ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gym Seena: ಅಣ್ಣಯ್ಯ ಸೀರಿಯಲ್‌ನ ಜಿಮ್ ಸೀನಾ ವಿಶ್ವವಾಣಿ ಸಂದರ್ಶನ ವೈರಲ್; ವಿಶ್ ಮಾಡಿದ ಕಿಚ್ಚ ಸುದೀಪ್!

Kichha Sudeep: ವಿಶ್ವವಾಣಿ ಟಿವಿ ಸ್ಪೆಷಲ್ ಯುಟ್ಯೂಬ್ ಚಾನೆಲ್‌‌ನಲ್ಲಿ ಪ್ರಸಾರವಾದ ಜಿಮ್ ಸೀನಾ‌ ಮತ್ತು ಗುಂಡಮ್ಮ ಅವರ ಸಂದರ್ಶನದಲ್ಲಿ ತಮ್ಮ ಬಗ್ಗೆ ಕಿರುತೆರೆ ನಟ ಸುಷ್ಮಿತ್ ಜೈನ್ ಆಡಿರುವ ಮಾತುಗಳಿಗೆ ನಟ ಕಿಚ್ಚ ಸುದೀಪ್‌ ಅವರು ಧನ್ಯವಾದ ತಿಳಿಸಿದ್ದಾರೆ. ಈ ವಿಷಯವನ್ನು ಇನ್ಸ್ಟಾಗ್ರಾಮ್‌ನ ಮೂಲಕ ಜಿಮ್ ಸೀನಾ ಅವರು ಹಂಚಿಕೊಂಡಿದ್ದಾರೆ.

ಜಿಮ್ ಸೀನಾ ವಿಶ್ವವಾಣಿ ಸಂದರ್ಶನ ವೈರಲ್; ವಿಶ್ ಮಾಡಿದ ಕಿಚ್ಚ ಸುದೀಪ್!

Prabhakara R Prabhakara R Jul 25, 2025 5:15 PM

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಸೀರಿಯಲ್‌ (Annayya Serial) ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಈ ಧಾರಾವಾಹಿಯಲ್ಲಿ ಅಭಿನಯಿಸಿರುವ ಜಿಮ್ ಸೀನಾ ಹಾಗೂ ಗುಂಡಮ್ಮ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡುತ್ತಿದೆ. ಇವರಿಬ್ಬರ ನಡುವಿನ ಹಾವು ಮುಂಗುಸಿ ಆಟ, ಸಂಭಾಷಣೆ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಜಿಮ್ ಸೀನಾ (Gym Seena) ಪಾತ್ರದ ಮೂಲಕ ಗಮನ ಸೆಳೆಯುತ್ತಿರುವ ನಟ ಸುಷ್ಮಿತ್ ಜೈನ್ ಅವರಿಗೆ ಇದೀಗ ಜನಪ್ರಿಯ ನಟ ಕಿಚ್ಚ ಸುದೀಪ್ (Kichha Sudeep) ಅವರೇ ಮೆಸೇಜ್ ಮಾಡಿ ಶುಭ ಕೋರಿದ್ದಾರೆ. ಈ ಕುರಿತು ಜಿಮ್ ಸೀನಾ ಅಲಿಯಾಸ್ ಸುಷ್ಮಿತ್ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ಅಂದ ಹಾಗೆ, ಸುದೀಪ್ ಶುಭಾಶಯ ಹೇಳಲು ಕಾರಣ, ವಿಶ್ವವಾಣಿ ಟಿವಿ ಸ್ಪೆಷಲ್ ಯುಟ್ಯೂಬ್ ಚಾನೆಲ್‌‌ನಲ್ಲಿ ಪ್ರಸಾರವಾದ ಜಿಮ್ ಸೀನಾ‌ (ನಟ ಸುಷ್ಮಿತ್ ಜೈನ್) ಮತ್ತು ಗುಂಡಮ್ಮ (ಪ್ರತೀಕ್ಷಾ ಶ್ರೀನಾಥ್) ಅವರ ಸಂದರ್ಶನ (Gym Seena and Gundamma Interview). ಈ ಸಂದರ್ಶನದಲ್ಲಿ ಬರುವ ಜಿಮ್ ಸೀನನ ಲಂಗೋಟಿ ಪ್ರಸಂಗ ಸುದೀಪ್ ಅವರ ಗಮನ ಸೆಳೆದಿದೆ. ಜತೆಗೆ ತಮ್ಮ ಆಟಿಟ್ಯೂಡ್‌ ಬಗ್ಗೆ ಮುಕ್ತವಾಗಿ ಮಾತನಾಡಿದ್ದು ಅವರಿಗೆ ಇಷ್ಟವಾಗಿದೆ.

ಈ ಧಾರಾವಾಹಿಗಾಗಿಯೇ ಕಟ್ಟುಮಸ್ತಾದ ದೇಹವನ್ನು ಬೆಳೆಸಿರುವ ಜಿಮ್ ಸೀನಾ ಅವರು ವಿಶ್ವವಾಣಿಯ ತಮ್ಮ ಸಂದರ್ಶನದಲ್ಲಿ, ಕಿಚ್ಚ ಸುದೀಪ್ ಅವರ ಬಗ್ಗೆ ಮಾತನಾಡಿದ್ದರು. ಈ ವಿಚಾರವಾಗಿ ಸುದೀಪ್ ಅವರು ಸುಷ್ಮಿತ್ ಅವರಿಗೆ ವಿಶ್ ಮಾಡಿದ್ದಾರೆ.



