ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Heart Attack: ಕೆಂಭಾವಿಯಲ್ಲಿ ಘೋರ ಘಟನೆ; ಒಂದೇ ದಿನ ಹೃದಯಾಘಾತದಿಂದ ಅಣ್ಣ-ತಮ್ಮ ಸಾವು!

Kembhavi News: ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದಲ್ಲಿ ಘಟನೆ ನಡೆದಿದೆ. ಒಂದೇ ಮನೆಯಲ್ಲಿ ಒಂದು ಗಂಟೆ ಅಂತರದಲ್ಲಿ ಇಬ್ಬರು ಸಹೋದರರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದರಿಂದ ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದ್ದು, ಆಕ್ರಂದನ ಮುಗಿಲುಮುಟ್ಟಿದೆ. ಇಬ್ಬರಿಗೆ ಒಂದೇ ದಿನ ಹೃದಯಾಘಾತವಾಗಿದ್ದರಿಂದ ಪಟ್ಟಣದ ಜನರೂ ಆತಂಕಗೊಂಡಿದ್ದಾರೆ.

ಕೆಂಭಾವಿಯಲ್ಲಿ ಒಂದೇ ದಿನ ಹೃದಯಾಘಾತದಿಂದ ಅಣ್ಣ-ತಮ್ಮ ಸಾವು!

-

Prabhakara R Prabhakara R Sep 1, 2025 9:47 PM

ಯಾದಗಿರಿ: ಹೃದಯಾಘಾತದಿಂದ ಒಂದೇ ದಿನ ಅಣ್ಣ-ತಮ್ಮ ಸಾವಿಗೀಡಾಗಿರುವ ಘೋರ ಘನಟನೆ ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದಲ್ಲಿ ನಡೆದಿದೆ. ಷಂಶುದ್ದಿನ್‌ ಎನ್. ಪೇಶಮಾಮ್ (47), ಇರ್ಫಾನ್ ಎನ್. ಪೇಶಮಾಮ್ (43) ಮೃತ ದುರ್ದೈವಿಗಳು. ಸೋಮವಾರ ಬೆಳಗ್ಗೆ ಹಿರಿಯ ಸಹೋದರ ಷಂಶುದ್ದಿನ್ ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾರೆ. ಇಡೀ ಕುಟುಂಬ ಶೋಕದಲ್ಲಿರುವಾಗ ಮೃತ ಷಂಶುದ್ದಿನ್‌ ಅವರ ಕಿರಿಯ ಸಹೋದರ ಇರ್ಫಾನ್‌ ಕೂಡ ಹೃದಯಾಘಾತಕ್ಕೊಳಪಟ್ಟು ಸಾವನ್ನಪ್ಪಿದ್ದಾರೆ.

ಒಂದೇ ಮನೆಯಲ್ಲಿ ಒಂದೆ ಗಂಟೆ ಅಂತರದಲ್ಲಿ ಇಬ್ಬರು ಸಹೋದರರು ಹೃದಯಾಘಾತದಿಂದ ಮೃತಪಟ್ಟಿದ್ದರಿಂದ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸಹೋದರರಿಬ್ಬರ ದಿಢೀರ್ ಅಗಲಿಕೆಯಿಂದ ಪೇಶಮಾಮ್ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದ್ದು, ದುಃಖ ಮಡುಗಟ್ಟಿದೆ.

ಮೃತರು ತಂದೆ ನೂರುದ್ದೀನ್ ಪೇಶಮಾಮ್‌, ತಾಯಿ ಝುಲೇಖಾ ಬೇಗಂ, ಒಬ್ಬ ಸಹೊದರ ಹಾಗೂ ಪತ್ನಿ ಮಕ್ಕಳೂ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ಅಂತ್ಯಕ್ರಿಯೆ ಸೋಮವಾರ ಸಾಯಂಕಾಲ ಕೆಂಭಾವಿಯ ಖಬರಸ್ತಾನದಲ್ಲಿ ಇಸ್ಲಾಮ್ ಧರ್ಮದ ಸಂಪ್ರದಾಯದಂತೆ ನಡೆದಿದೆ.

