ಡೆಹ್ರಾಡೂನ್: ಈ ಹಿಂದೆ ಸೇನಾ ಅಧಿಕಾರಿಯ ಭಾವಿ ಪತ್ನಿಯೊಬ್ಬರು ಒಡಿಶಾದ ಭುವನೇಶ್ವರ ಜಿಲ್ಲೆಯ ಭರತ್‌ಪುರ ಪೊಲೀಸರ ವಿರುದ್ಧ ಹಲ್ಲೆ(Custodial Torture), ಲೈಂಗಿಕ ಕಿರುಕುಳ (Sexsual harrasment) ಮತ್ತು ಅಕ್ರಮ ಬಂಧನದ ಆರೋಪ ಮಾಡಿದ್ದರು. ತಾವು ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಭರತ್‌ಪುರ ಠಾಣೆಯಲ್ಲಿ ನನ್ನೊಂದಿಗೆ ಅಲ್ಲಿನ ಸಿಬ್ಬಂದಿ ಅನುಚಿತವಾಗಿ ನಡೆದುಕೊಂಡಿದ್ದಾರೆ ಎಂದು ದೂರಿದ್ದರು.
ಅವರು ಭುವನೇಶ್ವರದಲ್ಲಿ (Bhubaneswar) ರೆಸ್ಟೋರೆಂಟ್ ಮುಚ್ಚಿದ ಬಳಿಕ ಆಕೆಯ ಭಾವಿ ಪತಿಯ ಜತೆ ಮನೆಗೆ ಹೋಗುತ್ತಿದ್ದಾಗ ಗುಂಪೊಂದು ಅವರ ಮೇಲೆ ಹಲ್ಲೆ ಮಾಡಿತು. ಈ ಬಗ್ಗೆ ಭರತ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಪ್ರಯತ್ನಿಸಿದೆವು. ಆದ್ರೆ ದೂರು ನೀಡಲು ಹೋದ ನಮ್ಮನ್ನೇ ಲಾಕಪ್‌ಗೆ ಹಾಕಿ ದೌರ್ಜನ್ಯ ಎಸಗಿದ್ದರು ಎಂದು ಮಹಿಳೆ ಆರೋಪಿಸಿದ್ದರು.
ಇದೀಗ ಇಂತದೇ ಒಂದು ಆರೋಪ ಉತ್ತರಾಖಂಡದ (Uttarakhand) ಪೊಲೀಸರ ಮೇಲೆ ಕೇಳಿ ಬಂದಿದ್ದು, ಸಮಾಜದಲ್ಲಿ ಶಾಂತಿ- ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರೇ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ.
ಹೌದು, ಇಲ್ಲಿನ ತೆನ್ರಿ ಗರ್ವಾಲ್ ಪೊಲೀಸರು ಓರ್ವ ಯುವಕನಿಗೆ ಠಾಣೆಯಲ್ಲಿ ಮೂತ್ರ ಕುಡಿಯುವಂತೆ ಒತ್ತಾಯಿಸಿದ್ದು, ಸಿಬ್ಬಂದಿಯ ಬೂಟು ಸ್ವಚಗೊಳಿಸುವಂತೆ ಆದೇಶಿಸಿ ದೌರ್ಜನ್ಯ (Tortured) ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಂದ ಹಿಂಸೆಗೆ ಒಳಗಾದ ವ್ಯಕ್ತಿಯೇ ವಿಡಿಯೊ ಮೂಲಕ ಹೇಳಿಕೊಂಡಿದ್ದು, ಠಾಣೆಯಲ್ಲಿ ತಾನು ಅನುಭವಿಸಿದ ವ್ಯಥೆಯನ್ನು ತೋಡಿಕೊಂಡಿದ್ದಾನೆ.
ಇನ್ನು ಈ ಘಟನೆ ಮೇ 9ರಂದು ನಡೆದಿದೆ ಎನ್ನಲಾಗಿದ್ದು, ಕುರಾನ್ ಗ್ರಾಮದ ಕೇಶವ್ ತಲ್ವಾಲ್ ಹಲ್ಲೆಗೊಳಗಾದ ವ್ಯಕ್ತಿ. ಈತನನ್ನು ಚಂಬಾದಿಂದ ಮಸೂರಿ ರಸ್ತೆಯಲ್ಲಿ ತೆರಳುತ್ತಿದ್ದಾಗ, ಇಬ್ಬರು ವ್ಯಕ್ತಿಗಳು ಅಪಹರಿಸಿದ್ದು, ಕಡು ಖಾಲ್ ಪ್ರದೇಶದ ಕೋಟಿ ಕಾಲೋನಿ ಪೊಲೀಸ್ ಹೊರಠಾಣೆಯಲ್ಲಿ ಇಟ್ಟಿದ್ದರು ಎಂದು ಕೇಶವ್ ತಲ್ವಾಲ್ ಆರೋಪಿಸಿದ್ದಾನೆ. ಅಲ್ಲದೇ ತನಗಾದ ಹಿಂಸಾತ್ಮಕ ಅನುಭವದ ಬಗ್ಗೆ ಕೇಶವ್ ತಲ್ವಾಲ್ ವಿಡಿಯೋ ಮಾಡಿ ಸೆಪ್ಟೆಂಬರ್ 16ರಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.
ಈ ಸುದ್ದಿಯನ್ನು ಓದಿ: Viral News: 13,000 ಅಡಿ ಎತ್ತರದಿಂದ ಸ್ಕೈಡೈವ್ ಮಾಡಿದ 71 ವರ್ಷದ ಮಹಿಳೆ- ವಿಡಿಯೊ ಫುಲ್ ವೈರಲ್
ಆ ವಿಡಿಯೊದಲ್ಲಿ ಸ್ಟೇಷನ್ ಹೌಸ್ ಆಫೀಸರ್ ಧರ್ಮೇಂದ್ರ ರೌಂತಲಾ ಹಾಗೂ ಇತರ ಪೊಲೀಸ್ ಅಧಿಕಾರಿಗಳು ತನಗೆ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದು, ನನ್ನನು ಥಳಿಸಿ, ವಿವಸ್ತ್ರ ಮಾಡಿ, ಉಗುಳಿ ಬಲವಂತವಾಗಿ ನೀರು ಕುಡಿಸಿ, ಬೂಟುಗಳನ್ನು ತೊಳೆಯುವಂತೆ ಹಾಗೂ ಮೂತ್ರ ಕುಡಿಯುವಂತೆ ಹಿಂಸಾತ್ಮಕವಾಗಿ ಅಮಾನವೀಯತೆಯಿಂದ ನಡೆದುಕೊಂಡಿದ್ದಾರೆ ಎಂದು ನೋವು ಹೊರಹಾಕಿದ್ದಾನೆ.
ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಚರ್ಚೆಗೆ ಗ್ರಾಸವಾಗಿದ್ದು, ನೆಟ್ಟಿಗರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಅಲ್ಲದೇ ಸಾರ್ವಜನಿಕರ ಆಕ್ರೋಶಕ್ಕೂ ಪೊಲೀಸರ ನಡೆ ಕಾರಣವಾಗಿದ್ದು, ಈ ಪ್ರಕರಣವನ್ನು ಹೆಚ್ಚಿನ ತನಿಖೆಗೆ ಒಳಪಡಿಸುವಂತೆ ಆದೇಶಿಸಲಾಗಿದೆ.