ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಚಲಿಸುತ್ತಿರುವ ಬೈಕ್​ ಮೇಲೆ ಯುವ ಜೋಡಿ ರೊಮ್ಯಾನ್ಸ್; ಪ್ರೇಮಿಗಳ ಹುಚ್ಚಾಟಕ್ಕೆ ಆಕ್ರೋಶ!

ಸಿನಿಮಾ ಸ್ಟೈಲ್​ನಲ್ಲಿ ಪ್ರೇಯಸಿಯನ್ನ ಬೈಕ್ ಮೇಲೆ ಉಲ್ಟಾ ಕೂರಿಸಿಕೊಂಡು ಯುವಕ ಚಾಲನೆ ಮಾಡಿರುವಂತಹ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆ ಮೂಲಕ ನಡು ರಸ್ತೆಯಲ್ಲೇ ಯುವಕ-ಯುವತಿ ಹುಚ್ಚಾಟ ಪ್ರದರ್ಶನ ಮಾಡಿದ್ದಾರೆ. ಬೈಕ್​ನ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಉಲ್ಟಾ ಕೂರಿಸಿಕೊಂಡು ಅಪಾಯಕಾರಿ ಚಾಲನೆ ಮಾಡಲಾಗಿದೆ. ಸದ್ಯ ವಿಡಿಯೋ ವೈರಲ್ ಆಗಿದ್ದು,ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.

ಘಟನೆಯ ದೃಶ್ಯ

ನೋಯ್ಡಾ: ಉತ್ತರ ಪ್ರದೇಶ ಪೊಲೀಸರು (Uttar Pradesh Police) ರಸ್ತೆ ಸುರಕ್ಷತೆಯ (Road Safety) ಬಗ್ಗೆ ವಿನೂತನವಾದ ಸಾರ್ವಜನಿಕ ಸಂದೇಶವೊಂದರ ಮೂಲಕ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದಾರೆ. “ನೋಯ್ಡಾದಲ್ಲಿ (Noida) ರೋಮಿಯೋ ಅ್ಯಂಡ್ ಜೂಲಿಯೆಟ್ ಬೈಕ್ ಸೀಕ್ವೆಲ್ ಪ್ರಯತ್ನ” ಎಂಬ ಶೀರ್ಷಿಕೆಯ ಎಕ್ಸ್ ಪೋಸ್ಟ್‌ನಲ್ಲಿ, ಹೆಲ್ಮೆಟ್ ಇಲ್ಲದೆ, ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಯುವ ಜೋಡಿಯ ವಿಡಿಯೋ ಹಂಚಿಕೊಂಡಿದ್ದಾರೆ

ನೋಯ್ಡಾದ ಈ ವಿಡಿಯೊದಲ್ಲಿ, ಜೋಡಿಯು ರೊಮ್ಯಾಂಟಿಕ್ ಚಿತ್ರದ ದೃಶ್ಯವನ್ನು ಅನುಕರಿಸುತ್ತಾ, ಯುವತಿ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತು ಯುವಕನ್ನು ತಬ್ಬಿಕೊಂಡಿದ್ದು ರಸ್ತೆಯಲ್ಲಿ ಬೈಕ್ ಚಲಾಯಿಸುತ್ತಿರುವುದು ಕಾಣಬಹುದು. ಆದರೆ, ಟ್ರಾಫಿಕ್ ಪೊಲೀಸರು ಈ ಜೋಡಿಗೆ 53,500 ರೂ. ಭಾರೀ ದಂಡ ವಿಧಿಸಿದ್ದಾರೆ. ಎಕ್ಸ್‌ನಲ್ಲಿ ವಿಡಿಯೊ ಹಂಚಿಕೊಂಡ ಉತ್ತರ ಪ್ರದೇಶ ಪೊಲೀಸರು, "ನೋಯ್ಡಾದಲ್ಲಿ ರೋಮಿಯೋ ಅ್ಯಂಡ್ ಜೂಲಿಯೆಟ್ ಬೈಕ್ ಸೀಕ್ವೆಲ್ ಪ್ರಯತ್ನ. ಈ ಬಾರಿ ಕ್ಲೈಮ್ಯಾಕ್ಸ್ ಲವ್ ಸಾಂಗ್ ಅಲ್ಲ, ಭಾರೀ ದಂಡ! ಸುರಕ್ಷಿತವಾಗಿ ಚಲಾಯಿಸಿ, ನಿಯಮಗಳನ್ನು ಪಾಲಿಸಿ, ನಿಮ್ಮ ಪ್ರೇಮಕಥೆ ದೀರ್ಘಕಾಲ ಬಾಳಲಿ" ಎಂದು ಬರೆದಿದ್ದಾರೆ.