ಈ ಸುದ್ದಿಯನ್ನೂ ಓದಿ | BJP Dharmasthala Chalo: ಧರ್ಮಸ್ಥಳ ವಿರುದ್ಧದ ಷಡ್ಯಂತ್ರದಲ್ಲಿ ವಿದೇಶಿ ಶಕ್ತಿಗಳೂ ಇವೆ, NIA ತನಿಖೆ ಆಗಬೇಕು: ಜನಾರ್ದನ ರೆಡ್ಡಿ ಆಗ್ರಹ

ಲಿವ್‌ ಇನ್‌ ಗೆಳತಿಯ ಮೇಲೆ ಪೆಟ್ರೋಲ್‌ ಸುರಿದು ಸುಟ್ಟು ಕೊಂದ ಸಂಶಯಪಿಶಾಚಿ!

hulimavu murder case

ಬೆಂಗಳೂರು: ಅನೈತಿಕ ಸಂಬಂಧದ (illcit relationship) ಶಂಕೆಯಿಂದ ವ್ಯಕ್ತಿಯೋರ್ವ ತನ್ನ ಲಿವ್ ಇನ್ ಗೆಳತಿಯನ್ನು ಅಟ್ಟಿಸಿಕೊಂಡು ಹೋಗಿ ಪೆಟ್ರೋಲ್ ಸುರಿದು ಸುಟ್ಟುಹಾಕಿರುವ (Murder case) ಘೋರ ಘಟನೆ ಬೆಂಗಳೂರು (Bengaluru Crime nws) ನಗರದ ಹೊರವಲಯದ ಹುಳಿಮಾವು (Hulimavu) ಬಳಿ ನಡೆದಿದೆ. ಮೃತ ದುರ್ದೈವಿ ಮಹಿಳೆಯನ್ನು ವನಜಾಕ್ಷಿ (26) ಎಂದು ಗುರುತಿಸಲಾಗಿದ್ದು, ಸಂಶಯಪಿಶಾಚಿ ಆರೋಪಿ ವಿಠ್ಠಲ (52) ಎಂದು ತಿಳಿದುಬಂದಿದೆ.

ವಿಟ್ಠಲ ಕ್ಯಾಬ್‌ ಚಾಲಕನಾಗಿದ್ದ. ಮಳೆನಲ್ಲಸಂದ್ರದಲ್ಲಿ ಕಳೆದ ಮೂರು ವರ್ಷಗಳಿಂದ ಇಬ್ಬರು ಲಿವಿಂಗ್ ಟುಗೆದರ್‌ನಲ್ಲಿದ್ದರು. ಆದರೆ ಇತ್ತೀಚೆಗೆ ಮೃತ ವನಜಾಕ್ಷಿ ಬೇರೊಬ್ಬ ವ್ಯಕ್ತಿಯ ಜೊತೆಗೆ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿ ವಿಠ್ಠಲನಿಗೆ ಅನುಮಾನ ಮೂಡಿತ್ತು. ಇದರಿಂದಾಗಿ ವಿಠ್ಠಲ ಆಕೆಯನ್ನು ಫಾಲೋ ಮಾಡಲು ಶುರು ಮಾಡಿದ್ದ. ಇದೇ ಸಮಯದಲ್ಲಿ ವನಜಾಕ್ಷಿ ಬೇರೊಬ್ಬ ವ್ಯಕ್ತಿಯ ಜೊತೆಗೆ ಕಾರಿನಲ್ಲಿ ಹೋಗುತ್ತಿರುವುದನ್ನು ಕಂಡು ಕೋಪಗೊಂಡಿದ್ದ.

ಆಕೆಯ ಕಾರನ್ನು ಹಿಂಬಾಲಿಸಿಕೊಂಡು ಹೋಗಿ ಅಡ್ಡಗಟ್ಟಿದ್ದ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಗಿ ಆರೋಪಿ ತನ್ನ ಕಾರಿನಲ್ಲಿದ್ದ 5 ಲೀಟರ್ ಪೆಟ್ರೋಲ್ ತೆಗೆದು ವನಜಾಕ್ಷಿ ಮೇಲೆ ಸುರಿಯಲು ಮುಂದಾದ. ಇದರಿಂದ ಭಯಭೀತಳಾದ ವನಜಾಕ್ಷಿ ಕಾರಿನಿಂದ ಇಳಿದು ಅಲ್ಲಿಂದ ಓಡಿಹೋಗಿದ್ದಾಳೆ. ಆದರೆ ಆಕೆಯನ್ನು ಬಿಡದ ಆರೋಪಿ ಅಟ್ಟಿಸಿಕೊಂಡು ಹೋಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ.

ತೀವ್ರವಾಗಿ ಸುಟ್ಟು ಗಾಯಗಳಾಗಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು (ಸೆ.1) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಈ ಸಂಬಂಧ ಹುಳಿಮಾವು ಪೊಲೀಸರು ಆರೋಪಿ ವಿಠ್ಠಲನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Murder Case: ತಲ್ವಾರ್‌ನಿಂದ ಕೊಚ್ಚಿ ಬರ್ಬರವಾಗಿ ವೃದ್ಧನ ಕೊಲೆ