ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: 13,000 ಅಡಿ ಎತ್ತರದಿಂದ ಸ್ಕೈಡೈವ್ ಮಾಡಿದ 71 ವರ್ಷದ ಮಹಿಳೆ- ವಿಡಿಯೊ ಫುಲ್‌ ವೈರಲ್

Woman Skydives From 13,000 Feet: 71 ವರ್ಷದ ಮಹಿಳೆಯೊಬ್ಬರು 13,000 ಅಡಿಗಳಿಂದ ಸ್ಕೈಡೈವಿಂಗ್ ಮಾಡಿದ್ದಾರೆ. ಆಕೆಯ ಸಾಧನೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಕೇರಳದ ಇಡುಕ್ಕಿ ಜಿಲ್ಲೆಯ ಕೊನ್ನತಡಿ ನಿವಾಸಿ ಲೀಲಾ ಜೋಸ್ ಇತ್ತೀಚೆಗೆ ದುಬೈನಲ್ಲಿರುವ ತಮ್ಮ ಮಗನನ್ನು ಭೇಟಿ ಮಾಡಲು ಹೋದಾಗ ಈ ಸಾಧನೆ ಮಾಡಿದರು.

13,000 ಅಡಿ ಎತ್ತರದಿಂದ ಸ್ಕೈಡೈವ್ ಮಾಡಿದ 71 ವರ್ಷದ ಮಹಿಳೆ

-

Priyanka P Priyanka P Sep 20, 2025 7:27 PM

ಕೊಚ್ಚಿ: ಸಾಧನೆಗೆ ವಯಸ್ಸು ಅಡ್ಡಿಯಲ್ಲ ಎಂಬ ಮಾತನ್ನು ಈ ಮಹಿಳೆಯೊಬ್ಬರು ಪ್ರೂವ್ ಮಾಡಿದ್ದಾರೆ. 71 ವರ್ಷದ ಮಹಿಳೆಯೊಬ್ಬರು 13,000 ಅಡಿಗಳಿಂದ ಸ್ಕೈಡೈವಿಂಗ್ ಮಾಡುವಾಗ ತೋರಿದ ಸ್ಥೈರ್ಯ ಮತ್ತು ಧೈರ್ಯಕ್ಕಾಗಿ ಅವರನ್ನು ಶ್ಲಾಘಿಸಲಾಗುತ್ತಿದೆ. ಕೇರಳದ (Kerala) ಇಡುಕ್ಕಿ ಜಿಲ್ಲೆಯ ಕೊನ್ನತಡಿ ನಿವಾಸಿ ಲೀಲಾ ಜೋಸ್ (Leela Jose) ಇತ್ತೀಚೆಗೆ ದುಬೈನಲ್ಲಿರುವ ತಮ್ಮ ಮಗನನ್ನು ಭೇಟಿ ಮಾಡಲು ಹೋದಾಗ ಈ ಸಾಧನೆ ಮಾಡಿದರು (Viral News).

ಲೀಲಾ ಜೋಸ್ ಸ್ಕೈಡೈವಿಂಗ್ ಮಾಡಲು ಬಯಸಿದಾಗ ಅವರ ಸ್ನೇಹಿತರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ, ತಾನು ಸ್ಕೈಡೈವಿಂಗ್ ಮಾಡಲೇಬೇಕೆಂದು ಪಣತೊಟ್ಟ ದುಬೈನ ಜನಪ್ರಿಯ ಡೈವಿಂಗ್ ಕೇಂದ್ರದಲ್ಲಿ ಈ ಸಾಹಸವನ್ನು ಪ್ರದರ್ಶಿಸಿದ್ದಾರೆ. ಅವರ ಈ ಸಾಧನೆಯಿಂದಾಗೆ ಲೀಲಾ ಜೋಸ್ ಅವರು ಈಗ ಕೇರಳದಲ್ಲಿ ಅಧಿಕೃತವಾಗಿ ಸ್ಕೈಡೈವಿಂಗ್‌ಗೆ ನೋಂದಾಯಿಸಿಕೊಂಡ ಅತ್ಯಂತ ಹಿರಿಯ ವ್ಯಕ್ತಿ ಎಂಬುದಕ್ಕೆ ಪಾತ್ರರಾಗಿದ್ದಾರೆ.

