ಬ್ರಿಟನ್: ಪ್ರೀತಿ ನಂಬಿಕೆಯ ಮೇಲೆ ಕಟ್ಟಲ್ಪಟ್ಟಿದೆ. ಗಂಡ (husband) ಮತ್ತು ಹೆಂಡತಿ (wife) ಇಬ್ಬರೂ ಪರಸ್ಪರ ಪ್ರಾಮಾಣಿಕವಾಗಿದ್ದಾಗ, ಸಂಬಂಧವು ನಿಜವಾಗಿಯೂ ಉಳಿಯುತ್ತದೆ. ಆದರೆ, ದಾಂಪತ್ಯದಲ್ಲಿ ಒಂದು ಸಣ್ಣ ದ್ರೋಹವಾದರೂ ಕೂಡ ಎಲ್ಲವನ್ನೂ ಛಿದ್ರಗೊಳಿಸುತ್ತದೆ. ಇದರಿಂದ ಸಂಬಂಧದಲ್ಲಿ ನಂಬಿಕೆ ಕಳೆದುಹೋಗುತ್ತದೆ, ಸಂಬಂಧಗಳು ಹಠಾತ್ತನೆ ಕೊನೆಗೊಳ್ಳುತ್ತವೆ (Viral News).
ತನ್ನ ಮದುವೆಗೆ ಸ್ವಲ್ಪ ಮೊದಲು, ತನ್ನ ನಿಶ್ಚಿತಾರ್ಥ ಮಾಡಿಕೊಂಡ ವ್ಯಕ್ತಿ ಕಳೆದ ಆರು ತಿಂಗಳಿನಿಂದ ಬೇರೊಬ್ಬ ಮಹಿಳೆಯ ಜೊತೆ ಸಂಪರ್ಕದಲ್ಲಿರುವುದು ತಿಳಿದುಬಂದಿದೆ. ಆತ ಆಕೆಯೊಂದಿಗೆ ಪ್ರೇಮ ಸಂಬಂಧದಲ್ಲಿ ಇದ್ದುದು ಮಾತ್ರವಲ್ಲದೆ, ಆಕೆಯೊಂದಿಗೆ ರಾತ್ರಿಗಳನ್ನು ಕಳೆದಿದ್ದ ಎಂದು ತಿಳಿದುಬಂದ ಕೂಡಲೇ ಆಕೆಯ ಹೃದಯ ಛಿದ್ರವಾಯಿತು. ಈ ವಿಷಯ ತಿಳಿದ ತಕ್ಷಣ ಅವಳು ಮದುವೆಯನ್ನು ರದ್ದುಗೊಳಿಸಿದಳು. ಆದರೆ, ಆಕೆಯ ಸೇಡು ಎಷ್ಟು ತೀವ್ರವಾಗಿತ್ತೆಂದರೆ ಅದು ಊಹಿಸಲಸಾಧ್ಯವಾಗಿತ್ತು.
ಈ ಯುವತಿಯು ತನ್ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ವ್ಯಕ್ತಿಯ ವಿರುದ್ಧ ಯಾವ ರೀತಿ ಸೇಡು ತೀರಿಸಿಕೊಂಡಳು ಎಂಬ ಬಗ್ಗೆ ತಿಳಿದರೆ ನಿಮಗೆ ಅಚ್ಚರಿಯಾಗಬಹುದು. ಅವಳ ಸೇಡು ನಿರಂತರವಾಗಿತ್ತು. ಹಾವಿನ ದ್ವೇಷ 12 ವರುಷ ಎಂಬ ಮಾತಿನಂತೆ ಈಕೆ ಆತನ ವಿರುದ್ಧ 8 ವರ್ಷ ತೊಡೆತಟ್ಟಿ ನಿಂತಿದ್ದಳಂತೆ. ಈ ಬಗ್ಗೆ ಯುವತಿಯು ಇತ್ತೀಚೆಗೆ ಇಟ್ಸ್ ಎ ಗರ್ಲ್ ಥಿಂಗ್ ಪಾಡ್‌ಕ್ಯಾಸ್ಟ್‌ನಲ್ಲಿ ತನ್ನ ಕಥೆಯನ್ನು ಹಂಚಿಕೊಂಡಳು.
