ವಾಷಿಂಗ್ಟನ್: ಯಾರಿಗೆ ಐಸ್‌ಕ್ರೀಮ್ (Ice Cream) ಇಷ್ಟ ಇಲ್ಲ ಹೇಳಿ- ವೆನಿಲ್ಲಾ, ಮ್ಯಾಂಗೋ, ಚಾಕೊಲೇಟ್ ಸೇರಿದಂತೆ ವಿವಿಧ ಬಗೆಯ ಐಸ್‌ಕ್ರೀಮ್ ಫ್ಲೇವರ್‌ಗಳು ನಮ್ಮಲ್ಲಿ ಲಭ್ಯ. ಆದರೆ ಇದೀಗ ಈ ಸಾಲಿಗೆ ಮತ್ತೊಂದು ವಿಭಿನ್ನ ರುಚಿಯ ಐಸ್‌ಕ್ರೀಮ್ ಸೇರಿಕೊಳ್ಳುತ್ತಿದ್ದು, ಜನಪ್ರಿಯ ಬ್ರ್ಯಾಂಡ್ ಕಂಪನಿ ಬ್ರೆಸ್ಟ್ ಮಿಲ್ಕ್ ಐಸ್‌ಕ್ರೀಮ್ ಬಿಡುಗಡೆ ಮಾಡುತ್ತಿದೆ. ಹೌದು, ಅಮೆರಿಕದ (America) ಫ್ರಿಡಾ (Frida) ಎಂಬ ಕಂಪನಿ ಮತ್ತು ನ್ಯೂಯಾರ್ಕ್‌ನ ಒಡ್‌ಫೆಲೋಸ್ ಐಸ್‌ಕ್ರೀಮ್ ಕಂಪನಿಯ (Ice Cream Company) ಸಹಯೋಗದಲ್ಲಿ ಸ್ತನದ ಹಾಲಿನ (Breast Milk) ರುಚಿಯನ್ನು ಹೋಲುವ ವಿಶಿಷ್ಟ ಐಸ್‌ಕ್ರೀಮ್‌ನ್ನು ಪರಿಚಯಿಸಿದೆ. ಇದು ಇಂಟರ್‌ನೆಟ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ. “ಸ್ತನದ ಹಾಲಿನ ಐಸ್‌ಕ್ರೀಮ್” ಎಂಬ ಶಬ್ದಗಳಿರುವ ಜಾಹೀರಾತು ಪೋಸ್ಟ್ ಈ ಉತ್ಪನ್ನದ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ವರದಿಯಂತೆ, ಈ ಐಸ್‌ಕ್ರೀಮ್ ಸ್ತನದ ಹಾಲಿನ ರುಚಿಯನ್ನು ಹೋಲುತ್ತದೆಯಾದರೂ, ಇದರಲ್ಲಿ ನಿಜವಾದ ಸ್ತನದ ಹಾಲು ಇಲ್ಲ. ಫ್ರಿಡಾದ ಹೇಳಿಕೆಯ ಪ್ರಕಾರ, ಈ ಐಸ್‌ಕ್ರೀಮ್‌ನಲ್ಲಿ ಹಾಲು, ದಪ್ಪ ಕೆನೆ, ಸ್ಕಿಮ್ ಮಿಲ್ಕ್ ಪೌಡರ್, ಸಕ್ಕರೆ, ಡೆಕ್ಸ್‌ಟ್ರೋಸ್, ಮೊಟ್ಟೆಯ ಹಳದಿ ಭಾಗ, ಇನ್ವರ್ಟ್ ಸಕ್ಕರೆ, ಗ್ವಾರ್ ಗಮ್, ಉಪ್ಪಿನ ಕಾರಾಮೆಲ್ ರುಚಿ, ಜೇನುತುಪ್ಪದ ಸಿರಪ್, ಲಿಪೊಸೊಮಲ್ ಬೋವಿನ್ ಕೊಲೊಸ್ಟ್ರಮ್, ಹಳದಿ ಆಹಾರ ಬಣ್ಣ, 0.1% ಪ್ರೊಪಿಲ್‌ಪ್ಯಾರಾಬೆನ್ ಮತ್ತು ಎಫ್‌ಡಿ & ಸಿ ರೆಡ್ 40 ಸೇರಿವೆ.
ಈ ಸುದ್ದಿಯನ್ನು ಓದಿ: Viral Post: ಟೈರ್ ಪಂಕ್ಚರ್ ಸ್ಕ್ಯಾಮ್‌ನಿಂದ 8,000 ರೂ. ಕಳೆದುಕೊಂಡ ವ್ಯಕ್ತಿ; ಇಲ್ಲಿದೆ ವಂಚನೆಯ ಕಥೆ
ವಿಶಿಷ್ಟ ರುಚಿ
ಬ್ರೆಸ್ಟ್ ಮಿಲ್ಕ್ ಐಸ್‌ಕ್ರೀಮ್ ರುಚಿಯನ್ನು ಕಂಪನಿ ಒಂದೇ ವಾಕ್ಯದಲ್ಲಿ ಉತ್ತರಿಸಿದ್ದು, ಇದು ಸಿಹಿಯಾಗಿ, ಬಾದಾಮಿ ಪಿಸ್ತಾ ರೀತಿಯ ಒಣ ಹಣ್ಣುಗಳ ರುಚಿಯಂತೆ ಹಾಗೂ ಹಿತಮಿತವಾಗಿ ಉಪ್ಪು ಇರಲಿದೆ ಎಂದು ಕಂಪನಿ ಹೇಳಿದೆ. ಎದೆಹಾಲಿನ ಫಾರ್ಮುಲಾದಲ್ಲಿ ಈ ಐಸ್‌ಕ್ರೀಮ್ ತಯಾರಾಗಿದ್ದು, ಇದರಲ್ಲಿ ಮೆದಳು ಶಕ್ತಿ ಹೆಚ್ಚಿಸುವ ಒಮೆಗಾ 3s, ಎನರ್ಜಿ ಉತ್ತೇಜನ ನೀಡುವ ಲ್ಯಾಕ್ಟೋಸ್, ಪ್ರೊಟಿನ್, ವಿಟಮಿನ್, ಮಿನರಲ್ಸ್ ಒಳಗೊಂಡಿರಲಿದೆ ಎಂದಿದೆ.
ಇನ್ನು ಇದು ಅಮೆರಿಕದಲ್ಲಿ ಮಾತ್ರ ಬಿಡುಗಡೆಯಾಗುತ್ತಿಲ್ಲ. ಬಹುತೇಕ ದೇಶದಲ್ಲಿ ಬಿಡುಗಡೆಯಾಗುತ್ತಿದೆ. ಫ್ರಿಡಾ ಹೇಳಿದಂತೆ ಜಗತ್ತಿನ ಹಲವರಲ್ಲಿರುವ ಇರುವ ಎದೆ ಹಾಲಿನ ರುಚಿ ಕುತೂಹಲಕ್ಕೆ ಈ ಐಸ್‌ಕ್ರೀಮ್ ಉತ್ತರ ನೀಡಲಿದೆ ಎಂದಿದೆ. ಹೀಗಾಗಿ ಹಲವು ದೇಶಗಳಲ್ಲಿ ಫ್ರಿಡಾ ಬ್ರೆಸ್ಟ್ ಮಿಲ್ಕ್ ಐಸ್‌ಕ್ರೀಮ್ ಲಭ್ಯವಾಗಲಿದೆ.