ಇದೆಲ್ಲವೂ ಸ್ನೇಹಿತರ ನಡುವಿನ ಸರಳ ಚರ್ಚೆಯೊಂದಿಗೆ ಪ್ರಾರಂಭವಾಯಿತು. ಲೀಲಾ ಜೋಸ್ ತಾನು ನಿಜವಾಗಿಯೂ ಸ್ಕೈಡೈವಿಂಗ್ ಮಾಡುವ ಬಗ್ಗೆ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಸ್ಕೈಡೈವಿಂಗ್ ಮಾಡುವಾಗ ಅದು ಹೇಗೆ ಅನಿಸುತ್ತದೆ ಎಂದು ತಿಳಿಯಲು ಬಯಸುತ್ತೇನೆ ಎಂದು ಅವರು ಹೇಳಿದ್ದರು. ಆದರೆ, ಆಕೆಯ ಸ್ನೇಹಿತೆಯರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅವರಿಗಿದ್ದ ಆಸೆಯನ್ನು ನೋಡಿ ನಕ್ಕರು. ವಯಸ್ಸಾದ ಕಾರಣಕ್ಕಾಗಿ ಲೀಲಾಗೆ ಸ್ಕೈಡೈವಿಂಗ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅವರು ಭಾವಿಸಿದ್ದರು.

ಕಳೆದ ತಿಂಗಳು, ತಮ್ಮ ಮಗನನ್ನು ಭೇಟಿ ಮಾಡಲು ದುಬೈಗೆ ಹೋದಾಗ, ಅವರ ಮಗ ಡೈವಿಂಗ್ ಸ್ಲಾಟ್ ಬುಕ್ ಮಾಡಿದ್ದಾನೆಂದು ತಿಳಿದಾಗ ಅವರ ಸ್ಕೈಡೈವಿಂಗ್ ಬಯಕೆ ಮತ್ತೆ ಚಿಗುರಿತು. ಹೀಗಾಗಿ ಲೀಲಾ ಜೋಸ್ ಸ್ಕೈ ಡೈವಿಂಗ್ ಮಾಡಲು ಮುಂದಾದರು. ಅವರು ಕೇಂದ್ರಕ್ಕೆ ಬಂದಾಗ, 71 ವರ್ಷದ ವೃದ್ಧೆಯೊಬ್ಬರು ಸಾಹಸ ಮಾಡಲು ಬಯಸುತ್ತಾರೆ ಎಂದು ತಿಳಿದು ತಂಡವು ದಿಗ್ಭ್ರಮೆಗೊಂಡಿತು.

ಲೀಲಾ 13,000 ಅಡಿ ಎತ್ತರದಿಂದ ಹಾರಿದರು. ಭಯ, ಸಂತೋಷ ಮತ್ತು ರೋಮಾಂಚಕಾರಿ ಸವಾರಿಗೆ ಬಹಳ ಉತ್ಸುಕಳಾಗಿದ್ದರು. 6,000 ಅಡಿ ಎತ್ತರದಲ್ಲಿ ಪ್ಯಾರಾಚೂಟ್ ತೆರೆದುಕೊಂಡಾಗ ಎಲ್ಲಾ ಭಯವೂ ಮಾಯವಾಯಿತು. ಸುರಕ್ಷಿತವಾಗಿ ಭೂಮಿಯ ಮೇಲೆ ಇಳಿಯುವ ನಂಬಿಕೆ ಆಕೆಗಿತ್ತು. ನಂತರ ಇದರ ವಿಡಿಯೊ, ಫೋಟೋವನ್ನು ತನ್ನ ಸ್ನೇಹಿತೆಯರೊಂದಿಗೆ ಹಂಚಿಕೊಂಡಿದ್ದಾರೆ. ಎಲ್ಲರೂ ಕೂಡ ಆಕೆಯ ಸಾಧನೆಗೆ ಅಚ್ಚರಿಗೊಂಡಿದ್ದಾರೆ. ಇಳಿವಯಸ್ಸಿನಲ್ಲೂ ಆಕೆಯ ಉತ್ಸಾಹ ಎಲ್ಲರನ್ನೂ ಬೆರಗುಗೊಳಿಸಿದೆ. ಸಾಧ್ಯವಾದರೆ ಬಾಹ್ಯಾಕಾಶಕ್ಕೆ ಹೋಗಲು ಬಯಸಿದ್ದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Viral Video: ಚೂಯಿಂಗ್ ಗಮ್‍ ಗಂಟಲಿಗೆ ಸಿಲುಕಿ ಒದ್ದಾಡಿದ ಬಾಲಕಿಯ ರಕ್ಷಣೆ- ಹೃದಯಸ್ಪರ್ಶಿ ವಿಡಿಯೊ ವೈರಲ್