ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಅಕ್ರಮ ವಲಸಿಗರ ಬೇಟೆ ವೇಳೆ ಏಕಾಏಕಿ ಕೇಳಿ ಬಂತು ಮಗು ಅಳುತ್ತಿರುವ ಸದ್ದು! ಈ ವಿಡಿಯೊ ನೋಡಿ

US crackdown on illegal immigrants: ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ (ICE) ಏಜೆಂಟರು ಬಲವಂತವಾಗಿ ಕೋಣೆಗೆ ಪ್ರವೇಶಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವ್ಯಾಪಕ ಪ್ರತಿಕ್ರಿಯೆಯನ್ನು ಹುಟ್ಟುಹಾಕಿದೆ. ವಿಡಿಯೊದಲ್ಲಿ ಮಗುವಿನ ಅಳುವ ಧ್ವನಿ ಕೇಳಿಸುತ್ತದೆ.

ವಾಷಿಂಗ್ಟನ್: ಅಮೆರಿಕದಲ್ಲಿ (America) ಅಕ್ರಮವಾಗಿ ನೆಲೆಸಿರುವ ವಿದೇಶಿಯರನ್ನು ತೊಡೆದು ಹಾಕುವ ಕಾರ್ಯಾಚರಣೆ ಸಾಗುತ್ತಿದೆ. ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ ಗಾದಿಗೆ ಏರಿದ ನಂತರ ಅಕ್ರಮ ವಲಸಿಗರ ವಿರುದ್ಧದ ನೀತಿ ಬಿಗಿಯಾಗಿದೆ. ಇದೀಗ ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ (ICE) ಏಜೆಂಟರು ಬಲವಂತವಾಗಿ ಕೋಣೆಗೆ ಪ್ರವೇಶಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದ್ದು, ವ್ಯಾಪಕ ಪ್ರತಿಕ್ರಿಯೆಯನ್ನು ಹುಟ್ಟುಹಾಕಿದೆ. ಕಾರ್ಯಾಚರಣೆಯ ಸಮಯದಲ್ಲಿ, ಒಬ್ಬ ಮಹಿಳೆ ಆಘಾತಕ್ಕೊಳಗಾಗಿದ್ದು, ಆಕೆಯ ನವಜಾತ ಶಿಶು ಅಳುವುದು ಸ್ಪಷ್ಟವಾಗಿ ಕೇಳಿಸುತ್ತಿದೆ.

ಮುಚ್ಚಿದ ಕೋಣೆಯೊಂದಿಗೆ ವಿಡಿಯೊ ಪ್ರಾರಂಭವಾಗುತ್ತದೆ. ಕೆಲವು ಕ್ಷಣಗಳ ನಂತರ, ಬಾಗಿಲು ಮುರಿದುಹೋಗುತ್ತದೆ. ICE ಏಜೆಂಟರು, ಚಲಿಸಬೇಡಿ, ಕೈಗಳನ್ನು ಮೇಲಕ್ಕೆತ್ತಿ ಎಂದು ಕೂಗುತ್ತಾ, ಗುಂಡಿನ ಚಕಮಕಿ ನಡೆಸಿದ್ದಾರೆ. ಇದರಿಂದ ಹೆದರಿದ ಇಬ್ಬರು ಪುರುಷರು ತಮ್ಮ ಕೈಗಳನ್ನು ಮೇಲಕ್ಕೆತ್ತಿ ಬಾಗಿಲಿನ ಬಳಿಗೆ ಬಂದಾಗ, ಮಗುವಿನ ಅಳುವ ಧ್ವನಿ ಕೇಳಿಸುತ್ತದೆ.

ವಿಡಿಯೊ ವೀಕ್ಷಿಸಿ:



ಇದನ್ನೂ ಓದಿ: Rangaswamy Mookanahalli Column: ಅಕ್ರಮ ವಲಸೆ ಹಿಂದಿನ ದಾರುಣ ಕಥೆಗಳು ನೂರು !

