ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಬೆಂಗಳೂರು ಕೊಳಕು... ಅಸುರಕ್ಷಿತ...! ನೋಯ್ಡಾದ ಯುವಕ ಹೇಳಿದ್ದು ಹೀಗೆ

ಬಹಳ ನಿರೀಕ್ಷೆ ಇಟ್ಟುಕೊಂಡು ಕೆಲಸಕ್ಕಾಗಿ ಬೆಂಗಳೂರಿಗೆ ಬಂದೆ. ಆದರೆ ಇಲ್ಲಿ ಜೀವನ ನಡೆಸುವುದೇ ಕಷ್ಟ. ಅಲ್ಲದೇ ನೂರಾರು ಸಮಸ್ಯೆಗಳು, ಇಲ್ಲಿನ ಜನರು ಪ್ರದರ್ಶನ ಪ್ರಿಯರು. ನಗರ ಕೊಳಕಾಗಿದೆ, ಸಾರಿಗೆ ವ್ಯವಸ್ಥೆ ಸರಿಯಾಗಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ (Viral News) ದೂರಿದ್ದಾರೆ. ಇದು ಈಗ ತೀವ್ರ ಚರ್ಚೆಗೆ ನಾಂದಿ ಹಾಡಿದೆ.

ನೋಯ್ಡಾ: ಐಟಿ ನಗರಿ (IT city), ಸಿಲಿಕಾನ್ ಸಿಟಿ (Silicon City) ಬೆಂಗಳೂರಿನ (Bengaluru) ಬಗ್ಗೆ ನೋಯ್ಡಾದ (Noida) ಯುವಕನೊಬ್ಬ ಸಾಮಾಜಿಕ ಮಾಧ್ಯಮದಲ್ಲಿ (Social Media) ಬೇಸರವನ್ನು ವ್ಯಕ್ತಪಡಿಸಿದ್ದಾನೆ. ಇಲ್ಲಿ ಜೀವನ ನಡೆಸುವುದು ತುಂಬಾ ದುಬಾರಿಯಾಗಿದೆ. ಸೇವೆಗಳು ತೀರಾ ಕಳಪೆಯಾಗಿದೆ. ಅಸಭ್ಯ ಸಂಸ್ಕೃತಿ, ಸುರಕ್ಷತೆ ಇಲ್ಲ. ಹೀಗೆ ಹಲವಾರು ಸಮಸ್ಯೆಗಳ ಕುರಿತು ಇಲ್ಲಿ ವಾಸಿಸುತ್ತಿದ್ದಾಗ ಆದ ಅನುಭವಗಳನ್ನು ಸೇರಿಸಿ 26 ವರ್ಷದ ನೋಯ್ಡಾದ ಯುವಕ ರೆಡ್ಡಿಟ್‌ನಲ್ಲಿ ಬರೆದಿದ್ದಾನೆ. ಇದು ಅನೇಕರ ಗಮನ ಸೆಳೆದಿದ್ದು, ಬೆಂಗಳೂರಿನ ಕುರಿತಾಗಿ ವಿವಿಧ ರೀತಿಯ ಚರ್ಚೆಗೆ ನಾಂದಿ ಹಾಡಿದೆ.

ಬೆಂಗಳೂರಿನಲ್ಲಿ ವಾಸಿಸುವಾಗ ತನಗಾದ ನಿರಾಶಾದಾಯಕ ಅನುಭವವನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿರುವ ನೋಯ್ಡಾದ ಯುವಕ ಇಲ್ಲಿನ ಅನೇಕ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದಾನೆ. ಇದು ಈಗ ರೆಡ್ಡಿಟ್‌ನಲ್ಲಿ ಹೆಚ್ಚಿನ ಜನರ ಗಮನ ಸೆಳೆದಿದೆ.

ರೆಡ್ಡಿಟ್ ನಲ್ಲಿ ಯುವಕ ಹೀಗೆ ಬರೆದಿದ್ದಾನೆ..

ನಾನು ನೋಯ್ಡಾದಲ್ಲಿ 26 ವರ್ಷಗಳಿಂದ ವಾಸಿಸುತ್ತಿದ್ದೇನೆ. ಕೆಲಸಕ್ಕಾಗಿ ಬೆಂಗಳೂರಿಗೆ ಸ್ಥಳಾಂತರಗೊಂಡ ಬಳಿಕ ಪ್ರತಿದಿನ ಇಲ್ಲಿಂದ ಮರಳಿ ಹೋಗಬೇಕು ಎಂದು ಬಯಸಿದೆ. ಇಲ್ಲಿ ಕಡಿಮೆ ಸಂಬಳದ ಕಾರಣದಿಂದಾಗಿ ಬದುಕುವುದು ಸಾಧ್ಯವಿಲ್ಲ ಎಂದೆನಿಸಿತು ಎಂದು ಅವರು ಹೇಳಿದ್ದಾರೆ. ಸಾಕಷ್ಟು ಭರವಸೆಗಳೊಂದಿಗೆ ಇಲ್ಲಿಗೆ ಬಂದಿದ್ದೆ. ನಗರವು ಸಾಕಷ್ಟು ಹೆಸರು ಮಾಡಿರುವುದರಿಂದ ಉತ್ತಮ ಅವಕಾಶಗಳನ್ನು ನಿರೀಕ್ಷಿಸಿದ್ದೆ. ಆದರೆ ಇಲ್ಲಿನ ಜನರು ಕೇವಲ ರೀಲ್ ಲೈಫ್ ಬಗ್ಗೆ ಕಾಳಜಿ ವಹಿಸುತ್ತಾರೆ, ನಿಜ ಜೀವನದ ಬಗ್ಗೆ ಅಲ್ಲ. ಎಲ್ಲರೂ ತಮ್ಮಲ್ಲಿ ಇರುವುದನ್ನು ಪ್ರದರ್ಶಿಸಲು ಬಯಸುತ್ತಾರೆ.

