ಮುಂಗೇರ್: ಕಳ್ಳನೊಬ್ಬ ಮೊಬೈಲ್ ಫೋನ್ ಕಸಿದುಕೊಂಡು ಚಲಿಸುತ್ತಿರುವ ರೈಲಿನ ಫುಟ್‌ಬೋರ್ಡ್‌ನಲ್ಲಿ ನೇತಾಡಿದ್ದಾನೆ. ವೇಗವಾಗಿ ಚಲಿಸುತ್ತಿದ್ದ ರೈಲಿನ ಫುಟ್‍ಬೋರ್ಡ್‌ನಲ್ಲೇ ನೇತಾಡುತ್ತಾ ಕೊನೆಗೆ ಜಿಗಿದಿದ್ದಾನೆ. ಈ ಘಟನೆ ಬಿಹಾರದ ಮುಂಗೇರ್ ಬಳಿ ಭಾಗಲ್ಪುರ್-ಮುಜಾಫರ್ಪುರ್ ಜನಸೇವಾ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನಲ್ಲಿ ನಡೆದಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಭಾರಿ ವೈರಲ್(Viral Video) ಆಗಿದೆ.
ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರೈಲ್ವೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ವಿಡಿಯೊವನ್ನು ಮೊದಲು ಫೇಸ್‌ಬುಕ್‌ನಲ್ಲಿ ಪಂಚಾಯಿತಿ ಸದಸ್ಯರೊಬ್ಬರು ಹಂಚಿಕೊಂಡಿದ್ದು, ಜುಲೈ 22ರಂದು ಬರಿಯಾರ್‌ಪುರ ನಿಲ್ದಾಣದ ಬಳಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ. ಚಲಿಸುವ ರೈಲಿನ ಕೆಳಗಿನ ಫುಟ್‌ಬೋರ್ಡ್‌ನಲ್ಲಿ ಆರೋಪಿ ನೇತಾಡುತ್ತಿರುವುದು ಕಂಡುಬಂದಿದ್ದು, ಸಹ ಪ್ರಯಾಣಿಕರು ಆತನ ಮೇಲೆ ಕೂಗುತ್ತಾ ಬೆಲ್ಟ್‌ನಿಂದ ಹೊಡೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಕಳ್ಳ, ಇತರರು ಅಲ್ಲಿಂದ ಹೋಗದಿದ್ದರೆ ಅವರ ಕಾಲುಗಳನ್ನು ಹಿಡಿದು ಕೆಳಗೆ ಎಳೆಯುವುದಾಗಿ ಬೆದರಿಕೆ ಹಾಕಿದ್ದಾನೆ.
ವಿಡಿಯೊ ಇಲ್ಲಿದೆ:
बिहार के में जनसेवा एक्सप्रेस में मोबाइल चोरी का मामला सामने आया
— News24 (@news24tvchannel) July 26, 2025
◆ यात्रियों ने एक युवक को पकड़ा, जो चलती ट्रेन से लटक गया
◆ बरियारपुर स्टेशन के पास झाड़ियों में कूदकर फरार हुआ आरोपी#MungerNews | Mobile Theft | #Bihar pic.twitter.com/HlDaZMqohl
ಅಷ್ಟೇ ಅಲ್ಲ, ಕಳ್ಳ ಬೋಗಿಯಿಂದ ಜಾರಿ ಕೆಳಗೆ ಇಳಿದು ರೈಲಿನ ಫುಟ್‌ಬೋರ್ಡ್‌ನಲ್ಲಿ ನೇತಾಡಿದ್ದಾನೆ. ರೈಲು ಸೇತುವೆಯನ್ನು ದಾಟಿದ ನಂತರ ಪೊದೆಗಳಿಗೆ ಹಾರಿ ತಪ್ಪಿಸಿಕೊಂಡಿದ್ದಾನೆ. ಈ ಸಂಬಂಧ ಜಮಾಲ್ಪುರ ರೈಲ್ವೆ ಎಸ್ಪಿ ರಮಣ್ ಚೌಧರಿ, ವಿಡಿಯೋ ತಮ್ಮ ಗಮನಕ್ಕೆ ಬಂದಿದೆ ಮತ್ತು ರೈಲ್ವೆ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ದೃಢಪಡಿಸಿದರು. “ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಮತ್ತು ವಿಡಿಯೊದಲ್ಲಿ ಕಂಡುಬಂದ ವ್ಯಕ್ತಿಯನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ: Gym Seena: ಅಣ್ಣಯ್ಯ ಸೀರಿಯಲ್‌ನ ಜಿಮ್ ಸೀನಾ ವಿಶ್ವವಾಣಿ ಸಂದರ್ಶನ ವೈರಲ್; ವಿಶ್ ಮಾಡಿದ ಕಿಚ್ಚ ಸುದೀಪ್!
ಕಳ್ಳತನ ನಡೆದ ಪ್ರದೇಶವು ದರೋಡೆ ಮತ್ತು ಕಳ್ಳತನ ಘಟನೆಗಳಿಗೆ ಕುಖ್ಯಾತವಾಗಿದೆ. ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಈ ಪ್ರದೇಶದಲ್ಲಿ ಬಲವಾದ ಭದ್ರತೆ ಮತ್ತು ಪೊಲೀಸ್ ವ್ಯವಸ್ಥೆ ಮಾಡಬೇಕೆಂದು ಪ್ರಯಾಣಿಕರು ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದ್ದಾರೆ.