NISAR: ನಾಸಾ-ಇಸ್ರೋದ ಬಹುನಿರೀಕ್ಷಿತ ಉಪಗ್ರಹ ನಿಸಾರ್ ಉಡಾವಣೆಗೆ ಸಿದ್ಧ; ಏನಿದರ ವಿಶೇಷತೆ?
ನಾಸಾ ಮತ್ತು ಇಸ್ರೋ ವಿಜ್ಞಾನಿಗಳು ಸುಮಾರು ಒಂದು ದಶಕದಿಂದ ನಿರ್ಮಿಸುತ್ತಿರುವ 112.5 ಕೋಟಿ ರೂ. ವೆಚ್ಚದ ಬಹುನಿರೀಕ್ಷಿತ ನಿಸಾರ್ ಉಪಗ್ರಹದ ಉಡಾವಣೆಗೆ ಸಜ್ಜಾಗಿದೆ. ಅತ್ಯಾಧುನಿಕ ರಾಡಾರ್ ಉಪಗ್ರಹವನ್ನು ಹೊತ್ತುಕೊಂಡು ಭಾರತದ ಅತ್ಯಂತ ಭಾರವಾದ ರಾಕೆಟ್ ಜಿಎಸ್‌ಎಲ್‌ವಿ (GSLV) ಜುಲೈ 30ರಂದು ಸಂಜೆ 5.40ಕ್ಕೆ ಶ್ರೀಹರಿಕೋಟಾದಿಂದ ಬಾಹ್ಯಾಕಾಶಕ್ಕೆ ಜಿಗಿಯಲಿದೆ.


ನವದೆಹಲಿ: ಇಂಡೋ- ಯುಎಸ್‌ನ (Indo-US) ಬಹುನಿರೀಕ್ಷಿತ ನಿಸಾರ್ ಉಪಗ್ರಹವು (NISAR Satellite) ಉಡಾವಣೆಗೆ ಇದೀಗ ಭಾರತ (India) ಸಜ್ಜಾಗಿದೆ. ಈ ಉಪಗ್ರಹವು ಹಿಂದೆಂದಿಗಿಂತಲೂ ಉತ್ತಮವಾಗಿ ಭೂಮಿಯ ಮೇಲ್ವಿಚಾರಣೆ ಮಾಡಲಿದೆ ಎಂದು ನಾಸಾ ಹೇಳಿದೆ. ಸುಮಾರು 112.5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿಪಡಿಸಲಾದ ನಿಸಾರ್ ಉಪಗ್ರಹದ ಉಡಾವಣೆಯು ಜುಲೈ 30ರಂದು ಸಂಜೆ 5.40ಕ್ಕೆ ಶ್ರೀಹರಿಕೋಟಾದಿಂದ (Sriharikota) ನಡೆಯಲಿದೆ. ಭಾರತದ ಅತ್ಯಂತ ಭಾರವಾದ ರಾಕೆಟ್ ಜಿಎಸ್‌ಎಲ್‌ವಿ (GSLV) ಅತ್ಯಾಧುನಿಕ ರಾಡಾರ್ ಉಪಗ್ರಹವನ್ನು ಹೊತ್ತುಕೊಂಡು ಬಾಹ್ಯಾಕಾಶಕ್ಕೆ ಜಿಗಿಯಲಿದೆ.
ನಾಸಾ ಮತ್ತು ಇಸ್ರೋ ವಿಜ್ಞಾನಿಗಳು ಸುಮಾರು ಒಂದು ದಶಕದಿಂದ ನಿಸಾರ್ ಉಪಗ್ರಹದ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. 2,393 ಕೆಜಿ ತೂಕದ ಈ ಉಪಗ್ರಹದ ಕಾರ್ಯವನ್ನು ಕೋವಿಡ್ ಸಾಂಕ್ರಾಮಿಕದ ಸಮಯದಲ್ಲೂ ಮುಂದುವರಿಸಲಾಗಿತ್ತು. ಡ್ಯುಯಲ್ ಫ್ರೀಕ್ವೆನ್ಸಿ ರಾಡಾರ್ ಮತ್ತು ಬಾಹ್ಯಾಕಾಶದಲ್ಲಿ ನಿಯೋಜಿಸಲಾದ ಅತಿದೊಡ್ಡ ಆಂಟೆನಾವನ್ನು ಹೊಂದಿರುವ ನಿಸಾರ್ ಇದುವರೆಗೆ ನಿರ್ಮಿಸಲಾದ ಅತ್ಯಂತ ದುಬಾರಿ ಭೂ ವೀಕ್ಷಣಾ ಉಪಗ್ರಹವಾಗಿದೆ.
