Viral Video: ದೈತ್ಯ ಮೀನುಗಳ ಬಿಗ್ ಫೈಟ್! ದಂಗಾದ ಪ್ರವಾಸಿಗರು- ಇಲ್ಲಿದೆ ನೋಡಿ ವಿಡಿಯೊ
Shark And Stingray Spotted Battling: ಶಾರ್ಕ್ ಮತ್ತು ಸ್ಟಿಂಗ್ರೇ ನಡುವಿನ ದಾಳಿಯ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಫ್ಲೋರಿಡಾದ ಪನಾಮ ಸಿಟಿ ಬೀಚ್‌ನಲ್ಲಿ ಮೀನುಗಳ ಕಾಳಗ ನಡೆದಿದೆ. ಜುಲೈ 31 ರ ಬೆಳಿಗ್ಗೆ ಪನಾಮ ಸಿಟಿ ಬೀಚ್‌ನ ಆಳವಿಲ್ಲದ ನೀರಿನಲ್ಲಿ ಮೀನುಗಳ ಮಧ್ಯೆ ಕಾಳಗ ನಡೆದಿದೆ. ಪ್ರವಾಸಿಗರು ಇದನ್ನು ವೀಕ್ಷಿಸಿದ್ದು, ದಿಗ್ಭ್ರಮೆಗೊಂಡಿದ್ದಾರೆ.


ಫ್ಲೋರಿಡಾ: ಶಾರ್ಕ್ ಮತ್ತು ಸ್ಟಿಂಗ್ರೇ ನಡುವಿನ ದಾಳಿಯ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಫ್ಲೋರಿಡಾದ ಪನಾಮ ಸಿಟಿ ಬೀಚ್‌ನಲ್ಲಿ ಮೀನುಗಳ ಕಾಳಗ ನಡೆದಿದೆ. ಈ ಸಂಪೂರ್ಣ ಘಟನೆಯನ್ನು ಪ್ರತ್ಯಕ್ಷದರ್ಶಿಗಳು ಸೆರೆಹಿಡಿದಿದ್ದು, ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್(Viral Video) ಆಗುತ್ತಿದೆ. ಶಾರ್ಕ್‌ನ ರೆಕ್ಕೆ ಮತ್ತು ಬಾಲವು ಅಲೆಗಳ ಮೇಲೆ ಕಾಣಿಸಿಕೊಂಡಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಜೊತೆಗೆ ದೊಡ್ಡ ಸ್ಟಿಂಗ್ರೇಯ ರೆಕ್ಕೆಗಳು ಸಹ ಮೇಲ್ಮೈಗೆ ಬರುವುದನ್ನು ಕಾಣಬಹುದು. ಜುಲೈ 31 ರ ಬೆಳಿಗ್ಗೆ ಪನಾಮ ಸಿಟಿ ಬೀಚ್‌ನ ಆಳವಿಲ್ಲದ ನೀರಿನಲ್ಲಿ ಮೀನುಗಳ ಮಧ್ಯೆ ಕಾಳಗ ನಡೆದಿದೆ. ಪ್ರವಾಸಿಗರು ಇದನ್ನು ವೀಕ್ಷಿಸಿದ್ದು, ದಿಗ್ಭ್ರಮೆಗೊಂಡಿದ್ದಾರೆ.
ಬೃಹತ್ ಮೀನುಗಳ ಕಾಳಗವನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೊವನ್ನು @Accuweather ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಪನಾಮ ನಗರದ ಜನ ಈ ಮೀನುಗಳ ಕಾಳಗವನ್ನು ವೀಕ್ಷಿಸಿದರು. ಶಾರ್ಕ್ ಮತ್ತು ಸ್ಟಿಂಗ್ರೇ ಮರಳಿನಿಂದ ಕೇವಲ ಅಡಿ ದೂರದಲ್ಲಿ ಕಾಳಗ ನಡೆಸಿತು ಎಂದು ಪೋಸ್ಟ್ ಮಾಡಿದ್ದಾರೆ.
ವಿಡಿಯೊ ವೀಕ್ಷಿಸಿ:
Beachgoers in Panama City watched a wild shoreline showdown as a shark and stingray splashed and thrashed just feet from the sand. pic.twitter.com/gwEUizXBLO
— AccuWeather (@accuweather) August 2, 2025
ಸಣ್ಣ ಹೋರಾಟದ ನಂತರ, ಶಾರ್ಕ್ ಮತ್ತು ಸ್ಟಿಂಗ್ರೇ ಎರಡೂ ತಮ್ಮ ದಿಕ್ಕುಗಳಲ್ಲಿ ಈಜಿಕೊಂಡು ಹೋದಂತೆ ಕಂಡುಬಂದವು. NOAA ಸಂಶೋಧನೆಯ ಪ್ರಕಾರ, ಶಾರ್ಕ್ ಮತ್ತು ಸ್ಟಿಂಗ್ರೇಗಳ ನಡುವಿನ ಇಂತಹ ಕ್ರಿಯೆಗಳು ಸಾಮಾನ್ಯವಲ್ಲ. ಏಕೆಂದರೆ ಎರಡೂ ಮಾಂಸಾಹಾರಿ ಜಾತಿಗಳಾಗಿವೆ. ಜೀವಶಾಸ್ತ್ರಜ್ಞರು ಹೇಳುವಂತೆ, ಕೆಲವು ಸಂದರ್ಭಗಳಲ್ಲಿ, ಶಾರ್ಕ್ ಮೀನುಗಳು ಸ್ಟಿಂಗ್ರೇಗಳನ್ನು ತಿನ್ನಬಹುದು..
ಈ ಸುದ್ದಿಯನ್ನೂ ಓದಿ: Ceasefire Violation: ಪಾಕ್ ಕದನ ವಿರಾಮ ಉಲ್ಲಂಘನೆ ಬೆನ್ನಲ್ಲೇ ಬಾಲಿವುಡ್‌ನ ಈ ಸಿನಿಮಾ ಸೀನ್ ಫುಲ್ ವೈರಲ್-ಅಂತಹದ್ದೇನಿದೆ ಇದರಲ್ಲಿ?
ಡೈವರ್ಸ್ ಗುಂಪಿನ ಮೇಲೆ ಅಪಾಯಕಾರಿ ಶಾರ್ಕ್ ದಾಳಿ
ಇತ್ತೀಚೆಗೆ, ಹಾಲಿವುಡ್‌ನ ಫ್ಲೋರಿಡಾ ಬೀಚ್‌ನಲ್ಲಿ ಶಾರ್ಕ್ ದಾಳಿಯಲ್ಲಿ ವ್ಯಕ್ತಿಯೊಬ್ಬ ತೀವ್ರವಾಗಿ ಗಾಯಗೊಂಡಿದ್ದ. ಶಾರ್ಕ್ ಕಚ್ಚಿದ ನಂತರ ಆ ವ್ಯಕ್ತಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ವರದಿಗಳ ಪ್ರಕಾರ, 40 ವರ್ಷ ವಯಸ್ಸಿನ ವ್ಯಕ್ತಿಯೆಂದು ಹೇಳಲಾಗುವ ವ್ಯಕ್ತಿಯ ತೋಳಿಗೆ ಗಾಯವಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು ಚೇತರಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.