ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಯ ಮೇಲೆ ಬಿತ್ತು ಸೀಲಿಂಗ್ ಪ್ಲಾಸ್ಟರ್; ಇಲ್ಲಿದೆ ಆಘಾತಕಾರಿ ವಿಡಿಯೊ
Plaster Of Ceiling Falls on Student: ಸರ್ಕಾರಿ ಶಾಲೆಯಲ್ಲಿ ಸೀಲಿಂಗ್ ಪ್ಲಾಸ್ಟರ್‌ನ ಒಂದು ಭಾಗವು ಐದನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯ ಮೇಲೆ ಇದ್ದಕ್ಕಿದ್ದಂತೆ ಬಿದ್ದಿದೆ. ಘಟನೆಯಲ್ಲಿ ವಿದ್ಯಾರ್ಥಿ ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹತ್ತಿರದ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದಾನೆ. ಉತ್ತರ ಪ್ರದೇಶದ ಬಾಲಪರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.


ಲಖನೌ: ಶಾಲೆಯೊಂದರಲ್ಲಿ ವಿದ್ಯಾರ್ಥಿ ತಲೆ ಮೇಲೆ ಸೀಲಿಂಗ್‌ನ ಪ್ಲಾಸ್ಟರ್ ಬಿದ್ದು, ಗಂಭೀರ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯ ಚಾರ್ಗಾಂವ್ ಬ್ಲಾಕ್‌ನ ಚಿಲುವಾಟಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಪರ್ ಗ್ರಾಮದಲ್ಲಿ ನಡೆದಿದೆ. ಸರ್ಕಾರಿ ಶಾಲೆಯಲ್ಲಿ ಸೀಲಿಂಗ್ ಪ್ಲಾಸ್ಟರ್‌ನ ಒಂದು ಭಾಗವು ಐದನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯ ಮೇಲೆ ಇದ್ದಕ್ಕಿದ್ದಂತೆ ಬಿದ್ದಿದೆ (Viral Video). ಘಟನೆಯಲ್ಲಿ ವಿದ್ಯಾರ್ಥಿ ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹತ್ತಿರದ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದಾನೆ.
ನೀರಜ್ ಚೌಹಾಣ್ ಅವರ ಪುತ್ರ ಬಿಕ್ರಮ್ ಎಂಬ ವಿದ್ಯಾರ್ಥಿ ಗಾಯಗೊಂಡಾತ. ಎಂದಿನಂತೆ ಶಾಲೆಗೆ ಬಂದಿದ್ದ ಬಾಲಕ ತನ್ನ ತರಗತಿಯಲ್ಲಿ ಕುಳಿತಿದ್ದ. ಈ ವೇಳೆ ಮೇಲ್ಛಾವಣಿಯಿಂದ ದೊಡ್ಡ ಪ್ಲಾಸ್ಟರ್ ತುಂಡು ಇದ್ದಕ್ಕಿದ್ದಂತೆ ಮುರಿದು ನೇರವಾಗಿ ಅವನ ತಲೆಯ ಮೇಲೆ ಬಿದ್ದಿದೆ. ಪರಿಣಾಮ ಬಾಲಕನ ತಲೆಗೆ ಗಂಭೀರ ಗಾಯವಾಗಿದೆ.
ಘಟನೆ ನಡೆದ ಕೂಡಲೇ ಸಿಬ್ಬಂದಿ ಮತ್ತು ಶಿಕ್ಷಕರು ಗಾಯಗೊಂಡ ವಿದ್ಯಾರ್ಥಿಯನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ಕರೆದೊಯ್ದರು. ಬಾಲಕನ ಸ್ಥಿತಿ ಗಂಭೀರವಾಗಿದ್ದರಿಂದ ಬಿಆರ್‌ಡಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ. ತರಗತಿಯ ಛಾವಣಿ ಕುಸಿದ ನಂತರ, ಪ್ರತ್ಯಕ್ಷದರ್ಶಿಗಳು ದೃಶ್ಯವನ್ನು ರೆಕಾರ್ಡ್ ಮಾಡಿದ್ದಾರೆ. ಅದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವಿಡಿಯೊ ಇಲ್ಲಿದೆ:
उत्तर प्रदेश : गोरखपुर में सरकारी स्कूल के लिंटर का प्लास्टर गिरने से छात्र घायल हो गया। जर्जर बिल्डिंग के अंदर बच्चे बैठाने पर प्रिंसिपल सुनीता अग्रहरि को सस्पेंड किया गया। हादसे के बाद जागे बेसिक शिक्षा विभाग ने स्कूल बिल्डिंग की जांच का आदेश दिया।pic.twitter.com/sS6JHu4j92
— Sachin Gupta (@SachinGuptaUP) August 2, 2025
ಶಾಲೆಯ ಬೇಜವಾಬ್ದಾರಿ ಆಡಳಿತದ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಘಟನೆಯು ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯ ಮತ್ತು ಸರ್ಕಾರಿ ಕಟ್ಟಡಗಳ ಸ್ಥಿತಿಯ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಘಟನೆ ಬಗ್ಗೆ ನಿವಾಸಿಗಳು ಮತ್ತು ಪೋಷಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲಾ ಕಟ್ಟಡವು ಬಹಳ ಸಮಯದಿಂದ ಶಿಥಿಲಾವಸ್ಥೆಯಲ್ಲಿತ್ತು. ಆದರೆ ಸಂಬಂಧಪಟ್ಟ ಇಲಾಖೆ ಅದರ ದುರಸ್ತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಳೆದ ಎರಡು ತಿಂಗಳಲ್ಲಿ ಇದು ಎರಡನೇ ನಿದರ್ಶನ
ವರದಿಗಳ ಪ್ರಕಾರ ಜೂನ್ 17ರಂದು ಶಾಲೆಯ ವರಾಂಡಾದ ಛಾವಣಿ ಮತ್ತು ಬಾಲ್ಕನಿ ಕುಸಿದು ಬಿದ್ದಿತು ಎಂದು ಶಾಲೆಯ ಶಿಕ್ಷಕರು ಹೇಳಿದ್ದಾರೆ. ಅದರ ವಿಡಿಯೊವನ್ನು ಮಾಡಿ ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ತಿಳಿಸಲಾಯಿತು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.