ಉಡಾವಣೆಗೆ ಸಿದ್ದ
ಉಡಾವಣೆಗೂ ಮುನ್ನ ಈ ಕುರಿತು ಮಾಹಿತಿ ನೀಡಿದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ (JPL) ನಿಸಾರ್ ಯೋಜನಾ ವ್ಯವಸ್ಥಾಪಕ ಫಿಲ್ ಬರೇಲಾ, ಎಲ್ಲವೂ ಸರಿಯಾಗಿದೆ. ರಾಕೆಟ್ ಸಿದ್ಧವಾಗಿದೆ. ಹವಾಮಾನ ಕೂಡ ಚೆನ್ನಾಗಿದೆ. ನಾವು ಹೋಗಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ಸದ್ಯ ಭಾರತದಲ್ಲಿರುವ ನಾಸಾ ಮತ್ತು ಜೆಪಿಎಲ್ ನ ವಿಜ್ಞಾನಿಗಳ ತಂಡವು ನಿಸಾರ್ ಉಡಾವಣೆ ಸಂಬಂಧಿತ ಕಾರ್ಯದಲ್ಲಿ ಇಸ್ರೋ ವಿಜ್ಞಾನಿಗಳೊಂದಿಗೆ ಸೇರಿ ಕೆಲಸ ಮಾಡುತ್ತಿದೆ.
LIVE: NISAR, a first-of-its-kind collaboration between NASA and ISRO (Indian Space Research Organisation), is scheduled to launch on Wednesday, July 30.
— NASA (@NASA) July 28, 2025
Get the latest updates on the Earth-observing satellite—and share your questions with #AskNISAR: https://t.co/QfV7rlkqYf pic.twitter.com/wOJ8kFl5tI
ಏನಿದರ ವಿಶೇಷ?
ನಾಸಾ- ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ (ನಿಸಾರ್) ಇಂಡೋ-ಯುಎಸ್ ಉಪಗ್ರಹ ಮಿಷನ್‌ಗಳಲ್ಲಿ ಒಂದಾಗಿದೆ. ಇದು ಭೂಮಿಯ ಮೂರು ಆಯಾಮದ ದೃಶ್ಯವನ್ನು ಒದಗಿಸುತ್ತದೆ. ಪ್ರತಿ 12 ದಿನಗಳಿಗೊಮ್ಮೆ ಎರಡು ಬಾರಿ ಇದು ಭೂಮಿಯ ಬಹುತೇಕ ಎಲ್ಲ ಭಾಗದ ಭೂಮಿ ಮತ್ತು ಮಂಜುಗಡ್ಡೆಯ ಮೇಲ್ಮೈಗಳನ್ನು ಸ್ಕ್ಯಾನ್ ಮಾಡುತ್ತದೆ. ಹೆಚ್ಚಿನ ರೆಸಲ್ಯೂಶನ್ ಚಿತ್ರಣದಲ್ಲಿ ಒಂದು ಸೆಂಟಿಮೀಟರ್‌ನಷ್ಟು ಸಣ್ಣ ಬದಲಾವಣೆಗಳನ್ನು ಗಮನಿಸಬಹುದು.
ನಾಸಾ ಈಗಾಗಲೇ ಭೂಮಿಯನ್ನು ವೀಕ್ಷಿಸುವ ಕಕ್ಷೆಯಲ್ಲಿ ಎರಡು ಡಜನ್‌ಗಿಂತಲೂ ಹೆಚ್ಚು ಉಪಗ್ರಹವನ್ನು ಹೊಂದಿದೆ. ಆದರೆ ಇದರಲ್ಲಿ ಇನ್ನು ಸೇರಲಿರುವ ನಿಸಾರ್ ಒಂದು ಅದ್ಭುತ ಕಾರ್ಯಾಚರಣೆಯಾಗಿದೆ. ಇದು ಯಾವುದೇ ಹವಾಮಾನ ಪರಿಸ್ಥಿತಿಯಲ್ಲೂ ಭೂಮಿಯ ಮೇಲಿನ ಒಂದು ಸಣ್ಣ ಬದಲಾವಣೆಯನ್ನೂ ಪತ್ತೆ ಹಚ್ಚುವ ಸಾಮರ್ಥ್ಯವನ್ನು ಹೊಂದಿದೆ. ಈ ಉಪಗ್ರಹದ ಮೂಲಕ ಭಾರತ ಮತ್ತು ಯುಎಸ್ ಒಟ್ಟಿಗೆ ಭೂಮಿಯನ್ನು ಅಧ್ಯಯನ ಮಾಡಲಿದೆ ಎಂದು ನಾಸಾದ ಭೂ ವಿಜ್ಞಾನ ನಿರ್ದೇಶಕಿ ಕರೆನ್ ಸೇಂಟ್ ಜರ್ಮೈನ್ ತಿಳಿಸಿದ್ದಾರೆ.
