Viral Video: ಅಬ್ಬಾ... ಎಂಥಾ ಭೀಕರ ದೃಶ್ಯ! ಆರು ವರ್ಷದ ಕಂದಮ್ಮನ ಮೇಲೆ ಹರಿದ ಕಾರು-ವಿಡಿಯೊ ಇದೆ
Viral Video: ಕ್ಯಾಬ್ ಡ್ರೈವರ್ ಒಬ್ಬ ಆರು ವರ್ಷದ ಮಗುವಿನ ಮೇಲೆ ಕಾರು ಹರಿಸಿದ್ದು, ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ.

ಮುಂಬೈ: ಮಹಾರಾಷ್ಟ್ರದ(Maharashtra) ವಸೈ(Vasai) ಎಂಬಲ್ಲಿ ಆರು ವರ್ಷದ ಬಾಲಕನ ಮೇಲೆ ಕಾರೊಂದು ಹರಿದಿದ್ದು, ಅದೃಷ್ಟವಶಾತ್ ಮಗುವು ಪ್ರಾಣಾಪಾಯದಿಂದ ಪಾರಾಗಿದೆ(Escapes Death) ಎಂದು ತಿಳಿದು ಬಂದಿದೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು,ವಿಡಿಯೊ ಸಾಕಷ್ಟು ವೈರಲ್ ಆಗುತ್ತಿದೆ(Viral Video).
किस्मत...मुंबई से सटे वसई की घटना, एक कार चालक ने 6 साल के बच्चे को कुचला, बच्चा सही सलामत.. पुलिस आरोपी ड्राइवर की तलाश में. pic.twitter.com/YgVIMhjPEu— Vivek Gupta (@imvivekgupta) December 26, 2024
ಮಹಾರಾಷ್ಟ್ರದ ವಸೈಯಲ್ಲಿ ಆರು ವರ್ಷದ ಬಾಲಕನ ಮೇಲೆ ನಾಲ್ಕು ಚಕ್ರದ ವಾಹನ ಹರಿಸಿದ ಕ್ಯಾಬ್ ಡ್ರೈವರ್(Cab Driver) ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗಾಯಗೊಂಡಿರುವ ಬಾಲಕ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.
ವಿಡಿಯೊದಲ್ಲಿ ಕಾಣಿಸುವಂತೆ, ಕಮರ್ಷಿಯಲ್ ಕಾರನ್ನು ಒಂದು ಕಡೆ ಪಾರ್ಕಿಂಗ್ ಮಾಡಲಾಗಿತ್ತು. ಈ ವೇಳೆ ಮಗು ಕಾರಿನ ಬಳಿ ನೆಲದ ಮೇಲೆ ಕೂತು ಆಟವಾಡುತ್ತಿತ್ತು. ಕ್ಯಾಬ್ ಡ್ರೈವರ್ ಮಗು ಆಟವಾಡುತ್ತಿರುವುದನ್ನು ನೋಡದೇ ಕಾರನ್ನು ಚಾಲೂ ಮಾಡಿದ್ದಾನೆ. ಸ್ವಲ್ಪ ಸಮಯದ ನಂತರ, ಕಾರಿನ ಡ್ರೈವರ್ ಎಂಜಿನ್ ಅನ್ನು ಆನ್ ಮಾಡಿ ಮಗುವಿನ ಮೇಲೆ ವಾಹನವನ್ನು ಹರಿಸಿದ್ದಾನೆ. ನೆಲದ ಮೇಲೆ ಆಟವಾಡುತ್ತಿದ್ದ ಭಯದಿಂದ ಚೀರಿಕೊಂಡು ಮೇಲಕ್ಕೆ ಎದ್ದಿದೆ. ಮಗು ನೋವಿನಿಂದ ಅಳುತ್ತಿರುವುದನ್ನು ಕೇಳಿಸಿಕೊಂಡ ಸುತ್ತಮುತ್ತಲಿದ್ದ ಜನರು ಮಗುವಿನ ಸಹಾಯಕ್ಕೆ ಬಂದಿದ್ದಾರೆ. ಅಷ್ಟರೊಳಗಾಗಲೇ ಡ್ರೈವರ್ ಕಾರನ್ನು ಮುಂದಕ್ಕೆ ಚಲಾಯಿಸಿದ್ದಾನೆ.
