ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕಾಮನ್ವೆಲ್ತ್‌ ಆತಿಥ್ಯಕ್ಕಾಗಿ ಭಾರತ vs ನೈಜೀರಿಯಾ ಪೈಪೋಟಿ

2030 Commonwealth Games: ಭಾರತವು ಇತ್ತೀಚಿನ ಕ್ರೀಡಾ ಯಶಸ್ಸಿನಿಂದ ಈಗಾಗಲೇ ಮಿಂಚುತ್ತಿರುವುದರಿಂದ, 2030 ರ ಕ್ರೀಡಾಕೂಟವನ್ನು ಆಯೋಜಿಸುವುದು ದೇಶಾದ್ಯಂತದ ಯುವ ಕ್ರೀಡಾಪಟುಗಳು ಮತ್ತು ಕ್ರೀಡಾ ಅಭಿಮಾನಿಗಳಿಗೆ ದಿಕ್ಕನ್ನೇ ಬದಲಾಯಿಸಬಹುದು. ನೈಜೀರಿಯಾ ಕೂಡ ತನ್ನ ಅದ್ಭುತ ಪ್ರತಿಭೆ ಮತ್ತು ಕ್ರೀಡೆಯ ಮೇಲಿನ ಉತ್ಸಾಹಕ್ಕೆ ಹೆಸರುವಾಸಿಯಾಗಿದೆ.

ಕಾಮನ್ವೆಲ್ತ್‌ ಆತಿಥ್ಯಕ್ಕಾಗಿ ಭಾರತ vs ನೈಜೀರಿಯಾ ಪೈಪೋಟಿ

-

Abhilash BC Abhilash BC Sep 2, 2025 12:06 PM

ಲಂಡನ್‌: 2030ರ ಕಾಮನ್ವೆಲ್ತ್‌(2030 Commonwealth Games) ಕ್ರೀಡೆಗಳ ಆತಿಥ್ಯದ ವಹಿಸಲು ಭಾರತ(India)ದ ಜತೆಗೆ ನೈಜೀರಿಯಾ(Nigeria) ಕೂಡ ಅಧಿಕೃವಾಗಿ ಬಿಡ್‌ ಸಲ್ಲಿಸಿದೆ. ಹೀಗಾಗಿ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಲು ಉಭಯ ದೇಶಗಳ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ಎರಡೂ ದೇಶಗಳು ತಮ್ಮ ಔಪಚಾರಿಕ ಪ್ರಸ್ತಾವನೆಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸಿವೆ ಎಂದು ಕಾಮನ್‌ವೆಲ್ತ್ ಒಕ್ಕೂಟ ಮಂಗಳವಾರ ಘೋಷಿಸಿದೆ.

ಕಾಮನ್‌ವೆಲ್ತ್ ಕ್ರೀಡಾ ಅಧ್ಯಕ್ಷ ಡಾ. ಡೊನಾಲ್ಡ್ ರುಕರೆ ಈ ಪ್ರಸ್ತಾಪಗಳನ್ನು "ರೋಮಾಂಚಕಾರಿ" ಎಂದು ಕರೆದರು ಮತ್ತು ಎರಡೂ ರಾಷ್ಟ್ರಗಳ ದಿಟ್ಟ ದೃಷ್ಟಿಕೋನವನ್ನು ಶ್ಲಾಘಿಸಿದರು. "ಭಾರತ ಮತ್ತು ನೈಜೀರಿಯಾ ಕ್ರೀಡಾ ಶಕ್ತಿ ಕೇಂದ್ರಗಳಾಗಿವೆ" ಎಂದು ಅವರು ಹೇಳಿದರು.

ತಜ್ಞರ ಮೌಲ್ಯಮಾಪನ ಆಯೋಗವು ಈಗ ಬಿಡ್‌ಗಳನ್ನು ಪರಿಶೀಲಿಸುತ್ತದೆ ಮತ್ತು ಈ ತಿಂಗಳ ಕೊನೆಯಲ್ಲಿ ಲಂಡನ್‌ನಲ್ಲಿ ಎರಡೂ ದೇಶಗಳೊಂದಿಗೆ ಸಭೆ ಸೇರುತ್ತದೆ. ಅಂತಿಮ ನಿರ್ಧಾರವನ್ನು ನವೆಂಬರ್‌ನಲ್ಲಿ ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆಯುವ ಕಾಮನ್‌ವೆಲ್ತ್ ಕ್ರೀಡಾ ಸಾಮಾನ್ಯ ಸಭೆಯಲ್ಲಿ ತೆಗೆದುಕೊಳ್ಳಲಾಗುತ್ತದೆ.

ಇದನ್ನೂ ಓದಿ 2030ರ ಕಾಮನ್‌ವೆಲ್ತ್ ಗೇಮ್ಸ್‌ ಆತಿಥ್ಯಕ್ಕೆ ಅಧಿಕೃತ ಬಿಡ್‌ ಸಲ್ಲಿಸಿದ ಭಾರತ

ಭಾರತವು ಇತ್ತೀಚಿನ ಕ್ರೀಡಾ ಯಶಸ್ಸಿನಿಂದ ಈಗಾಗಲೇ ಮಿಂಚುತ್ತಿರುವುದರಿಂದ, 2030 ರ ಕ್ರೀಡಾಕೂಟವನ್ನು ಆಯೋಜಿಸುವುದು ದೇಶಾದ್ಯಂತದ ಯುವ ಕ್ರೀಡಾಪಟುಗಳು ಮತ್ತು ಕ್ರೀಡಾ ಅಭಿಮಾನಿಗಳಿಗೆ ದಿಕ್ಕನ್ನೇ ಬದಲಾಯಿಸಬಹುದು. ನೈಜೀರಿಯಾ ಕೂಡ ತನ್ನ ಅದ್ಭುತ ಪ್ರತಿಭೆ ಮತ್ತು ಕ್ರೀಡೆಯ ಮೇಲಿನ ಉತ್ಸಾಹಕ್ಕೆ ಹೆಸರುವಾಸಿಯಾಗಿದೆ. ಭಾರತ ಒಮ್ಮೆ ಮಾತ್ರ ಕಾಮನ್‌ವೆಲ್ತ್ ಆತಿಥ್ಯ ವಹಿಸಿತ್ತು. ಅದು 2010ರಲ್ಲಿ.