ವಿಡಿಯೊ ಇದೆ

ಅಲ್ಲದೇ 2019ರಲ್ಲಿ ಗುಜರಾತ್‍ನ ಮಹಿಳೆಯೊಬ್ಬರು ತನ್ನ ಕಾರಿಗೆ ಹಸುವಿನ ಸಗಣಿಯನ್ನು ಹಚ್ಚಿ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದರು. ಅಹಮದಾಬಾದ್‍ನ ಸೆಜಾ ಶಾ ತನ್ನ ಟೊಯೋಟಾ ಆಲ್ಟಿಸ್‍ಗೆ ಹಸುವಿನ ಸಗಣಿಯ ದಪ್ಪ ಲೇಪನವನ್ನು ಹಚ್ಚಿದ್ದರು. ಕಾರಿನ ಮೇಲೆ ರಂಗೋಲಿ ತರಹದ ವಿನ್ಯಾಸಗಳನ್ನು ಬಿಡಿಸಿದ್ದರು. ಇದು ಸಿಕ್ಕಾಪಟ್ಟೆ ವೈರಲ್‌ ಆಗಿ ನೆಟ್ಟಿಗರನ್ನು ರಂಜಿಸಿತ್ತು.