ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ನನಗೆ ಟೀ ಆರ್ಡರ್‌ ಮಾಡಿ.... ಟ್ರೇನ್‌ನಲ್ಲಿ ನಕಲಿ ಅಧಿಕಾರಿ ದರ್ಪ; ಆಮೇಲೆ ನಡೆದಿದ್ದೇನು?

ಬಿಹಾರ ರೈಲಿನಲ್ಲಿ ಹಿರಿಯ ರೈಲ್ವೆ ಅಧಿಕಾರಿಯಂತೆ ನಟಿಸುತ್ತಿರುವ ವ್ಯಕ್ತಿಯೊಬ್ಬ ಟ್ರೇನ್‌ ಒಳಗೆ ನುಗ್ಗಿ ದರ್ಪ ಮೆರೆದಿದ್ದಾನೆ. ಅಧಿಕಾರಿಯ ಸೋಗಿನಲ್ಲಿ ಬಂದ ವ್ಯಕ್ತಿ ತನಗೆ ಟೀ ತರಿಸುವಂತೆ ಆರ್ಡರ್‌ ಮಾಡಿದ್ದಾನೆ. ನಂತರ ಆತನನ್ನು ಪೊಲೀಸರು ಬಂಧಿಸಿದ್ದಾರೆ.

1/5

ಭಾರತದ ಸಾರ್ವಜನಿಕ ಸಾರಿಗೆಯ ಮೂಲಾಧಾರವಾಗಿರುವ ಭಾರತೀಯ ರೈಲ್ವೆ, ಪ್ರತಿದಿನ ಲಕ್ಷಾಂತರ ಪ್ರಯಾಣಿಕರನ್ನು ಹೊತ್ತೊಯ್ಯುತ್ತದೆ. ಪ್ರಯಾಣಿಕರ ಸುರಕ್ಷತೆ ಮತ್ತು ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಸಂಸ್ಥೆ ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ. ರೈಲ್ವೆ ರಕ್ಷಣಾ ಪಡೆ (RPF) ಮತ್ತು ಸರ್ಕಾರಿ ರೈಲ್ವೆ ಪೊಲೀಸರು (GRP) ಅಪರಾಧವನ್ನು ತಡೆಗಟ್ಟಲು ಕೆಲಸ ಮಾಡುತ್ತಾರೆ. ಈ ಪ್ರಯತ್ನಗಳ ಹೊರತಾಗಿಯೂ ಕೆಲ ಅಪರಾಧಗಳು ಘಟಿಸುತ್ತವೆ.

2/5

ಇದೀಗ ಬಿಹಾರದಲ್ಲಿ ಅಂತಹುದೇ ಘಟನೆಯೊಂದು ನಡೆದಿದೆ. ಜೂನ್ 5,2025 ರಂದು ಸ್ವಾಧಿನ್ ಸೇನಾನಿ ಎಕ್ಸ್‌ಪ್ರೆಸ್‌ನಲ್ಲಿ ಟಿಪ್‌ ಟಾಪ್‌ ಆಗಿ ಕಾಣಿಸುವ ವ್ಯಕ್ತಿಯೊಬ್ಬರು H-1 ಕೋಚ್‌ಗೆ ಪ್ರವೇಶಿಸಿದರು. ಬಿಹಾರದ ಸಮಷ್ಟಿಪುರದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ADRM) ಎಂದು ಹೇಳಿಕೊಂಡು ರೈಲು ಕಂಡಕ್ಟರ್‌ಗೆ ಅಲೋಕ್ ಕುಮಾರ್ ಝಾ ಎಂದು ಪರಿಚಯಿಸಿಕೊಂಡರು. ನಂತರ ಅವರು ಅಲ್ಲಿಯೇ ಕುಳಿತುಕೊಂಡು ಚಹಾ ಆರ್ಡರ್ ಮಾಡಿದ್ದಾರೆ.

3/5

ಆದರೆ ಕತೆ ಇಲ್ಲಿಗೆ ಮುಗಿದಿಲ್ಲ. ರೈಲು ದರ್ಭಾಂಗಾ ನಿಲ್ದಾಣಕ್ಕೆ ಬಂದಾಗ ಅಸಲಿಯತ್ತು ಬಯಲಾಗಿದೆ. ಕರ್ತವ್ಯದಲ್ಲಿದ್ದ ಜಿಆರ್‌ಪಿ ಅಧಿಕಾರಿಗಳು ರೈಲು ಹತ್ತಿದಾಗ ಈತನ ಅಸಲಿಯತ್ತು ಬಯಲಾಗಿದೆ. ಅನುಮಾನಗೊಂಡ ಅಧಿಕಾರಿಗಳು ಸಮಷ್ಟಿಪುರದಲ್ಲಿರುವ ಮಂಡಳಿಯ ಭದ್ರತಾ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಲಾಯಿತು. ಆಗ ಆತನ ನಿಜರೂಪ ಬಯಲಾಗಿದೆ. ವಿಚಾರಣೆಯ ಸಮಯದಲ್ಲಿ, ಆ ವ್ಯಕ್ತಿ ಅಂತಿಮವಾಗಿ ತನ್ನ ನಿಜವಾದ ಗುರುತನ್ನು ಒಪ್ಪಿಕೊಂಡಿದ್ದಾನೆ. ಆತ ಮಧುಬನಿಯ ನೋಹನ್ ಬಾಧಿಯಂನ ದುರ್ಗಾಕಾಂತ್ ಚೌಧರಿ ಎಂಬಾತನಾಗಿದ್ದಾನೆ.

4/5

ಅಧಿಕಾರಿಗಳು ಆತನ ಬಳಿ ಗುರುತಿನ ಚೀಟಿ ಕೇಳಿದಾಗ ಆತ ಕಕ್ಕಾಬಿಕ್ಕಿಯಾಗಿದ್ದಾನೆ. ತಾನು ಎಡಿಆರ್‌ಎಂನ ಸೋದರಳಿಯ ಎಂದು ಅವನು ಒಪ್ಪಿಕೊಂಡಿದ್ದಾನೆ. "ಆರೋಪಿಯು ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದನು, ನಕಲಿ ಎಡಿಆರ್‌ಎಂ ಎಂದು ನಟಿಸುತ್ತಿದ್ದನು, ಎಡಿಆರ್‌ಎಂ ಜೊತೆ ಯಾವುದೇ ಸಂಬಂಧವಿಲ್ಲದ ಪ್ರಥಮ ದರ್ಜೆ ಸೀಟನ್ನು ಆಕ್ರಮಿಸಿಕೊಂಡಿದ್ದನು. ಅವನು ಮಧುಬನಿಯ ನಿವಾಸಿಯಾಗಿದ್ದು, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

5/5

ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದೆ. ಸಿಟಿಟಿಐ ದರ್ಭಂಗಾ ಚಂದೇಶ್ವರ್ ರೈ ಅವರು ಔಪಚಾರಿಕ ದೂರು ದಾಖಲಿಸಿದ್ದು, ದರ್ಭಂಗಾದ ರೈಲ್ವೆ ಭದ್ರತಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಂತರ ಆರೋಪಿಯನ್ನು ಸಮಷ್ಟಿಪುರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.