1.5 ಬಿಲಿಯನ್ ಡಾಲರ್ ಮೌಲ್ಯದ ನಿಸಾರ್ ಉಪಗ್ರಹ ಯೋಜನೆಗೆ ನಾಸಾ ಸುಮಾರು 1.2 ಬಿಲಿಯನ್ ಡಾಲರ್ ಖರ್ಚು ಮಾಡಿದೆ. ಇದು ಇದುವರೆಗೆ ನಿರ್ಮಿಸಲಾದ ಅತ್ಯಂತ ದುಬಾರಿ ಭೂ-ಚಿತ್ರಣ ಉಪಗ್ರಹಗಳಲ್ಲಿ ಒಂದಾಗಿದೆ. ಇದಕ್ಕಾಗಿ ನಾಸಾ ಎಲ್-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರಾಡಾರ್ ಜೊತೆಗೆ ದೂರಸಂಪರ್ಕ ಉಪವ್ಯವಸ್ಥೆ, ಜಿಪಿಎಸ್ ರಿಸೀವರ್ ಮತ್ತು ಅನ್ಫರ್ಲಬಲ್ ಆಂಟೆನಾವನ್ನು ಒದಗಿಸಿದೆ. ಇನ್ನು ಇಸ್ರೋ ಎಸ್-ಬ್ಯಾಂಡ್ ಎಸ್‌ಎಆರ್ ಪೇಲೋಡ್, ಎರಡೂ ಪೇಲೋಡ್‌ಗಳನ್ನು ಅಳವಡಿಸಲು ಬಾಹ್ಯಾಕಾಶ ನೌಕೆ ಬಸ್, ಜಿಎಸ್‌ಎಲ್‌ವಿ ರಾಕೆಟ್ ಮತ್ತು ಎಲ್ಲ ಸಂಬಂಧಿತ ಉಡಾವಣಾ ಸೇವೆಗಳನ್ನು ನೀಡಿದೆ.
ಇದನ್ನೂ ಓದಿ: Tiptur News: ತಿಪಟೂರಿನಲ್ಲಿ ಯುವಕ ಅನುಮಾನಾಸ್ಪದ ಸಾವು; ನ್ಯಾಯ ಕೊಡಿಸಲು ಕುಟುಂಬಸ್ಥರ ಆಗ್ರಹ
ಬಾಹ್ಯಾಕಾಶ ನೌಕೆಯು ಭೂಮಿಯ ಮೇಲ್ಮೈಯಿಂದ ಮೈಕ್ರೋವೇವ್ ಸಿಗ್ನಲ್‌ಗಳನ್ನು ಸಂಗ್ರಹಿಸುತ್ತದೆ. ಇದನ್ನು 12 ಮೀಟರ್ ಅಳತೆಯ ರಾಡಾರ್ ಆಂಟೆನಾ ತನ್ನ ಪ್ರತಿಫಲಕದ ಮೂಲಕ ಸಿಗ್ನಲ್‌ಗಳನ್ನು ಸ್ವೀಕರಿಸುತ್ತದೆ. ಇದರಿಂದ ನಿಸಾರ್‌ನ ಪ್ರಧಾನ ಕಾರ್ಯಾಚರಣೆಯ ಅವಧಿಯಲ್ಲಿ ದಿನಕ್ಕೆ ಸುಮಾರು 80 ಟೆರಾಬೈಟ್‌ಗಳ ಡೇಟಾ ಉತ್ಪನ್ನವಾಗುವುದು. ಇದರ ಮಾಹಿತಿಯನ್ನು ಮೋಡದ ಮೂಲಕ ಸಂಸ್ಕರಿಸಲಾಗುತ್ತದೆ, ಸಂಗ್ರಹಿಸಲಾಗುತ್ತದೆ ಮತ್ತು ವಿತರಿಸಲಾಗುತ್ತದೆ. ಬೇರೆ ಯಾವುದೇ ಭೂ ಮೇಲ್ವಿಚಾರಣಾ ಉಪಗ್ರಹವು ಇಷ್ಟೊಂದು ವಿವರಗಳನ್ನು ನೀಡುವುದಿಲ್ಲ ಎಂದು ವಿಜ್ಞಾನಿ ಜೆರಾಲ್ಡ್ ಬಾವ್ಡೆನ್ ತಿಳಿಸಿದ್ದಾರೆ.