ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಕದ್ದಿದ್ದಕ್ಕೆ ಮರುಕ! ಕ್ಷಮಿಸಿ ಎಂದು ಪತ್ರ ಬರೆದು ಚಿನ್ನದ ಸರ ಹಿಂದಿರುಗಿಸಿದ ಕಳ್ಳ

Thief Returns Gold Chain: ಮಹಿಳೆಯೊಬ್ಬರ ಚಿನ್ನದ ಸರವನ್ನು ಕದ್ದ ಕಳ್ಳನೊಬ್ಬ ಒಂಭತ್ತು ದಿನಗಳ ನಂತರ ಕ್ಷಮೆಯಾಚಿಸುವ ಪತ್ರದೊಂದಿಗೆ ಹಿಂದಿರುಗಿಸಿದ್ದಾನೆ. ಕೇರಳದಲ್ಲಿ ಈ ಘಟನೆ ನಡೆದಿದ್ದು, ಪೊಯಿನಾಚಿಯ ಪರಂಬ ಲಕ್ಷ್ಮಿ ನಿವಾಸದ ಎಂ. ಗೀತಾ ಅವರು ತಮ್ಮ ಪತಿಯೊಂದಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಳ್ಳನು ಅವರ ಚಿನ್ನದ ಸರವನ್ನು ಎಗರಿಸಿದ್ದಾನೆ.

ತಿರುವನಂತಪುರ: ಕಷ್ಟ ಪಟ್ಟು ದುಡಿದ ಸಂಪಾದಿಸಿದ ಹಣದಲ್ಲಿ ಕೊಂಡುಕೊಂಡ ಯಾವುದೇ ವಸ್ತು ಇರಲಿ ಅದು ಕಳೆದು ಹೋದರೆ ಕಳೆದುಕೊಂಡವನ ನೋವು ಅವನಿಗೆ ಮಾತ್ರ ಗೊತ್ತಿರುತ್ತೆ. ಅದರಲ್ಲೂಅದೆಲ್ಲಾದರೂ ಕಳ್ಳತನವಾದರೆ ಆತನ ಆತನ ಪರಿಸ್ಥಿತಿ ಊಹಿಸಲೂ ಸಾಧ್ಯವಿಲ್ಲ. ಆದರೆ ಯಾವ ವಸ್ತುವನ್ನು ಕಳ್ಳ ಎಗರಿಸಿದ್ದನೋ ಅದು ವಾಪಾಸ್‌ ಸಿಕ್ಕರೆ ಅಥವಾ ಕದ್ದ ಕ‍ಳ್ಳನೇ ವಾಪಾಸ್‌ ತಂದುಕೊಟ್ಟರೆ ಹೇಗಿರುತ್ತೆ? ಇದೀಗ ಅಂತಹದ್ದೇ ಒಂದು ಘಟನೆ ಕೇರಳದಲ್ಲಿ ನಡೆದಿದೆ. ಈ ಸುದ್ದಿ ಓದಿದ್ರೆ ನಿಮಗೆ ವಿಚಿತ್ರ(Viral News) ಅನಿಸಬಹುದು.

ಹೌದು, ಮಹಿಳೆಯೊಬ್ಬರ ಚಿನ್ನದ ಸರವನ್ನು ಕದ್ದ ಕಳ್ಳನೊಬ್ಬ ಒಂಭತ್ತು ದಿನಗಳ ನಂತರ ಕ್ಷಮೆಯಾಚಿಸುವ ಪತ್ರದೊಂದಿಗೆ ಹಿಂದಿರುಗಿಸಿದ್ದಾನೆ. ಕೇರಳದಲ್ಲಿ ಈ ಘಟನೆ ನಡೆದಿದ್ದು, ಪೊಯಿನಾಚಿಯ ಪರಂಬ ಲಕ್ಷ್ಮಿ ನಿವಾಸದ ಎಂ. ಗೀತಾ ಅವರು ತಮ್ಮ ಪತಿಯೊಂದಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಳ್ಳ ಅವರ ಚಿನ್ನದ ಸರವನ್ನು ಎಗರಿಸಿದ್ದಾನೆ. ಈ ಸರವನ್ನು ಮದುವೆ ದಿನ ಗೀತಾಗೆ ಹಾಕಲಾಗಿತ್ತು. ಈ ಸಂಬಂಧ ಗೀತಾ ಅವರು ಮೇಲ್ಪರಂಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಕಾಣೆಯಾದ ಸರದಿಯ ವಿವರಗಳನ್ನು ಸ್ಥಳೀಯ ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಂಡರು.