ಈ ಸುದ್ದಿಯನ್ನು ಓದಿ: viral video: ಕ್ರಿಕೆಟ್ ಮೈದಾನಕ್ಕೆ ನುಗ್ಗಿ ಆಟಗಾರರ ಮೇಲೆ ದಾಳಿ ಮಾಡಿದ ಕೋತಿ

ಈ ಪೋಸ್ಟ್ ತಮಾಷೆಯ ಶೈಲಿಯ ಜೊತೆಗೆ ಗಂಭೀರ ಸಂದೇಶವನ್ನು ಮುಟ್ಟಿಸಿದ್ದಕ್ಕಾಗಿ ನೆಟಿಜನ್‌ಗಳಲ್ಲಿ ಸಂಚಲನ ಮೂಡಿಸಿದೆ. ಬಳಕೆದಾರರೊಬ್ಬರು, “ಈಗ ಪ್ರಶ್ನೆ ಏನೆಂದರೆ ಯಾರು ದಂಡ ತುಂಬುತ್ತಾರೆ! ರೋಮಿಯೋನಾ, ಜೂಲಿಯೆಟ್‌ನಾ, ಅಥವಾ ಇವರ ಪೋಷಕರಾ? ಇವರಿಗೆ ಎರಡು ಸಮಸ್ಯೆಇದೆ. ಒಂದು ದಂಡ ತುಂಬುವುದು, ಇನ್ನೊಂದು ಪೋಷಕರಿಗೆ ತಿಳಿದರೆ ಸಂಬಂಧ ಬಯಲಾಗುತ್ತದೆ. ಆದ್ದರಿಂದ ಎಚ್ಚರಿಕೆಯಿಂದಿರಿ!” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, “ಉತ್ತರ ಪ್ರದೇಶ ಪೊಲೀಸರ ಸಂದೇಶ ಜನರ ಒಳಿತಿಗಾಗಿದೆ. ಎಲ್ಲರೂ ನಿಯಮ ಪಾಲಿಸಬೇಕು. ಪೊಲೀಸರು ನಮಗೆ ಸಹಾಯಕ್ಕಾಗಿ ಇಂತಹ ಸಂದೇಶಗಳನ್ನು ನೀಡುತ್ತಾರೆ. ಜೈ ಹಿಂದ್,” ಎಂದು ಬರೆದಿದ್ದಾರೆ.

ಈ ಪೋಸ್ಟ್ ಯುವ ಜನರನ್ನು ಗುರಿಯಾಗಿಟ್ಟುಕೊಂಡು ಉತ್ತರ ಪ್ರದೇಶ ಪೊಲೀಸರು ನಡೆಯುತ್ತಿರುವ ರಸ್ತೆ ಸುರಕ್ಷತಾ ಅಭಿಯಾನದ ಭಾಗವಾಗಿದೆ. ಹೆಲ್ಮೆಟ್ ಬಳಕೆಯನ್ನು ಉತ್ತೇಜಿಸುವುದು, ಅಜಾಗರೂಕ ಚಾಲನೆಯನ್ನು ತಡೆಗಟ್ಟುವುದು ಮತ್ತು ಟ್ರಾಫಿಕ್ ನಿಯಮ ಉಲ್ಲಂಘನೆಯ ಪರಿಣಾಮಗಳನ್ನು ತೋರಿಸುವುದು ಇದರ ಉದ್ದೇಶವಾಗಿದೆ. ಸಾಮಾಜಿಕ ಜಾಲತಾಣದ ಮೂಲಕ ಈ ರೀತಿಯ ಸಂದೇಶಗಳು ಯುವ ಜನರಿಗೆ ತಲುಪಿ, ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ನಿರೀಕ್ಷೆಯಿದೆ.