ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ವಿಶ್ವದ ಅತಿ ಉದ್ದದ ಕೊಹ್ಲ್ರಾಬಿ ಬೆಳೆದು ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ ಮಲೇಷ್ಯಾದ ರೈತ

Man Sets Guinness World Record: ವ್ಯಕ್ತಿಯೊಬ್ಬ ವಿಶ್ವದ ಅತಿ ಉದ್ದದ ಕೊಹ್ಲ್ರಾಬಿಯನ್ನು ಬೆಳೆಯುವ ಮೂಲಕ ಗಿನ್ನಿಸ್ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ. ಮಲೇಷ್ಯಾದ ಗ್ರೆಗೊರಿ ಕೆಕೆ ಚೌ ಎಂಬುವವರು 2.320 ಮೀಟರ್ (7 ಅಡಿ 7.3 ಇಂಚು) ಉದ್ದದ ಕೊಹ್ಲ್ರಾಬಿಯನ್ನು ಬೆಳೆಸುವ ಮೂಲಕ ಈ ದಾಖಲೆಯನ್ನು ಸಾಧಿಸಿದ್ದಾರೆ.

ಕೌಲಲಂಪುರ: ಮಲೇಷ್ಯಾದ ವ್ಯಕ್ತಿಯೊಬ್ಬ ವಿಶ್ವದ ಅತಿ ಉದ್ದದ ಕೊಹ್ಲ್ರಾಬಿಯನ್ನು (ಗಡ್ಡೆ ತರಕಾರಿ) ಬೆಳೆಯುವ ಮೂಲಕ ಗಿನ್ನಿಸ್ ವಿಶ್ವ ದಾಖಲೆಗೆ (Guinness World Record) ಪಾತ್ರರಾಗಿದ್ದಾರೆ. ಗ್ರೆಗೊರಿ ಕೆಕೆ ಚೌ ಎಂಬಾತ ಈ ದಾಖಲೆಗೆ ಪಾತ್ರನಾದಾತ. ಗಿನ್ನಿಸ್ ವಿಶ್ವ ದಾಖಲೆಯ ಅಧಿಕೃತ ವೆಬ್‌ಸೈಟ್ ಪ್ರಕಾರ, ಗ್ರೆಗೊರಿ ಕೆಕೆ ಚೌ 2.320 ಮೀಟರ್ (7 ಅಡಿ 7.3 ಇಂಚು) ಉದ್ದದ ಕೊಹ್ಲ್ರಾಬಿಯನ್ನು (Kohlrabi) ಬೆಳೆಸುವ ಮೂಲಕ ಈ ದಾಖಲೆ ಬರೆದಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ (Viral Video).

2024ರ ಡಿಸೆಂಬರ್ 20ರಂದು ಸಿಂಗಾಪುರದ ನ್ಜೀ ಆನ್ ಪಾಲಿಟೆಕ್ನಿಕ್‌ನ ಲೈಫ್ ಸೈನ್ಸಸ್ ಮತ್ತು ಕೆಮಿಕಲ್ ಟೆಕ್ನಾಲಜಿ ಶಾಲೆಯಲ್ಲಿ ಚೌ ಈ ಸಾಧನೆಯನ್ನು ಮಾಡಿದವರು. ದಾಖಲೆ ಬರೆದ ಕೊಹ್ಲ್ರಾಬಿ ತರಕಾರಿಯು 11.05 ಕಿಲೋಗ್ರಾಂಗಳಷ್ಟು ತೂಕವಿತ್ತು. ಈ ಸಾಧನೆಯನ್ನು ಇನ್ನಷ್ಟು ಪ್ರಭಾವಶಾಲಿಯಾಗಿಸುವುದು ಅದಕ್ಕೆ ಬೇಕಾಗುವ ಸಮಯ ಮತ್ತು ಶ್ರಮ. ಚೌ ಕೊಹ್ಲ್ರಾಬಿಯನ್ನು ಬೆಳೆಸಲು ಮೂರು ವರ್ಷಗಳ ಕಾಲ ತೆಗೆದುಕೊಂಡರು. ಅದರ ಬೆಳವಣಿಗೆಯ ಪರಿಸ್ಥಿತಿಗಳು, ತಾಪಮಾನ ಮತ್ತು ಸಸ್ಯ ಪೋಷಣೆಯನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಿದರು ಎಂದು ವರದಿಯಾಗಿದೆ.

