ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

viral video: ಕ್ರಿಕೆಟ್ ಮೈದಾನಕ್ಕೆ ನುಗ್ಗಿ ಆಟಗಾರರ ಮೇಲೆ ದಾಳಿ ಮಾಡಿದ ಕೋತಿ

ಯುವಕರು ಮಾತ್ರವಲ್ಲದೆ ಕೆಲವು ಮಕ್ಕಳು ಕೂಡ ಮೈದಾನದಲ್ಲಿ ಕ್ರಿಕೆಟ್‌ ಆಡುತ್ತಿದ್ದರು. 16 ಸೆಕೆಂಡುಗಳ ಈ ವೈರಲ್ ಕ್ಲಿಪ್‌ನಲ್ಲಿ ಮಂಗವು ಮಕ್ಕಳನ್ನು ಬೆನ್ನಟ್ಟಿ ಮೈದಾನದಿಂದ ಹೊರಹೋಗುವಂತೆ ಒತ್ತಾಯಿಸುತ್ತಿರುವುದನ್ನು ಕಾಣಬಹುದು. ವಿಡಿಯೊ ಕಂಡ ಕೆಲವರು ನಕ್ಕರೆ ಇನ್ನು ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ.

ಕ್ರಿಕೆಟ್ ಮೈದಾನಕ್ಕೆ ನುಗ್ಗಿ ಆಟಗಾರರ ಮೇಲೆ ದಾಳಿ ಮಾಡಿದ ಕೋತಿ

Abhilash BC Abhilash BC Aug 25, 2025 3:46 PM

ನವದೆಹಲಿ: ಕ್ರಿಕೆಟ್‌, ಫುಟ್ಬಾಲ್‌ ಪಂದ್ಯದ ವೇಳೆ ನಾಯಿ, ಬೆಕ್ಕು ಮೈದಾನಕ್ಕೆ ನುಗ್ಗುವುದು ಸರ್ವೆ ಸಾಮಾನ್ಯ. ಇದರಿಂದ ಕೆಲ ಕಾಲ ಪಂದ್ಯ ಅಡಚಣೆಯಾದ ನಿದರ್ಶನ ಕೂಡ ನಮ್ಮ ಕಣ್ಣ ಮುಂದಿದೆ. ಆದರೆ ಅಚ್ಚರಿ ಎಂಬಂತೆ ತ್ತೀಚೆಗೆ ಕ್ರಿಕೆಟ್ ಮೈದಾನದಲ್ಲಿ ನಡೆದ ಘಟನೆಯೊಂದು ಭಾರೀ ವೈರಲ್(viral video) ಆಗಿದೆ. ಅಭ್ಯಾಸದ ವೇಳೆ ಕೋತಿಯೊಂದು ಅಡ್ಡಿಪಡಿಸಿ(Monkey interrupts cricket) ಯುವ ಕ್ರಿಕೆಟಿಗರಿಗೆ ಗಾಯ ಮಾಡಿದೆ.

ಈ ವಿಡಿಯೊವನ್ನು ಇಂಗ್ಲೆಂಡ್‌ನ ಅಂಪೈರ್‌ ರಿಚರ್ಡ್‌ ಕೆಟಲ್‌ಬರೋ ಅವರು ತಮ್ಮ ಟ್ವಿಟರ್‌ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಕ್ರಿಕೆಟ್‌ನಲ್ಲಿ ಇದು ಮೊದಲ ಬಾರಿ...!ಮೈದಾನಕ್ಕೆ ನುಗ್ಗಿದ ಕೋತಿಯೊಂದು ಯುವ ಕ್ರಿಕೆಟಿಗರ ಮೇಲೆ ದಾಳಿ ನಡೆಸಿತು ಎಂದು ಬರೆದುಕೊಂಡಿದ್ದಾರೆ.

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ, ಯುವಕರ ಗುಂಪೊಂದು ಕ್ರಿಕೆಟ್ ಅಭ್ಯಾಸ ಮಾಡುತ್ತಿತ್ತು. ಈ ವೇಳೆ ಕೋತಿಯೊಂದು ಇದ್ದಕ್ಕಿದ್ದಂತೆ ಮೈದಾನಕ್ಕೆ ನುಗ್ಗಿದೆ. ಭಯಭೀತರಾದ ಕೆಲ ಯುವಕರು ಮೈದಾನದಿಂದ ಓಡಲು ಆರಂಭಿಸಿದರೆ. ಇನ್ನು ಕೆಲವರು ಸ್ಟಂಪ್‌ ಮತ್ತು ಬ್ಯಾಟ್‌ ಮೂಲಕ ಕೋತಿಗೆ ಹೊಡೆಯಲು ಮುಂದಾದರು. ಇದರಿಂದ ಇನ್ನಷ್ಟು ಕೆರಳಿದ ಕೋತಿ ಏಕಾಏಕಿ ದಾಳಿ ನಡೆಸಲು ಮುಂದಾಯಿತು. ಪರಿಣಾಮ ಇಬ್ಬರು ಯುವ ಕ್ರಿಕೆಟಿಗರು ಗಾಯಗೊಂಡಿದ್ದಾರೆ.

ಯುವಕರು ಮಾತ್ರವಲ್ಲದೆ ಕೆಲವು ಮಕ್ಕಳು ಕೂಡ ಮೈದಾನದಲ್ಲಿ ಕ್ರಿಕೆಟ್‌ ಆಡುತ್ತಿದ್ದರು. 16 ಸೆಕೆಂಡುಗಳ ಈ ವೈರಲ್ ಕ್ಲಿಪ್‌ನಲ್ಲಿ ಮಂಗವು ಮಕ್ಕಳನ್ನು ಬೆನ್ನಟ್ಟಿ ಮೈದಾನದಿಂದ ಹೊರಹೋಗುವಂತೆ ಒತ್ತಾಯಿಸುತ್ತಿರುವುದನ್ನು ಕಾಣಬಹುದು. ವಿಡಿಯೊ ಕಂಡ ಕೆಲವರು ನಕ್ಕರೆ ಇನ್ನು ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಲಂಡನ್‌ನಲ್ಲಿ ನಡೆಯುತ್ತಿರುವ "ದಿ ಹಂಡ್ರೆಡ್"(The Hundred) ಕ್ರಿಕೆಟ್‌ ಲೀಗ್‌ನ ಉದ್ಘಾಟನ ಪಂದ್ಯದಲ್ಲಿ ನರಿಯೊಂದು ಐಕಾನಿಕ್‌ ಲಾರ್ಡ್ಸ್‌ ಕ್ರೀಡಾಂಗಣಕ್ಕೆ ನುಗ್ಗಿದ ಘಟನೆ ನಡೆದಿತ್ತು. ಇದರಿಂದ ಕೆಲ ಕ್ಷಣಗಳ ಕಾಲ ಪಂದ್ಯಕ್ಕೆ ಅಡಚಣೆಯುಂಟಾಗಿತ್ತು. ನೆರೆದಿದ್ದ ಪ್ರೇಕ್ಷಕರ ಬೊಬ್ಬೆಗೆ ಗಾಬರಿಗೊಂಡ ಈ ನರಿ ಮೈದಾನದಲ್ಲಿ ಹಲವು ಸುತ್ತು ಓಡಿತ್ತು. ಆದರೆ ಯಾರಿಗೂ ಹಾನಿಯುಂಟುಮಾಡಿರಲಿಲ್ಲ.