ನೋಯ್ಡಾ: ಸ್ಕೂಟರ್ ಅಪಘಾತದ ನಂತರ ಮಹಿಳೆಯೊಬ್ಬಳು ವ್ಯಕ್ತಿಯೊಬ್ಬರ ಶರ್ಟ್ ಹಿಡಿದು ಎಳೆದಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿದ್ದು, ನೋಯ್ಡಾದಲ್ಲಿ (Noida) ಈ ಘಟನೆ ನಡೆದಿದೆ. ರಸ್ತೆಬದಿಯಲ್ಲಿ ಜನಸಮೂಹ ಸೇರುತ್ತಿದ್ದರೂ ಕ್ಯಾರೇ ಎನ್ನದ ಮಹಿಳೆಯು, ನೆಲದ ಮೇಲೆ ಕುಳಿತಿದ್ದ ವ್ಯಕ್ತಿಯನ್ನು ಶರ್ಟ್ ಹಿಡಿದು ಎಳೆದು ಹೊಡೆಯುತ್ತಿರುವುದು ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ನೋಡುಗರು ಮಧ್ಯಪ್ರವೇಶಿಸುವ ಬದಲು ತಮ್ಮ ಫೋನ್‌ಗಳಲ್ಲಿ ವಿಡಿಯೊ ರೆಕಾರ್ಡ್ ಮಾಡಿದ್ದಾರೆ.
ನೋಯ್ಡಾದಲ್ಲಿ ಸ್ಕೂಟರ್ ಅಪಘಾತದ ನಂತರ ಮಹಿಳೆಯೊಬ್ಬರು ಪುರುಷನನ್ನು ಅವನ ಶರ್ಟ್ ಹಿಡಿದು ಎಳೆಯುತ್ತಿರುವುದು ಕಂಡುಬಂದಿದೆ. ಯಾರೂ ಕೂಡ ಇದನ್ನು ತಡೆಯಲು ಮುಂದೆ ಬಂದಿಲ್ಲ. ಎಲ್ಲರೂ ವಿಡಿಯೊ ಮಾಡುವಲ್ಲಿ ನಿರತರಾಗಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದಂತೆ, ಬಳಕೆದಾರರು ಇದನ್ನು ಅತಿರೇಕದ ವರ್ತನೆ ಎಂದು ಕರೆದಿದ್ದಾರೆ.
ಯಾರನ್ನಾದರೂ ಕೂದಲು ಹಿಡಿದು ಎಳೆದುಕೊಂಡು ಹೋಗುವುದು ಕ್ರೂರ ಮತ್ತು ಕಾನೂನುಬಾಹಿರ. ಪಕ್ಕದಲ್ಲಿ ನಿಂತವರು ಈ ಅತಿರೇಕದ ವರ್ತನೆಯನ್ನು ತಡೆಯುವ ಬದಲು ಅಥವಾ ಪೊಲೀಸರಿಗೆ ಕರೆ ಮಾಡುವ ಬದಲು ಚಿತ್ರೀಕರಣ ಮಾಡುತ್ತಿರುವುದು ನಾವು ಎಷ್ಟು ನಿರ್ದಯರಾಗಿದ್ದೇವೆ ಎಂಬುದನ್ನು ತೋರಿಸುತ್ತದೆ. ಆ ಮಹಿಳೆಯನ್ನು ತಕ್ಷಣ ಬಂಧಿಸಬೇಕು ಮತ್ತು ಸಂಬಂಧಪಟ್ಟ ಕಾನೂನಿನ ಅಡಿಯಲ್ಲಿ ಶಿಕ್ಷಿಸಬೇಕು. ನಿಂತು ನೋಡುತ್ತಿರುವವರು ತಮ್ಮ ಬಗ್ಗೆ ನಾಚಿಕೆಪಡಬೇಕು ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.