ವಿಡಿಯೊ ವೀಕ್ಷಿಸಿ:



ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ತಂಡವು ನಿಖರ ಪರಿಶೀಲನೆಯ ನಂತರ ಅಳತೆ ಮತ್ತು ತೂಕವನ್ನು ಅಧಿಕೃತವಾಗಿ ಪರಿಶೀಲಿಸಿತು. ಇದು ವಿಶ್ವದಲ್ಲಿ ಇದುವರೆಗೆ ಬೆಳೆದ ಅತಿ ಉದ್ದದ ಕೊಹ್ಲ್ರಾಬಿ ಎಂದು ಗುರುತಿಸಿತು. GWR ಪೋಸ್ಟ್‌ನಲ್ಲಿ, ಅತಿ ಉದ್ದದ ಕೊಹ್ಲ್ರಾಬಿ - 2.320 ಮೀಟರ್ (7 ಅಡಿ 7.3 ಇಂಚು) 🇲🇾 ಸಿಂಗಾಪುರದ ನ್ಜೀ ಆನ್ ಪಾಲಿಟೆಕ್ನಿಕ್‌ನ ಸ್ಕೂಲ್ ಆಫ್ ಲೈಫ್ ಸೈನ್ಸಸ್ ಮತ್ತು ಕೆಮಿಕಲ್ ಟೆಕ್ನಾಲಜಿಯಲ್ಲಿ ಗ್ರೆಗೊರಿ ಕೆಕೆ ಚೌ ಬೆಳೆದಿದ್ದಾರೆ ಎಂದು ಬರೆಯಲಾಗಿದೆ.

ಇದನ್ನೂ ಓದಿ: Viral Video: ಗಾಜಾ ಶಾಂತಿ ಶೃಂಗಸಭೆಯಲ್ಲಿ ಮೆಲೋನಿಯದ್ದೇ ಸದ್ದು; ಭಾರೀ ವೈರಲ್ ಆಯ್ತು ಇಟಲಿ ಪ್ರಧಾನಿಯ ವಿಡಿಯೊ

ಈ ಸುದ್ದಿಯು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದ್ದು, ಅಪರೂಪದ ಕಾಡು ಸಸ್ಯದ ಬಗ್ಗೆ ನೆಟ್ಟಿಗರಲ್ಲಿ ಕುತೂಹಲ ಮೂಡಿದೆ. ಅನೇಕ ಬಳಕೆದಾರರು ಯೋಜನೆಯ ವಿವರಗಳ ಬಗ್ಗೆ ಕಾಮೆಂಟ್‌ನಲ್ಲಿ ಪ್ರಶ್ನಿಸುತ್ತಿದ್ದರೆ, ಇತರರು ಅವರ ಸಾಧನೆಯಿಂದ ಖುಷಿಪಟ್ಟಿದ್ದಾರೆ.

ಅಂದಹಾಗೆ, ಕೊಹ್ಲ್ರಾಬಿಯನ್ನು ಹೆಚ್ಚಾಗಿ ಜರ್ಮನ್ ಟರ್ನಿಪ್ ಎಂದು ಕರೆಯಲಾಗುತ್ತದೆ. ಇದು ಎಲೆಕೋಸು ಕುಟುಂಬಕ್ಕೆ ಸೇರಿದ ತರಕಾರಿ. ಇದು ಬ್ರೊಕೊಲಿ, ಹೂಕೋಸು ಮತ್ತು ಎಲೆಕೋಸನ್ನು ಹೋಲುತ್ತದೆ. ಇದು ಕುರುಕಲು ಮತ್ತು ಸ್ವಲ್ಪ ಸಿಹಿಯಾಗಿರುತ್ತದೆ. ಕೊಹ್ಲ್ರಾಬಿಯನ್ನು ಹಸಿಯಾಗಿ ಹಾಗೆಯೇ ತಿನ್ನಬಹುದು ಅಥವಾ ಬೇಯಿಸಿ ತಿನ್ನಬಹುದು. ಇದು ವಿಟಮಿನ್ ಸಿ, ಫೈಬರ್ ಮತ್ತು ಪೊಟ್ಯಾಸಿಯಮ್‌ ಮೂಲಕ ಸಮೃದ್ಧವಾಗಿದೆ. ಇದು ಹಲವು ಪೌಷ್ಟಿಕಾಂಶಗಳನ್ನು ಹೊಂದಿದೆ.