ವಿವರಗಳ ಪ್ರಕಾರ, ಘಟನೆಯ ಸಂಪೂರ್ಣ ದೃಶ್ಯಗಳನ್ನು ಸಿಸಿಟಿವಿಯಲ್ಲಿ ನೋಡಿದ ನಂತರ ಮಗುವಿನ ಪೋಷಕರು ಕ್ಯಾಬ್ ಡ್ರೈವರ್ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಚಾಲಕನನ್ನು ಈವರೆಗೂ ಬಂಧಿಸಿಲ್ಲ ಎಂಬ ಮಾಹಿತಿಯಿದೆ.
ಗೂಡ್ಸ್ ವಾಹನ ಚಕ್ರ ಹರಿದು 5 ವರ್ಷದ ಮಗು ಸಾವು
ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಗೂಡ್ಸ್ ವಾಹನದ ಚಕ್ರಕ್ಕೆ ಸಿಲುಕಿ ಐದು ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆಯೊಂದು ವರದಿಯಾಗಿತ್ತು. ಅ.11 ಸಂಜೆ 6 ಗಂಟೆ ಸುಮಾರಿಗೆ ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗೋವಿಂದಪುರ ರಸ್ತೆಯಲ್ಲಿ ಘಟನೆ ನಡೆದಿತ್ತು. ಬಿಹೆಚ್ಇಎಲ್'ನ ಬಾಪೂಜಿನಗರದ ನಿವಾಸಿ ತನ್ವೀರ್ ಪಾಷಾ ಎಂಬುವವರ ಪುತ್ರ ತಾಹೀರ್ ಪಾಷಾ (5) ಮೃತ ದುರ್ದೈವಿ.
ದಸರಾ ರಜೆ ಹಿನ್ನೆಲೆಯಲ್ಲಿ ಮೃತ ಬಾಲಕ ಅಜ್ಜಿ ಮನೆಗೆ ಹೋಗಿದ್ದ. ಸ್ನೇಹಿತರೊಂದಿಗೆ ಆಟವಾಡಿದ ಬಳಿಕ ಸಂಜೆ ಮನೆಗೆ ವಾಪಸ್ಸಾಗುತ್ತಿದ್ದ. ಈ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸ್ಕೂಟರ್'ನ ಹ್ಯಾಂಡಲ್ ಬಾರ್ ಭುಜಕ್ಕೆ ತಾಕಿದ್ದು, ಆಯತಪ್ಪಿ ರಸ್ತೆಗ ಬಿದ್ದಿದ್ದಾನೆ. ಇದೇ ವೇಲೆ ಹಿಂದಿನಿಂದ ಬರುತ್ತಿದ್ದ ಗೂಡ್ಸ್ ವಾಹನದ ಚಕ್ರಗಳು ಬಾಲಕನ ತಲೆ ಮೇಲೆ ಹರಿದಿತ್ತು. ಕೂಡಲೇ ಸ್ಥಳೀಯರು ಹಾಗೂ ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಅಷ್ಟರಲ್ಲಾಗಲೇ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು.
ಘಟನೆಯ ವಿಡಿಯೊ ಸಮೀಪದ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಚಾಲಕ ಪ್ರಶಾಂತ್‌ನನ್ನು ಬಂಧಿಸಿದ್ದರು.
ಈ ಸುದ್ದಿಯನ್ನೂ ಓದಿ:Gutka Seize: ಭರ್ಜರಿ ಪೊಲೀಸ್ ಕಾರ್ಯಾಚರಣೆ- ಬ್ಯಾನ್ ಆಗಿರುವ 8.42 ಲಕ್ಷ ರೂ. ಮೌಲ್ಯದ ಗುಟ್ಕಾ ಸೀಜ್