ವಿಡಿಯೊ ವೀಕ್ಷಿಸಿ:
ಇತ್ತೀಚಿನ ದಿನಗಳಲ್ಲಿ ನಿಜವಾದ ಪುರುಷರು ಎಲ್ಲಿದ್ದಾರೆ? ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ನಿಜ ಜೀವನದಲ್ಲಿ ಸಹಾಯ ಮಾಡುವುದಕ್ಕಿಂತ ವೈರಲ್ ಆಗುವುದರ ಬಗ್ಗೆ ಜನರು ಹೆಚ್ಚು ಕಾಳಜಿ ವಹಿಸುತ್ತಾರೆ ಎಂದು ಅನಿಸುತ್ತದೆ ಎಂದು ಮಗದೊಬ್ಬರು ಬರೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪುರುಷರು ಏಕೆ ದುರ್ಬಲರಾಗಿದ್ದಾರೆ? ನೀವು ನಿಮ್ಮನ್ನು ದಬ್ಬಾಳಿಕೆಯಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗುವುದಿಲ್ಲವೆ ಎಂದು ವ್ಯಕ್ತಿಯೊಬ್ಬರು ಪ್ರಶ್ನಿಸಿದ್ದಾರೆ. ನೋಯ್ಡಾ ಪೊಲೀಸರನ್ನು ಟ್ಯಾಗ್ ಮಾಡಿದ ಬಳಕೆದಾರರೊಬ್ಬರು, ಮಹಿಳೆಯರಿಗೆ ಕಾನೂನಿನ ನಿಯಮ ಇಲ್ಲವೇ? ಇದೇನಾ ಲಿಂಗ ಸಮಾನತೆ? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
ಈ ಘಟನೆ ನೋಯ್ಡಾದಲ್ಲಿ ನಡೆದ ರಸ್ತೆ ಗಲಭೆ ಪ್ರಕರಣಗಳ ಸರಣಿಯ ನಂತರ ನಡೆದಿದೆ. ಜುಲೈನಲ್ಲಿ, ನೋಯ್ಡಾದ ಸೆಕ್ಟರ್ 58 ರಲ್ಲಿ ಮೂವರು ವ್ಯಕ್ತಿಗಳು ತಮ್ಮ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದರು. ಸಿಸಿಟಿವಿ ದೃಶ್ಯಗಳಲ್ಲಿ ಸೆಡಾನ್ ಮುಖ್ಯ ರಸ್ತೆಯಿಂದ ಸರ್ವಿಸ್ ಲೇನ್‌ಗೆ ಪ್ರವೇಶಿಸುತ್ತಿರುವುದನ್ನು ತೋರಿಸುತ್ತದೆ. ಆಗ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಎಸ್‌ಯುವಿ ಅದಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಸಿಟ್ಟಿಗೆದ್ದ ಕಾರಿನಲ್ಲಿದ್ದವರು ಆ ವ್ಯಕ್ತಿಯ ಮೇಲೆ ದಾಳಿ ಮಾಡಿ ಹೊಡೆದಿದ್ದಾರೆ. ದಾರಿಹೋಕನೊಬ್ಬ ಮಧ್ಯಪ್ರವೇಶಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಹಲ್ಲೆ ಮಾಡುವುದನ್ನು ಮುಂದುವರಿಸಿದ್ದಾರೆ. ನಂತರ ಸಂತ್ರಸ್ತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಹಲ್ಲೆ ಮಾಡಿದವರನ್ನು ಪೊಲೀಸರು ಬಂಧಿಸಿದರು.
ಮೇ ತಿಂಗಳಲ್ಲಿ, ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇಯಲ್ಲಿ ಬಿಎಂಡಬ್ಲ್ಯು ಕಾರಿನಲ್ಲಿ ಬಂದ ನಾಲ್ವರು ವ್ಯಕ್ತಿಗಳು ಫೋರ್ಡ್ ಇಕೋಸ್ಪೋರ್ಟ್ ಕಾರನ್ನು ಹಲವಾರು ಕಿಲೋಮೀಟರ್‌ಗಳವರೆಗೆ ಬೆನ್ನಟ್ಟಿ, ಆಸ್ಪತ್ರೆಗೆ ಪ್ರಯಾಣಿಸುತ್ತಿದ್ದ ಕುಟುಂಬದ ಮೇಲೆ ಬಾಟಲಿಗಳನ್ನು ಎಸೆದಿದ್ದರು.
ಇದನ್ನೂ ಓದಿ: Viral News: AC ರೂಂನಲ್ಲಿ 4 ತಿಂಗಳ ಮಗುವಿನ ಶವ ಪತ್ತೆ; ಹಸುಗೂಸನ್ನೇ ಕೊಂದಳಾ ಪಾಪಿ ತಾಯಿ?