ಒರೆಗಾನ್‌ನ ಪೋರ್ಟ್‌ಲ್ಯಾಂಡ್‌ನಲ್ಲಿ ಇಬ್ಬರನ್ನು ಬಂಧನ ಮಾಡುವ ಮೊದಲು ICE ಏಜೆಂಟರು ಬಾಗಿಲನ್ನು ಒಡೆದು ಕೋಣೆಗೆ ನುಗ್ಗಿದರು ಎಂದು X ಬಳಕೆದಾರರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಗೃಹ ಭದ್ರತಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ICE ಅಧಿಕಾರಿಗಳು ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಮೊದಲು ಅಕ್ರಮ ವಲಸಿಗನನ್ನು ಎಳೆದುಕೊಂಡು ಹೋದರು. ಆ ಕೋಣೆಯಲ್ಲಿ ಒಬ್ಬ ಮಹಿಳೆ ಮತ್ತು ಆಕೆಯ 3 ತಿಂಗಳ ಮಗು ಸೇರಿದಂತೆ ಒಂದು ಕುಟುಂಬವಿತ್ತು ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಬಳಕೆದಾರರ ಗಮನ ಸೆಳೆದಿದೆ. ಈ ವಿಡಿಯೊ ವೈರಲ್ ಆದ ನಂತರ ಜನರು ವಿವಿಧ ಪ್ರಶ್ನೆಗಳನ್ನು ಎತ್ತಿದ್ದಾರೆ. ಮಕ್ಕಳನ್ನು ಈ ಪರಿಸ್ಥಿತಿಗೆ ತಳ್ಳಿದ್ದಕ್ಕೆ ಆ ಪೋಷಕರಿಗೆ ನಾಚಿಕೆಯಾಗಬೇಕು ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ. ಆದರೆ, ಈ ಆಘಾತ ಮಾತ್ರ ಶಾಶ್ವತವಾಗಿರುತ್ತದೆ. ಆ 3 ತಿಂಗಳ ಮಗು ಈ ಕಥೆಯೊಂದಿಗೆ ಬೆಳೆಯುತ್ತದೆ ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.

ಇತ್ತೀಚೆಗಷ್ಟೇ ಡೊನಾಲ್ಡ್‌ ಟ್ರಂಪ್‌ ಬೆಂಬಲಿಗ ವಿಸ್ಕಾನ್ಸಿನ್‌ನ ಬ್ರಾಡ್ಲಿ ಬಾರ್ಟೆಲ್ ಅವರ ಪತ್ನಿಯನ್ನು ಬಂಧಿಸಲಾಗಿತ್ತು. ವಲಸೆ ನೀತಿಯ ಆಧಾರದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು. ಬ್ರಾಡ್ಲಿ ಬಾರ್ಟೆಲ್ ಅವರ ಪತ್ನಿ ಕ್ಯಾಮಿಲಾ ಮುನೋಜ್ ಮೂಲತಃ ಪೆರುವಿಯನ್ ಪ್ರಜೆ ಎಂದು ತಿಳಿದು ಬಂದಿದೆ. ಕಾನೂನುಬದ್ಧವಾಗಿ ಅಮೆರಿಕದ ಪ್ರಜೆಯಾಗುವ ಪ್ರಕ್ರಿಯೆಯಲ್ಲಿದ್ದರೂ, ತನ್ನ ಸ್ಯಾನ್ ಜುವಾನ್ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಬಂಧಿಸಿದರು ಎಂದು ಬ್ರಾಡ್ಲಿ ಬಾರ್ಟೆಲ್ ತಿಳಿಸಿದ್ದಾರೆ. ಆದರೂ ಪತ್ನಿಯನ್ನು ಬಂಧಿಸಿರುವುದಕ್ಕೆ ತನಗೆ ಬೇಜಾರಿಲ್ಲ, ಅವರ ಕರ್ತವ್ಯವನ್ನು ಅವರು ಮಾಡಿದ್ದಾರೆ ಎಂದು ಅವರು ತಿಳಿಸಿದ್ದರು.