ಇದನ್ನೂ ಓದಿ: Anganwadi in Kerala: ಇದೇನು ಅಂಗನವಾಡಿಯೋ, ರೆಸಾರ್ಟೋ?! ಕೇರಳದಲ್ಲಿ ನಿರ್ಮಾಣವಾಗಿದೆ ಅತ್ಯಾಧುನಿಕ ಸೌಲಭ್ಯವಿರುವ ಅಂಗನವಾಡಿ; ಇಲ್ಲಿದೆ ವಿಡಿಯೊ

ಕಳ್ಳತನವಾದ ಕೆಲವು ದಿನಗಳ ನಂತರ, ದಂಪತಿ ಪೊಯಿನಾಚಿಗೆ ಹೊರಡಲು ಸಿದ್ಧರಾಗುತ್ತಿದ್ದಂತೆ, ಕದ್ದ ಸರ ಮತ್ತು ಪತ್ರವನ್ನು ತಮ್ಮ ವರಾಂಡಾದಲ್ಲಿ ಇಡಲಾಗಿದ್ದನ್ನು ಗಮನಿಸಿದರು. “ಈ ಸರ ನನಗೆ ಸಿಕ್ಕು ಒಂಬತ್ತು ದಿನಗಳಾಗಿವೆ. ಮೊದಲಿಗೆ ನನಗೆ ಸಂತೋಷವಾಯಿತು. ಆದರೆ ನಾನು ಅದನ್ನು ಹಿಡಿದಾಗಲೆಲ್ಲಾ ನನಗೆ ಪಶ್ಚಾತ್ತಾಪ ಮೂಡುತ್ತಿತ್ತು. ಅದನ್ನು ಏನು ಮಾಡಬೇಕೆಂದು ಯೋಚಿಸಿದೆ. ನಂತರ ಅದು ಮದುವೆಗೆಂದು ಖರೀದಿ ಮಾಡಿದ್ದ ಆಭರಣ ಎಂದು ಹೇಳುವ ವಾಟ್ಸಾಪ್ ಮೆಸೇಜ್‌ ಅನ್ನು ನಾನು ಗಮನಿಸಿದೆ. ಇದರಿಂದ ನನಗೆ ತೀವ್ರ ನೋವುಂಟಾಗಿತ್ತು. ನನ್ನ ಗುರುತನ್ನು ಬಹಿರಂಗಪಡಿಸಲು ನಾನು ಬಯಸುವುದಿಲ್ಲ. ಇದನ್ನು ಇಷ್ಟು ದಿನ ಇಟ್ಟುಕೊಂಡು ನಿಮಗೆ ನೋವುಂಟು ಮಾಡಿದ್ದಕ್ಕಾಗಿ ಕ್ಷಮಿಸಿ” ಎಂದು ಪತ್ರ ಬರೆದಿದ್ದಾನೆ. ಆ ಪತ್ರದ ಕೆಳಗೆ ಹತ್ತಿರದ ಕುಂದಮ್ಕುಳಿ ಪಟ್ಟಣದ ಹೆಸರನ್ನು ಬರೆಯಲಾಗಿತ್ತು.

ಮಿಲಾನ್‌ನಲ್ಲಿ ಕದ್ದ ಗಡಿಯಾರವನ್ನು ಕಳ್ಳ ಹಿಂದಿರುಗಿಸಿದ!

ಇಟಲಿಯ ಮಿಲನ್‍ನಲ್ಲಿ ಇತ್ತೀಚೆಗೆ, 6 ಲಕ್ಷ ಯುರೋಗಳಷ್ಟು (ಸುಮಾರು 6.13 ಕೋಟಿ ರೂ.) ಮೌಲ್ಯದ ಐಷಾರಾಮಿ ವಾಚ್‍ಗಳ ಕಳ್ಳತನ ಪ್ರಕರಣದಲ್ಲೂ ಇದೇ ರೀತಿ ಘಟನೆ ನಡೆದಿದೆ. ಮಿಲನ್‌ನ ಪಂಚತಾರಾ ಹೋಟೆಲ್‌ನಲ್ಲಿ ಅಮೆರಿಕದ ಪ್ರವಾಸಿಗನ ಬಳಿಯಿದ್ದ ದುಬಾರಿ ವಾಚ್ ಅನ್ನು ಕಳವುಗೈಯಲಾಗಿತ್ತು. 24 ಗಂಟೆಗಳೊಳಗೆ ಕದ್ದ ವಸ್ತುಗಳನ್ನು ನಿಗೂಢವಾಗಿ ಹಿಂತಿರುಗಿಸಲಾಯಿತು. ಜೊತೆಗೆ ಕಳ್ಳನು ಪತ್ರ ಬರೆದಿದ್ದು, ವಾಚ್‍ಗಳು ಅಸಲಿಯಲ್ಲ ನಕಲಿ ಎಂದು ತಿಳಿಸಿದ್ದಾನೆ.

ಇದನ್ನೂ ಓದಿ: Viral Video: ಭರ್ಜರಿ ಬಾಡೂಟ ತಿಂದು ತೇಗಿದ್ರು- 23,000 ರೂ. ಬಿಲ್ ಕೊಡದೆ ಓಡಿ ಹೋದ ಯುವಕರು; ಇಲ್ಲಿದೆ ವಿಡಿಯೊ