ಪಾಡ್‍ಕಾಸ್ಟ್‌ನಲ್ಲಿ ಅವರ ಗುರುತನ್ನು ಅನಾಮಧೇಯವಾಗಿಡಲಾಗಿತ್ತು. ಶಾಂತವಾಗಿ ಮಾತನಾಡುತ್ತಾ, ತನ್ನ ಮಾಜಿ ಫಿಯಾನ್ಸಿಯೊಂದಿಗೆ ಹೇಗೆ ಸೇಡು ತೀರಿಸಿಕೊಳ್ಳಲು ಯೋಜಿಸಿದರು ಎಂಬುದನ್ನು ವಿವರಿಸಿದಳು. ಮದುವೆ ಮುರಿದುಬಿದ್ದ ನಂತರ ಅವಳು, ನಿರಂತರ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದಳು. ಇದಕ್ಕೆ ಆತನ ಸಹೋದರಿಯೂ ಯುವತಿಗೆ ಸಾಥ್ ಕೊಟ್ಟಿದ್ದಳಂತೆ. ಕಿರಿಕಿರಿಯುಂಟುಮಾಡುವ ಜನರು ಆಕೆಯ ಮೊಬೈಲ್ ಸಂಖ್ಯೆಯನ್ನು ಕೇಳಿದಾಗಲೆಲ್ಲಾ ಅವಳು ಅವರಿಗೆ ತನ್ನ ಮಾಜಿ ಫಿಯಾನ್ಸಿಯ ಮೊಬೈಲ್ ನಂಬರ್ ನೀಡುತ್ತಿದ್ದಳು. ಪರಿಣಾಮವಾಗಿ, ಅವನಿಗೆ ನಿರಂತರವಾಗಿ ಅನಗತ್ಯ ಕರೆಗಳು ಮತ್ತು ಸಂದೇಶಗಳು ಬರುತ್ತಿದ್ದವು.
ಎಂಟು ವರ್ಷಗಳಲ್ಲಿ, ಅವನು ತನ್ನ ಸಂಖ್ಯೆಯನ್ನು ಎರಡು ಬಾರಿ ಬದಲಾಯಿಸಬೇಕಾಯಿತು. ಪ್ರತಿ ಬಾರಿ ಅವನು ಹಾಗೆ ಮಾಡಿದಾಗಲೂ, ಅವನ ಸಹೋದರಿ ರಹಸ್ಯವಾಗಿ ಹೊಸ ಸಂಖ್ಯೆಯನ್ನು ಯುವತಿಗೆ ಕಳುಹಿಸುತ್ತಿದ್ದಳು. ಹೀಗೆ ಅವನಿಗೆ ನಿತ್ಯ ಕಿರಿಕಿರಿಯುಂಟುಮಾಡುವ ಕರೆಗಳು ಬರುತ್ತಿದ್ದವು. ಆದರೆ, ಆತನಿಗೆ ಈಕೆಯೇ ಆತನ ಮಾಡುತ್ತಿದ್ದಾಳೆ ಎಂಬುದು ತಿಳಿದಿಲ್ಲ. ಸದ್ಯ ಯುವತಿಯ ಈ ಕಥೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಮತ್ತೊಂದು ಸೇಡಿನ ಕಥೆ
ಇನ್ನೊಂದು ಪ್ರಕರಣದಲ್ಲಿ, ಒಬ್ಬ ಮಹಿಳೆ ರಕ್ತದ ಕ್ಯಾನ್ಸರ್ ವಿರುದ್ಧ ಹೋರಾಡಿ ಚಿಕಿತ್ಸೆ ಪಡೆಯುತ್ತಿರುವಾಗ ತನ್ನ ಪತಿಗೆ ಅನೈತಿಕ ಸಂಬಂಧವಿದೆ ಎಂಬುದನ್ನು ಕಂಡುಹಿಡಿದಳು. ಅವಳು ಚೇತರಿಸಿಕೊಂಡ ನಂತರ, ಅವನಿಗೆ ವಿಚ್ಛೇದನ ನೀಡಿದ್ದು ಮಾತ್ರವಲ್ಲದೆ, ಅವನಿಗೆ ತೀವ್ರ ಅನಾನುಕೂಲವನ್ನುಂಟು ಮಾಡುವ ರೀತಿಯಲ್ಲಿ ಸೇಡು ತೀರಿಸಿಕೊಂಡಳು.
ಆಕೆಯ ಮಾಜಿ ಪತಿ ಒಬ್ಬ ಉತ್ಸಾಹಿ ಸೈಕ್ಲಿಸ್ಟ್ ಆಗಿದ್ದು, ಅವರು ತಮ್ಮ ಸೈಕ್ಲಿಂಗ್ ಶಾರ್ಟ್ಸ್ ಅಡಿಯಲ್ಲಿ ಒಳ ಉಡುಪು ಧರಿಸುತ್ತಿರಲಿಲ್ಲ. ಇದನ್ನು ತಿಳಿದ ಅವಳು ಅವನ ಎಲ್ಲಾ ಸೈಕ್ಲಿಂಗ್ ಗೇರ್‌ಗಳ ಒಳಗೆ ಖಾರದ ಮೆಣಸಿನಕಾಯಿಯನ್ನು ಉಜ್ಜಿದಳು. ಅಷ್ಟೇ ಅಲ್ಲ, ಅವಳು ಶೌಚಾಲಯದಲ್ಲಿ ಮೂತ್ರ ವಿಸರ್ಜನೆ ಮಾಡಿ ಅವನ ಟೂತ್ ಬ್ರಷ್ ಅನ್ನು ಅದರಲ್ಲಿ ಅದ್ದುವ ಮೂಲಕ ತನ್ನ ಸೇಡು ತೀರಿಸಿಕೊಂಡಳಂತೆ.