ಈ ಸುದ್ದಿಯನ್ನೂ ಓದಿ | Bharjari Bachelors Season 2: ಈ ವೀಕೆಂಡ್‌ನಲ್ಲಿ ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ಫಿನಾಲೆ; ಯಾರ ಪಾಲಾಗಲಿದೆ ವಿನ್ನರ್ಸ್‌ ಮಾಲೆ?

ವಿಶ್ವವಾಣಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದ ಸುಷ್ಮಿತ್ ಜೈನ್ ಅವರು, ಎಲ್ಲರೂ ಕಿಚ್ಚ ಸುದೀಪ್‌ಗೆ Attitude ಇದೆ ಎನ್ನುತ್ತಾರೆ. ನಾನು ಆ ಆಟಿಟ್ಯೂಡ್‌ಗೆ ಫ್ಯಾನ್‌. ನಾನು ಕಿಚ್ಚ ಸುದೀಪ್ ಅವರ ಫ್ಯಾನ್‌ ಎಂದಿದ್ದರು. ನಾನೊಬ್ಬ ಕಲಾವಿದನಾದ ಮೇಲೆ ಗೊತ್ತಾಯ್ತು. ಅವರಿಗೆ ಯಾಕೆ attitude ಇದೆ ಅಂತ. ಇದರಲ್ಲಿ ತಪ್ಪೇನಿದೆ? ಅವರನ್ನು ನಾವು ಇಷ್ಟಪಡುವುದೇ ಈ ಕಾರಣಕ್ಕೆ ಅಲ್ವ? ಸುದೀಪ್ ಅವರನ್ನು Attitude ಇಲ್ಲದೆ ನೋಡುವುದಕ್ಕೆ ನಮಗೆ ಇಷ್ಟವೇ ಆಗಲ್ಲ. ಅದು ಗಾಂಚಾಲಿ ಅಲ್ಲವೇ ಅಲ್ಲ. ಅವರು ತೂಕದ ಮಾತುಗಳನ್ನು ಹೇಳುತ್ತಾರಲ್ಲ ಅದನ್ನೂ ನಾನು ನೋಡಿದ್ದೇನೆ ಎಂದು ಜಿಮ್‌ ಸೀನಾ ಹೇಳಿಕೊಂಡಿದ್ದರು. ಜತೆಗೆ, ಧಾರಾವಾಹಿಯಲ್ಲಿ ಬರುವ ದೃಶ್ಯವೊಂದರಲ್ಲಿ ಧೈರ್ಯವಾಗಿ ಲಂಗೋಟಿಯಲ್ಲಿ ಕಾಣಿಸಿಕೊಳ್ಳಲು, ಸುದೀಪ್ ಅವರು ಪೈಲ್ವಾನ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಆ ಲಂಗೋಟಿ ದೃಶ್ಯವೇ ಸ್ಫೂರ್ತಿ ಎಂದು ಹೇಳಿದ್ದರು.

ಇದೀಗ ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೊ ನೋಡಿ ಕಿಚ್ಚ ಸುದೀಪ್ ಅವರು ಜಿಮ್‌ ಸೀನಾಗೆ ವಿಶ್ ಮಾಡಿದ್ದಾರೆ.

ಇಷ್ಟಕ್ಕೂ ಸುದೀಪ್ ಹೇಳಿದ್ದೇನು?:

ಸಂದರ್ಶನದಲ್ಲಿ ನೀವು ಮಾತನಾಡಿದ್ದನ್ನು ಕೇಳಿದೆ. ನಿಮ್ಮ ಮಾತುಗಳಿಗೆ ಧನ್ಯವಾದಗಳು. ಬ್ರದರ್ ನಿಮಗೆ ಶುಭಾಶಯಗಳು... ಚಿಯರ್ಸ್" ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ಈ ವಿಷಯವನ್ನು ಇನ್ಸ್ಟಾಗ್ರಾಮ್‌ನ ಮೂಲಕ ಜಿಮ್ ಸೀನಾ ಅವರು ಹಂಚಿಕೊಂಡಿದ್ದಾರೆ. ಕಿಚ್ಚ ಸುದೀಪ್ ಅವರ ಮೆಸೇಜ್‌ಗೆ ರಿಪ್ಲೈ ಮಾಡಿರುವ ಜಿಮ್‌ ಸೀನಾ ಅವರು, ತುಂಬಾ ಧನ್ಯವಾದಗಳು ಸರ್, ಬೆಳ್ಳಂಬೆಳಗ್ಗೆ ನಿಮ್ಮ ಸಂದೇಶ ಬಂದಿದ್ದು ನೋಡಿ ಖುಷಿ ಆಯ್ತು. ನಿಮ್ಮ ಮೆಸೇಜ್‌ನಿಂದ ಈ ದಿನ ಮರೆಯಲಾಗದ ದಿನವಾಗಿ ಬದಲಾಗಿದೆ. ನನ್ನ ವಿಡಿಯೊವನ್ನು ವೈರಲ್ ಮಾಡಿದ ಕಿಚ್ಚ ಸುದೀಪ್ ಸರ್ ಅವರ ಪ್ರತಿಯೊಬ್ಬ ಅಭಿಮಾನಿ ಪುಟಕ್ಕೂ ಧನ್ಯವಾದಗಳು ಎಂದು ಜಿಮ್ ಸೀನಾ ಅವರು ಮೆಸೇಜ್ ಮಾಡಿದ್ದಾರೆ. ಈ ಸಂದೇಶದ ವಿಡಿಯೊ ತುಣುಕನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.