ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಹಣ ತುಂಬಿದ ಬ್ಯಾಗ್‍ನೊಂದಿಗೆ ಗ್ರೇಟ್ ಎಸ್ಕೇಪ್! ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ ಸೆರೆ

Youth Steals Bag Full of Cash: ಕಳ್ಳನೊಬ್ಬ ಬ್ಯಾಂಕ್‍ನಲ್ಲಿ ಗ್ರಾಹಕರ ಗಮನಕ್ಕೆ ಬಾರದೆ ಅವರ ಹಣ ತುಂಬಿದ ಬ್ಯಾಗ್ ಅನ್ನು ದೋಚಿ ಎಸ್ಕೇಪ್ ಆಗಿರುವ ಘಟನೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಡೆದಿದೆ. ಸಿಸಿ ಕ್ಯಾಮರಾದಲ್ಲಿ ಕಳ್ಳನ ಕರಾಮತ್ತು ಸೆರೆಯಾಗಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಹಣ ತುಂಬಿದ ಬ್ಯಾಗ್‍ನೊಂದಿಗೆ ಕಳ್ಳ ಗ್ರೇಟ್ ಎಸ್ಕೇಪ್!

-

Priyanka P Priyanka P Sep 13, 2025 6:35 PM

ಭೋಪಾಲ್: ಬ್ಯಾಂಕ್‌ವೊಂದರಲ್ಲಿ ಕಳ್ಳನೊಬ್ಬ ಹಣ ತುಂಬಿದ್ದ ಬ್ಯಾಗ್ ಅನ್ನು ದೋಚಿ ಎಸ್ಕೇಪ್ ಆಗಿರುವ ಘಟನೆ ಮಧ್ಯಪ್ರದೇಶ (Madhya Pradesh) ದ ಬೇತುಲ್ ಜಿಲ್ಲೆಯಲ್ಲಿ ನಡೆದಿದೆ. ದುಷ್ಕರ್ಮಿಯೊಬ್ಬ ಗ್ರಾಹಕರ ಗಮನಕ್ಕೆ ಬಾರದೆ ಅವರ ಹಣ ತುಂಬಿದ ಬ್ಯಾಗ್ ಅನ್ನು ದೋಚಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ವೈರಲ್ (Viral Video) ಆಗಿದೆ.

ವಿಡಿಯೊದಲ್ಲಿ, ನೀಲಿ ಟಿ-ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ ಯುವಕನೊಬ್ಬನನ್ನು ಕಾಣಬಹುದು. ಅವನು ಸುಖಾಸುಮ್ಮನೆ ಅತ್ತಿದ್ದಿಂತ, ಇತ್ತಿಂದತ್ತ ಅಲೆದಾಡಿದ್ದಾನೆ. ನಂತರ ಅವನು ಮೇಜಿನ ಕೆಳಗೆ ಒಂದು ಚೀಲವನ್ನು ನೋಡುತ್ತಾನೆ. ಅದರಲ್ಲಿ ಗ್ರಾಹಕರ ನಗದು ಇತ್ತು ಎಂದು ಹೇಳಲಾಗುತ್ತದೆ. 30 ಸೆಕೆಂಡುಗಳ ಒಳಗೆ ಅವನು ಬ್ಯಾಗ್ ಎತ್ತಿಕೊಂಡು ಬ್ಯಾಂಕಿನಿಂದ ಪರಾರಿಯಾಗಿದ್ದಾನೆ.

ಇನ್ನು ಹಣ ಕದ್ದ ವಿಷಯ ಗಮನಕ್ಕೆ ಬಂದ ತಕ್ಷಣ, ಪೊಲೀಸರಿಗೆ ದೂರು ನೀಡಲಾಗಿದ್ದು, ಪ್ರಕರಣದ ತನಿಖೆ ಆರಂಭಿಸಲಾಗಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಸಾಕ್ಷಿಯಾಗಿ ಸಲ್ಲಿಸಲಾಗಿದ್ದು, ಆರೋಪಿಯನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

ವಿಡಿಯೊ ವೀಕ್ಷಿಸಿ:

ರಾಜ್ಯದಲ್ಲಿ ಪದೇ ಪದೆ ಬ್ಯಾಂಕ್ ಕಳ್ಳತನ

ಆಗಸ್ಟ್ ತಿಂಗಳಲ್ಲಿ, ಮಧ್ಯಪ್ರದೇಶದ ಜಬಲ್ಪುರದಲ್ಲಿ ಖಾಸಗಿ ಹಣಕಾಸು ಬ್ಯಾಂಕಿನಲ್ಲಿ ದುಷ್ಕರ್ಮಿಗಳ ಗುಂಪೊಂದು ಭಾರಿ ದರೋಡೆ ನಡೆಸಿ 14 ಕೆಜಿ ಚಿನ್ನ ಮತ್ತು 5 ಲಕ್ಷ ರೂ. ನಗದನ್ನು ದೋಚಿತ್ತು. ಆರೋಪಿಗಳು ಹಾಡಹಗಲೇ ಬ್ಯಾಂಕ್‍ಗೆ ನುಗ್ಗಿ ಬಂದೂಕು ತೋರಿಸಿ ದರೋಡೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ, ಆರೋಪಿಗಳನ್ನು ಬಂಧಿಸಲಾಯಿತು.

ವಿಡಿಯೊ ವೀಕ್ಷಿಸಿ:



ಇತ್ತೀಚೆಗೆ ದೆಹಲಿಯ ಕೆಂಪು ಕೋಟೆಯಲ್ಲಿ ಆಯೋಜಿಸಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಒಂದು ಕೋಟಿ ಮೌಲ್ಯದ ಚಿನ್ನ, ವಜ್ರ-ಖಚಿತ 'ಕಲಶ' ಕಳವು 1 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ರತ್ನ-ಖಚಿತ ಕಲಶವೊಂದು ಕಳವಾಗಿತ್ತು. ಈ ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಇತರ ಹಲವಾರು ವಿಐಪಿಗಳು ಭಾಗವಹಿಸಿದ್ದರು. ಖದೀಮ ಈ ಕಲಶವನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಜೈನ ಅರ್ಚಕನ ವೇಷದಲ್ಲಿ ಬಂದು ಖದೀಮ ಕಳ್ಳತನ ಮಾಡಿದ್ದ.

ಇದನ್ನೂ ಓದಿ: Viral Video: ತನಿಖಾಧಿಕಾರಿಯನ್ನೇ ಜೈಲಿಗಟ್ಟಿದ ಕೋರ್ಟ್‌- ಅಷ್ಟಕ್ಕೂ ನಡೆದಿದ್ದೇನು?