ಬೆಂಗಳೂರಿನಲ್ಲಿ ಸುಮಾರು 2,000 ರೂ. ಖರ್ಚು ಮಾಡಿದರೂ ರೆಸ್ಟೋರೆಂಟ್‌ನಲ್ಲಿ ತೃಪ್ತಿಕರ ಊಟ ಸಿಗುವ ಖಾತರಿ ಇಲ್ಲ. ಅಲ್ಲದೇ ರೆಸ್ಟೋರೆಂಟ್ ಒಳಗೆ ಹೋಗುವ ಮೊದಲೇ ಬುಕ್ಕಿಂಗ್ ಮಾಡಬೇಕು. ವಾರಾಂತ್ಯದಲ್ಲಿ ಇಲ್ಲಿ ನಡೆಯಲು ಸಾಧ್ಯವಿಲ್ಲ. ಆಹಾರವು ಸಾಧಾರಣವಾಗಿರುತ್ತದೆ. ಉತ್ತಮ ಕೆಫೆಗಳಿವೆ ಆದರೆ ಅವುಗಳಿಗಾಗಿ ಅರ್ಧ ಗಂಟೆ ಸರತಿ ಸಾಲಿನಲ್ಲಿ ನಿಲ್ಲಬೇಕು.

noida

ಇನ್ನು ಇಲ್ಲಿ ಆಟೋ ಸಿಕ್ಕರೆ ಅದುವೇ ಒಂದು ಪವಾಡ. ಕೇವಲ 2 ಕಿಲೋಮೀಟರ್‌ಗಳಿಗೆ 300 ರೂ. ಗಳನ್ನು ಕೇಳುತ್ತಾರೆ. ಇಲ್ಲಿ ಕ್ಯಾಬ್ ಆಟೋಗಿಂತ ಅಗ್ಗವಾಗಿದೆ ಎಂದಿರುವ ಅವರು, ನಗರದ ಸ್ವಚ್ಛತೆಯ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಭಾರತದ ಸುರಕ್ಷಿತ ಮಹಾನಗರಗಳಲ್ಲಿ ಒಂದಾಗಿದೆ ಎಂಬುದು ಸುಳ್ಳು. ಬೆಂಗಳೂರು ಯಾವುದೇ ರೀತಿಯಲ್ಲಿ ಸುರಕ್ಷಿತವಾಗಿಲ್ಲ.ಇಲ್ಲಿ ನನಗೆ ಅಸುರಕ್ಷಿತ ಭಾವನೆ ಮೂಡಿಸುವ ಹಲವಾರು ಅಹಿತಕರ ಘಟನೆಗಳು ನಡೆದಿದೆ. ರಸ್ತೆಗಳು ತುಂಬಾ ಕೆಟ್ಟದಾಗಿದೆ. ಟ್ರಾಫಿಕ್ ಅದಕ್ಕಿಂತ ಕೆಟ್ಟದು ಎಂದು ಅವರು ಹೇಳಿದ್ದಾರೆ. ಬೆಂಗಳೂರನ್ನು ಇಷ್ಟಪಡಲು ಕೇವಲ ಒಂದು ಕಾರಣ ಎಂದರೆ ಇಲ್ಲಿನ ಹವಾಮಾನ. ನಾನು ಅದನ್ನು ಇಷ್ಟಪಟ್ಟೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: NISAR: ನಾಸಾ-ಇಸ್ರೋದ ಬಹುನಿರೀಕ್ಷಿತ ಉಪಗ್ರಹ ನಿಸಾರ್ ಉಡಾವಣೆಗೆ ಸಿದ್ಧ; ಏನಿದರ ವಿಶೇಷತೆ?

ಇವರ ಸುದೀರ್ಘವಾದ ಪೋಸ್ಟ್ ಗೆ ಅನೇಕರು ತಮ್ಮತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಕೆಲವರು ಇಲ್ಲಿನ ಮೂಲಸೌಕರ್ಯ, ಜೀವನ ವೆಚ್ಚ ಮತ್ತು ಸಾರಿಗೆ ಸಮಸ್ಯೆಗಳ ಬಗ್ಗೆ ಹಂಚಿಕೊಂಡರೆ ಇನ್ನು ಕೆಲವರು ಇಲ್ಲಿ ಬೆಳೆಯುತ್ತಿರುವ ಉದ್ಯೋಗ ಮಾರುಕಟ್ಟೆ ಬಗ್ಗೆ ಮಾಹಿತಿ ಹಂಚಿಕೊಂಡರು. ಅನೇಕರು ಯಾವುದೇ ನಗರವು ಪರಿಪೂರ್ಣವಲ್ಲ. ವೈಯಕ್ತಿಕ ಅನುಭವವು ಅವರವರ ದೃಷ್ಟಿಕೋನವನ್ನು ಅವಲಂಬಿಸಿರುತ್ತದೆ ಎನ್ನುವ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author